ನಾವಿಂದು ನಿಮಗೆ ರಿಜಿಸ್ಟರ್ ಇಲಾಖೆಯಲ್ಲಿ ನೋಂದಣಿ ಆಗಿರುವ ಕರಪತ್ರ ಅಥವಾ ಸೇಲ್ ಡೀಡ್ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಹೇಗೆ ತಿಳಿಯುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಅನ್ನು ತೆರೆಯಬೇಕು ಅಥವಾ ನಿಮ್ಮ ಬಳಿ ಕಂಪ್ಯೂಟರ್ ಇದ್ದರೆ ಕಂಪ್ಯೂಟರನಲ್ಲಿ ತೆರೆಯಬಹುದು. ಅಲ್ಲಿ ನೀವು ಕಾವೇರಿ ಆನ್ಲೈನ್ ಎಂದು ಟೈಪ್ ಮಾಡಬೇಕು ನಂತರ ಅದನ್ನು ಸರ್ಚ್ ಮಾಡಬೇಕು. ಕೆಳಗಡೆ ನಿಮಗೆ ಒಂದು ವೆಬ್ಸೈಟ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ ಈಗಾಗಲೇ ನೀವು ರಿಜಿಸ್ಟರ್ ಮಾಡಿಕೊಂಡಿದ್ದರೆ ಯೂಸರ್ ನೇಮ್ ಪಾಸ್ವರ್ಡ್ ಅನ್ನು ಹಾಕಿ ಲೋಗಿನ್ ಆಗಬಹುದು ಹೊಸದಾಗಿ ರಿಜಿಸ್ಟರ್ ಆಗುವುದಿದ್ದರೆ ನೀವು ರಿಜಿಸ್ಟ್ರೇಷನ್ ನೀವ್ ಯೂಸರ್ ಮೇಲೆ ಕ್ಲಿಕ್ ಮಾಡಬೇಕು ಆಗ ಅಲ್ಲಿ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಕೇಳುವ ಮಾಹಿತಿಯನ್ನು ತುಂಬಬೇಕು ಆಗ ನಿಮಗೆ ಪಾಸ್ವರ್ಡ್ ಸಿಗುತ್ತದೆ ಅದನ್ನು ತೆಗೆದುಕೊಂಡು ಮತ್ತೆ ಮೆನ್ ಪೇಜ್ ಗೆ ಬಂದು ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ ಅದನ್ನು ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಕಾವೇರಿ ಆನ್ಲೈನ್ ಸರ್ವಿಸ್ ನ ಎಲ್ಲ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿ ನೀವು ಸರ್ವಿಸಸ್ ಎನ್ನುವುದು ಇರುತ್ತದೆ ಅದರ ಕೆಳಗಡೆ ಆನ್ಲೈನ್ ಸಿಸಿ ಮೇಲೆ ಕ್ಲಿಕ್ ಮಾಡಬೇಕ
ನಿಮ್ಮ ಮುಂದೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಕೆಲವು ಮಾಹಿತಿಯನ್ನು ಕೇಳುತ್ತದೆ ನೀವು ನಿಮ್ಮ ಬಳಿ ಇರುವ ಯಾವುದಾದರೂ ರಿಜಿಸ್ಟ್ರೇಷನ್ ಆಗಿರುವ ನಕಲು ಪ್ರತಿಯನ್ನು ತೆಗೆದುಕೊಂಡು ಅಲ್ಲಿ ಕೇಳುವ ಮಾಹಿತಿಯನ್ನು ತುಂಬಬೇಕು ಅಲ್ಲಿ ಮೊದಲು ಡಾಕ್ಯುಮೆಂಟ್ ರಿಜಿಸ್ಟ್ರೇಷನ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ಜಿಲ್ಲೆ ಮತ್ತು ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಡಾಕ್ಯುಮೆಂಟ್ ನಂಬರ್ ಕೇಳುತ್ತದೆ ನೀವು ರಿಜಿಸ್ಟರ್ ಮಾಡಿಕೊಂಡ ದಿನ ನಿಮಗೆ ಆ ನಂಬರ್ ಕೊಟ್ಟಿರುತ್ತಾರೆ. ಆ ನಂಬರ್ ಹಾಕ ಬೇಕು ನಂತರ ಬುಕ್ 1 ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ರಿಜಿಸ್ಟ್ರೇಷನ್ ಮಾಡಿಕೊಂಡ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ರಿಜಿಸ್ಟ್ರೇಷನ್ ಪ್ರತಿ ಕಾಣಿಸುತ್ತದೆ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು. ನಂತರ ನಿಮ್ಮ ಬಳಿ ಈಗಾಗಲೇ ಇರುವ ರಿಜಿಸ್ಟ್ರೇಷನ್ ಪತ್ರವನ್ನು ಮತ್ತು ಇದನ್ನು ತುಲನೆ ಮಾಡಿ ನೋಡಬಹುದು. ಇದರಿಂದ ಯಾವುದೇ ರೀತಿ ಮೋಸ ಹೋಗುವುದಕ್ಕೆ ಅವಕಾಶ ಇರುವುದಿಲ್ಲ. ಈ ರೀತಿಯಾಗಿ ರಿಜಿಸ್ಟರ್ ಇಲಾಖೆಯಲ್ಲಿ ನೋಂದಣಿ ಆಗಿರುವ ಕರಪತ್ರ ಆಸ್ತಿ ಪತ್ರ ಅಥವಾ ಸೇಲ್ ಡೀಡ್ ಗಳನ್ನೂ ಅವು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಗುರುತು ಹಿಡಿಯಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.