ಕೋಳಿಯ ಲಿವರ್ ನಿಂದ ಏನೆಲ್ಲ ಪ್ರಯೋಜನಗಳು ಇವೆ ಅನ್ನೋದನ್ನ ತಿಳಿಯೋಣ.ತುಂಬಾ ಜನರು ಕೋಳಿಯನ್ನ ತಿನ್ನೋಕೆ ಇಷ್ಟ ಪಡುತ್ತಾರೆ. ಏಕೆಂದರೆ ಚಿಕನ್ ತಿನ್ನುವುದರಿಂದ ನಾಲಿಗೆಗೆ ತುಂಬಾ ರುಚಿ ಸಿಗತ್ತೆ. ರಿಸರ್ಚ್ ನ ಪ್ರಕಾರ ಚಿಕನ್ ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾ ಎನರ್ಜಿ ಸಿಗುತ್ತದೆ. ಏಕೆಂದರೆ ಇದರಲ್ಲಿ ಪ್ರೋಟೀನ್ಸ್, ವಿಟಾಮಿನ್ ಗಳಂತಹ ಖನಿಜ ಇದೆ ಹಾಗೂ ಇವು ನಮ್ಮ ಶರೀರಕ್ಕೆ ಅಗತ್ಯವಾಗಿದೆ. ಒಡೆ ತರ ಚಿಕನ್ ನ ಲಿವರ್ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೋಳಿಯ ಲಿವರ್ ನಲ್ಲಿ ಕ್ಯಾಲ್ಸಿಯಂ, ಫೈಬರ್, ಐರನ್ ಹೇರಳವಾಗಿದ್ದು ತುಂಬಾ ಸತ್ವವನ್ನು ಒಳಗೊಂಡಿದೆ. ತುಂಬಾ ಜನರು ಚಿಕನ್ ಲಿವರ್ ತಿನ್ನೋಕೆ ಇಷ್ಟ ಪಡಲ್ಲ ಏಕೆಂದರೆ ಇದರ ಟೇಸ್ಟ್ ಅಷ್ಟು ರುಚಿಯಾಗಿ ಇರಲ್ಲ. ಆದ್ದರಿಂದ ಚಿಕನ್ ತೆಗೆದುಕೊಳ್ಳುವಾಗಲೇ ಲಿವರ್ ಅನ್ನು ಬಿಟ್ಟು ಬಿಡುತ್ತಾರೆ.
ಟೇಸ್ಟ್ ಅನ್ನು ಬದಿಗಿಟ್ಟು ನೋಡಿದರೆ, ಅದರಲ್ಲಿ ಇರುವ ವಿಟಾಮಿನ್ಸ್, ಕ್ಯಾಲ್ಸಿಯಂ, ಐರನ್ ಲಿವರ್ ನಲ್ಲಿ ಸಿಗುವಷ್ಟು ಚಿಕನ್ ನ ಇನ್ಯಾವುದೇ ಬೇರೆ ಭಾಗಗಳಲ್ಲಿ ಸಹ ಸಿಗಲ್ಲ. ಚಿಕನ್ ನ ಲಿವರ್ ನಲ್ಲಿ ವಿಟಮಿನ್ ಏ ಅಧಿಕವಾಗಿದ್ದು ಇದರಿಂದ ಶರೀರಕ್ಕೆ ಎನರ್ಜಿ ಸಿಗುತ್ತದೆ. ಒಂದು ವಾರದಲ್ಲಿ 3 ಲಿವರ್ ತಿನ್ನುವುದರಿಂದ ಶರೀರದ ಹಾಗೂ ಮಾನಸಿಕ ದುರ್ಭಲತೆ ದೂರ ಆಗುತ್ತದೆ. ಚಿಕನ್ ನ ಲಿವರ್ ನಲ್ಲಿರುವ ಜಿಂಕ್ ನಮ್ಮ ಪಚನ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಹೊಟ್ಟೆಯ ರೋಗಗಳನ್ನು ದೂರ ಮಾಡುತ್ತದೆ. ಅದಲ್ಲದೆ ಇದರಿಂದ ನಮ್ಮ ಹಸಿವು ಸಹ ಹೆಚ್ಚಾಗುತ್ತದೆ. ಆದ್ದರಿಂದ ಚಿಕನ್ ಲಿವರ್ ಅನ್ನು ಅಗತ್ಯವಾಗಿ ಸೇವಿಸಬೇಕು. ಇದರಲ್ಲಿರುವ ಪ್ರೊಟೀನ್, ಮೆಗ್ನಿಶಿಯಂ, ವಿಟಮಿನ್ , ಪೊಟ್ಯಾಶಿಯಂ ಇವು ಪುರುಷರಲ್ಲಿ ಪುರುಷತ್ವವನ್ನು ಹೆಚ್ಚಿಸುತ್ತದೆ.
ಚಿಕನ್ ಲಿವರ್ ಸೇವಿಸುವುದರಿಂದ ಸ್ಟಾಮಿನ ಹೆಚ್ಚು ಆಗತ್ತೆ ನಮ್ಮ ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ. ಕಣ್ಣಿನ ದೃಷ್ಟಿಯ ಕೊರತೆ ಇದ್ದವರು ಚಿಕನ್ ಲಿವರ್ ಸೇವಿಸುವುದು ಅಗತ್ಯ. ಲಿವರ್ ನಲ್ಲಿರುವ ಒಮೆಗ 3 ನಮ್ಮ ಶರೀರದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಇದರ ಸೇವನೆಯಿಂದ ಹಾರ್ಟ್ ಅಟ್ಯಾಕ್ ಆಗುವ ಸಂಭವ ಕೂಡ ಕಡಿಮೆ. ಮೆದುಳು ಚುರುಕಾಗಿರತ್ತೆ ಹಾಗೂ ಡಯಾಬಿಟಿಸ್ ಅನ್ನು ಸಹ ನಿಯಂತ್ರಣದಲ್ಲಿ ಇಡಿಸುತ್ತದೆ. ತೂಕ ಕಡಿಮೆ ಇರುವವರು ತೂಕ ಹೆಚ್ಚು ಮಾಡಿಕೊಳ್ಳಳು ಚಿಕನ್ ನ ಲಿವರ್ ಸೇವಿಸಿದರೆ ಉತ್ತಮ. ಹಾಗೆ ತುಂಬಾ ಬೇಗ ನೆಗಡಿ ಆಗುವವರು ಚಿಕನ್ ಲಿವರ್ ತಿನ್ನುವುದರಿಂದ ನೆಗಡಿ ಕಡಿಮೆ ಆಗುತ್ತದೆ ಹಾಗೂ ಚಿಕನ್ ಲಿವರ್ ತಿನ್ನುವವರು ಕ್ಯಾನ್ಸರ್ ತಡೆಗಟ್ಟಲು ಸಹ ಸಾಧ್ಯ ಆಗುತ್ತದೆ. ಇವಿಷ್ಟು ಚಿಕನ್ ನ ಲಿವರ್ ತಿನ್ನುವುದರಿಂದ ಆಗುವಂತಹ ಪ್ರಯೋಜನಗಳು.