ನಿದ್ದೆ ಈಗಿನ ಕಾಲದಲ್ಲಿ ಎಲ್ಲರೂ ನಿದ್ರಾಹೀನತೆಯಿಂದ ಬಳಲುತ್ತ ಇರುವವರೆ ಹೆಚ್ಚು. ನಿದ್ದೆ ಸರಿಯಾಗಿ ಆಗದೆ ಇದ್ದರೆ ಎಲ್ಲಾ ಕೆಲಸಕ್ಕೂ ನಿಧಾನಗತಿ. ಆದರೆ ಕೆಲವು ಜನ ಹಾಸಿಗೆಗೆ ಹೋದ ತಕ್ಷಣವೇ ನಿದ್ದೆಗೆ ಜಾರುವವರು ಇರುತ್ತಾರೆ. ಅವರನ್ನ ಅದೃಷ್ಟವಂತರು ಅಂತಾನೆ ಹೇಳಬಹುದು. ಸಂತೆಯಲ್ಲಿ ಇದ್ದರು ನಿದ್ದೆ ಬರುತ್ತದೆ ಇನ್ನೂ ಕೆಲವರಿಗೆ ಹಾಸಿಗೆಯ ಮೇಲೆ ಎಷ್ಟೇ ಹೊರಳಾಡಿದರು ಸಹ ಅವರಿಗೆ ನಿದ್ದೆ ಎನ್ನುವುದೇ ಬರಲ್ಲ ನಿದ್ದೆಯಿಂದ ವಂಚಿತರಾಗಿ ಇರುತ್ತಾರೆ ಇವರನ್ನ ದುರಾದೃಷ್ಟವಂತರು ಅಂತ ಹೇಳಬಹುದು. ದಿನಚರಿಯಲ್ಲಿ ಹಗಲು ಮಟ್ಟರು ರಾತ್ರಿಯಲ್ಲಿ ನಿದ್ದೆಗೆ ಮೀಸಲು. ರಾತ್ರಿ ಇಡೀ ಶರೀರಕ್ಕೆ ವಿರಾಮ ಕೊಟ್ಟು ಸರಿಯಾಗಿ ನಿದ್ದೆ ಮಾಡಿದ್ರೆ, ಮರುದಿನ ಶರೀರ ಮತ್ತೆ ಉತ್ತೇಜನ ಪಡೆದು ಕೆಲಸಕ್ಕೆ ಸನ್ನದ್ಧ ಆಗುತ್ತದೆ. ನಿದ್ದೆ ಬಾರದೆ ಬಳಲುತ್ತಿರುವವರಿಗೆ ಒಂದು ಸುಲಭವಾದ ಟೆಕ್ನಿಕ್ ಇದೇ ಅದೇನು ಅಂದ್ರೆ, ಮೈಂಡ್ ಫುಲ್ ಬ್ರೀಥಿಂಗ್ ಅಂತ. ಇದರಿಂದ ನೀವು ಬಹು ಸುಲಭಾವಾಗಿ ನಿದ್ದೆಗೆ ಜಾರಬಹುದು.
ಇನ್ನೂ ದು ವಿಷಯ ಏನು ಅಂದ್ರೆ, ಈಗಿನ ಕಾಲದಲ್ಲಿ ಒತ್ತಡ ಆತಂಕ ಹೀಗೆ ಇಲ್ಲದ ಜೀವನ ಯಾರಿಗೆ ತಾನೇ ಇದೆ ಹೇಳಿ? ಪ್ರತಿಯೊಬ್ಬರು ಒಂದಲ್ಲ ಇಂದು ಒತ್ತಡದಲ್ಲಿ ಇರುವವರೆ. ಅಂತವರು ಉಸಿರಾಟದ ಕಡೆ ತುಂಬಾ ಗಮನ ಕೊಟ್ಟಿರುವುದಿಲ್ಲ. ಹಾಗಾಗಿ ಕೆಲವೊಮ್ಮೆ ನಿದ್ದೆ ಸರಿಯಾಗಿ ಬರಲ್ಲ. ಅದಕ್ಕೆ ಈ ಮೈಂಡ್ ಫುಲ್ ಬ್ರೀಥಿಂಗ್ ಹೇಗೆ ಮಾಡೋದು ಅಂತ ನೋಡುವುದಾದರೆ, ದೇಹ ರಿಲ್ಯಾಕ್ಸ್ ಆಗಬೇಕು ಅಂದ್ರೆ ಹೃದಯದ ವೇಗ ಕಡಿಮೆ ಆಗಬೇಕು ನಿದ್ದೆ ಸರಿಯಾಗಿ ಆಗಬೇಕು. ಈ ರೀತಿ ಆಗಬೇಕು ಅಂದರೆ ದೇಹಕ್ಕೆ ಓಕ್ಸಿಜನ್ ಪ್ರಮಾಣ ಸರಿಯಾಗಿ ದೊರೆಯಬೇಕು.
ಅದಕ್ಕೆ ಮೈಂಡ್ ಫುಲ್ ಬ್ರೀಥಿಂಗ್ ಉತ್ತಮ. ಇದನ್ನ ಮಾಡೋಕೆ ಮಲಗುವ ಐದು ನಿಮಿಷ ಮೊದಲು ಸಮಯವನ್ನ ಮೀಸಲು ಇಡಬೇಕು. ಒಂದೆರಡು ನಿಮಿಷ ನೇರವಾಗಿ ಕುಳಿತುಕೊಂಡು, ನಾಲ್ಕು ಸೆಕೆಂಡ್ ಕಾಲ ಮೂಗಿನ ಒಳಗೆ ಗಾಳಿಯನ್ನು ಎಳೆದುಕೊಂಡು ಅದನ್ನ ಒಂದೈದು ಸೆಕೆಂಡ್ ಕಾಲ ಒಳಗೆ ಬಂಧಿಸಿ ನಂತರ ಹೊರಗೆ ಬಿಡಬೇಕು. ಹೀಗೆ ಬಾಯಿಯ ಮೂಲಕ ಸಹ ನಿಧಾನಕ್ಕೆ ಎಂಟು ಸೆಕೆಂಡ್ ಗಳ ಕಾಲ ಗಾಳಿಯನ್ನ ಒಳಗೆ ತೆಗೆದುಕೊಂಡು ಮತ್ತೆ ಏಳೆಂಟು ಸೆಕೇಂಡ್ ನಂತರ ಬಿಡಬೇಕು. ಹೀಗೆ ಪ್ರತೀ ರಾತ್ರಿ ಏಳೆಂಟು ಬಾರಿ ಮಾಡುವುದರಿಂದ ಆರಾಮವಾಗಿ ನಿದ್ದೆಗೆ ಜಾರಬಹುದು. ಸುಲಭವಾಗಿ ನಿದ್ದೆಗೆ ಜಾರಲು ಇದು ಉತ್ತಮ ಉಪಾಯ. ಇದನ್ನ ಪ್ರತಿ ದಿನ ಮಾಡುವುದರಿಂದ ಆರಾಮವಾಗಿ ನಿದ್ದೆಗೆ ಜಾರುವುದರಲ್ಲಿ ಯಾವುದೇ ಸಂಶಯವೇ ಇಲ್ಲ