ನಮಗೆ ಆಗಾಗ ಕಂಡು ಬರುವ ಆರೋಗ್ಯ ಸಮಸ್ಯೆಗಳಲ್ಲಿ ತಲೆ ನೋವು ಕೂಡ ಒಂದು. ಕೆಲವರಿಗೆ ದೀರ್ಘ ಕಾಲವಾಗಿ ಕಾಡುವ ತಲೆ ನೋವು ಮೈಗ್ರೇನ್ ರೀತಿ ಬದಲಾಗಿ ಪ್ರತಿ ನಿತ್ಯ ತುಂಬಾ ತೀವ್ರವಾಗಿ ಕಾಡುತ್ತದೆ. ಎಷ್ಟೋ ಜನರು ಇಂತಹ ಮೈಗ್ರೆನ್ ತಲೆ ನೋವನ್ನು ಸಹಿಸಿಕೊಳ್ಳಲಾಗದೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಸಂಶೋಧನೆಗಳು ಹೇಳುವ ಪ್ರಕಾರ ಮೈಗ್ರೆನ್ ಸಮಸ್ಯೆ ತುಂಬಾ ಅಪರೂಪದ ಖಾಯಿಲೆ ಏನಲ್ಲಾ. ಏಕೆಂದರೆ ಇಂದು ನಮ್ಮ ನಿಮ್ಮ ಮಧ್ಯೆ ಹಲವಾರು ಜನರು ಈ ಒಂದು ಗಾಢವಾದ ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧ್ಯಯನಗಳ ಮೂಲಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿರುವ ಹಾಗೆ ಮೈಗ್ರೆನ್ ಸಮಸ್ಯೆ ಅನುವಂಶೀಯವಾಗಿ ನಮ್ಮ ಹಿರಿಯ ಕುಟುಂಬ ಸದಸ್ಯರಿಂದ ನಮಗೆ ವರದಾನವಾಗಿ ಬರುತ್ತದೆ ಎಂದು ಹೇಳುತ್ತಾರೆ.
ಮೈಗ್ರೆನ್ ಎನ್ನುವ ಈ ನೋವು ಆಗಾಗ ಬರುತ್ತಿದ್ದರೂ ಕೂಡ ಕೆಲವೊಮ್ಮೆ ಅದು ತಲೆಯಿಡಿ ವ್ಯಾಪಿಸುತ್ತದೆ, ಈ ಕೆಲವು ನಿಮಿಷಗಳಿಂದ ಹಿಡಿದು ಕೆಲವು ದಿನಗಳವರೆಗೆ ಮುಂದುವರೆಯಬಹುದು. ಮೈಗ್ರೆನ್ ಅನ್ನು ನ್ಯೂರಾಲಾಜಿಕಲ್ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಈ ತಲೆ ನೋವಿನ ಜೊತೆಗೆ,ಕೆಲವು ಜನರು ಅಥಾವ ಶೀತದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೈಗ್ರೆನ್ ಸಮಸ್ಯೆ ನಿಮ್ಮಲ್ಲಿ ಕಂಡು ಬಂದರೆ ಈ ಕೆಳಗಿನ ಲಕ್ಷಣಗಳು ಗೋಚರಿಸಬಹುದು.
ವಾಕರಿಕೆ, ವಾಂತಿ, ಕಣ್ಣುಗಳು ಮಂಜಾಗುವುದು, ಕೈ ಕಾಲುಗಳು ಹಿಡಿದುಕೊಂಡಂತೆ ಮತ್ತು ಮುಳ್ಳು ಚುಚ್ಚಿದಂತ ಅನುಭವ ಆಗಬಹುದು. ಹಸಿವು ಕಡಿಮೆಯಾಗುವುದು, ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದು, ಬೆಳಕು ಹಾಗೂ ಗಟ್ಟಿ ಧ್ವನಿ ಕೇಳಿದಾಗ ಹೆದರಿಕೆಯಾಗುವುದು, ಇತ್ಯಾದಿ.
ಮೈಗ್ರೇನ್ ಗೆ ಕಾರಣಗಳು ಯಾವುವು ಎಂದು ಸ್ಪಷ್ಟವಾಗಿ ಹೇಳಲಾಗದೇ ಇದ್ದರೂ ಹಾರ್ಮೋನುಗಳ ಏರುಪೇರು, ಅನುವಂಶೀಯತೆ, ಖಿನ್ನತೆ, ಉದ್ವೇಗ, ಅಸಮರ್ಪಕ ಆಹಾರ, ಗರ್ಭ ನಿರೋಧಕಗಳ ಅಡ್ಡ ಪರಿಣಾಮ, ರಜೋನಿವೃತ್ತಿ, ಮೊದಲಾದವು ಕಾರಣವಾಗಿರಬಹುದು. ಇದರೊಂದಿಗೆ ಪ್ರಬಲ ನೋವು ನಿವಾರಕ ಗುಳಿಗೆಗಳ ಸೇವನೆಯಿಂದ ತಕ್ಷಣಕ್ಕೆ ನೋವು ಕಡಿಮೆಯಾದಂತೆ ಕಂಡು ಬಂದರೂ ಇದರ ಇತರ ಪರಿಣಾಮಗಳೂ ದೇಹವನ್ನು ಇನ್ನಷ್ಟು ಬಾಧಿಸಬಹುದು. ಇದಕ್ಕೆ ಸುಲಭವಾದ ಮನೆ ಮದ್ದು ಈ ಕೆಳಗಿನಂತೆ ತಿಳಿಯೋಣ.
ಒಂದು ಕೊಬ್ಬರಿ ಗಿಟುಗು, ಹಾಲು, ಗಸಗಸೆ ಹಾಗೂ ಬಾದಾಮಿಯನ್ನು ತೆಗೆದುಕೊಳ್ಳಬೇಕು. ಒಣ ಕೊಬ್ಬರಿ ಗಿಟುಗನ್ನು ಮೇಲೆ ಒಂದು ರಂಧ್ರದ ರೀತಿಯಲ್ಲಿ ಮುಚ್ಚಲು ಬರುವ ಹಾಗೆ ಕಟ್ ಮಾಡಿಕೊಂಡು ಅದಕ್ಕೆ ಒಂದು ಚಮಚ ಗಸಗಸೆ ಹಾಗೂ ಸ್ವಲ್ಪ ಬಾದಾಮಿಯನ್ನು ಹಾಕಿ ಕೊಬ್ಬರಿಯ ರಂಧ್ರವನ್ನು ಮುಚ್ಚಬೇಕು. ಇದನ್ನು ಹಾಲು ಇರುವ ಪಾತ್ರೆಗೆ ಹಾಕಿ ಕಡಿಮೆ ಉರಿಯಲ್ಲಿ ಇಟ್ಟು ಕುದಿಸಬೇಕು. ಇದನ್ನು 40 ನಿಮಿಷ ಹಾಲಿನಲ್ಲಿ ಕುದಿಸಬೇಕು.
ಕೊಬ್ಬರಿಯನ್ನು ಹಾಲಿನಿಂದ ತೆಗೆದು ಬಿಸಿ ಆರಿದ ಮೇಲೆ ಅದನ್ನು ಕಟ್ ಮಾಡಿ ಕೊಬ್ಬರಿ, ಅದರಲ್ಲಿರುವ ಗಸಗಸೆ ಹಾಗೂ ಬಾದಾಮಿಯನ್ನು ಹಾಗೂ ಅದಕ್ಕೆ ಕಲ್ಲು ಸಕ್ಕರೆಯನ್ನು ಹಾಕಿ ಮಿಕ್ಸರ್ ಯಿಂದ ಸಣ್ಣಗೆ ಪುಡಿ ಮಾಡಿ ಇಟ್ಟು ಕೊಳ್ಳಬೇಕು.. ಈ ಪುಡಿಯನ್ನು ರಾತ್ರಿ ಮಲಗುವ ಮುಂಚೆ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಅಥಾವ ಹಾಗೆ ಈ ಪುಡಿಯನ್ನು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ಬರುವುದಿಲ್ಲ.