ಗುರು ಗ್ರಹವನ್ನು ಬೃಹಸ್ಪತಿ ಎಂದು ಕರೆಯಲಾಗುತ್ತದೆ. ಈ ಗ್ರಹವು ಮನುಷ್ಯನ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆಧ್ಯಾತ್ಮಿಕವಾಗಿ ಗುರುತಿಸಲ್ಪಡುವ ಈ ಗ್ರಹವು ಭಕ್ತಿ ಪೂಜೆ ಮತ್ತು ಪ್ರಾರ್ಥನೆಯ ಸಂಕೇತವಾಗಿದೆ. ವ್ಯಕ್ತಿಯು ಬದುಕಿನಲ್ಲಿ ಉನ್ನತಿ ಕಾಣಲು ಪ್ರಯತ್ನದ ಜೊತೆಗೆ ಸ್ವಲ್ಪ ಮಟ್ಟಿಗೆ ಗುರು ಬಲದ ಅವಶ್ಯಕತೆಯು ಬೇಕು, ಹೀಗಾಗಿ ಗುರು ಬಲ ಹೊಂದಿರುವವರು ಬಯಸಿದ್ದೆಲ್ಲಾ ಬಹು ಬೇಗ ಸಿಗುತ್ತದೆ. ಸಾಮಾನ್ಯವಾಗಿ ಹಲವಾರು ಜನ ತಾವು ಬೇಡಿದ್ದು ಸಿಗಲಿಲ್ಲವೆಂದು ಭಗವಂತನಲ್ಲಿ ಮರುಗುತ್ತಾರೆ, ಆದರೆ ಇನ್ನೂ ಕೆಲವರು ಚಿಕ್ಕ ಪ್ರಯತ್ನ ಮಾಡಿದರು ಕೂಡ ದೊಡ್ಡ ಯಶಸ್ಸು ಪಡೆಯುತ್ತಾರೆ. ಇದೆಲ್ಲವೂ ಅವರವರ ಯೋಗಕ್ಕೆ ಸಂಬಂಧಪಟ್ಟಿದ್ದು.
ಸಾಮಾನ್ಯವಾಗಿ ಈ ರೀತಿ ಯೋಗ ಪಡೆದಿರುವ ಕೆಲ ರಾಶಿಗಳ ಬಗ್ಗೆ ಈ ಕೆಳಗಿನಂತೆ ತಿಳಿಯೋಣ.
ಜನಿಸುವಾಗಲೆ ರಾಜ ಯೋಗ ಪಡೆದುಕೊಂಡು ಬಂದಿರುವ ಈ ರಾಶಿಗಳ ವ್ಯಕ್ತಿಗಳ ದಿನಚರಿ ತಿಳಿಯೋಣ. ಮೊದಲನೆಯದಾಗಿ ವೃಷಭ ರಾಶಿಯವರು ಸಾಮಾನ್ಯವಾಗಿ ಯೋಗ ಪುರುಷರು. ಇವರಿಗೆ ಬಯಸಿದ್ದೆಲ್ಲಾ ಶೀಘ್ರವಾಗಿ ಸಿಗುವ ಯೋಗ ಹೆಚ್ಚಿದೆ. ಸಾಮಾನ್ಯವಾಗಿ ಉದ್ಯೋಗದಲ್ಲಿ ಇವರು ಡಾಕ್ಟರ್, ಎಂಜಿನಿಯರ್, ವಕೀಲರು, ವ್ಯವಸಾಯದಲ್ಲಿ ಬಹಳ ಪರಿಣಿತರಾಗಿರುತ್ತಾರೆ, ಇವರಿಗೆ ಸರಿಯಾದ ಸಮಯಕ್ಕೆ ಮದುವೆ ಆಗುತ್ತದೆ ಹಾಗೂ ಸುಂದರವಾದ ಪತ್ನಿ ಮತ್ತು ಮಕ್ಕಳನ್ನು ಹೊಂದುವರು.ಇವರು ಹೆಂಡತಿ ಮತ್ತು ಮಕ್ಕಳಲ್ಲಿ ಹೆಚ್ಚಿನ ಪ್ರೀತಿ ಇಟ್ಟಿರುತ್ತಾರೆ.
ಮಕರ ರಾಶಿಯವರಿಗೂ ಕೂಡ ಈ ಯೋಗ ಇದೆ. ಇವರಿಗೆ ಸಂಚಾರದಲ್ಲಿ ಅಭಿರುಚಿಯೂ ಹಾಗೂ ಧರ್ಮದಲ್ಲಿ ಆಸಕ್ತಿ ಇರುತ್ತದೆ. ಮತ್ತು ಇವರು ಗಣ್ಯರೊಂದಿಗೆ ವಿರೋಧ ಕಟ್ಟಿಕೊಳ್ಳುತ್ತಾರೆ ಹಾಗೆ ಇವರು ಉಪವಾಸ ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ತುಲಾ ಲಗ್ನದಲ್ಲಿ ಹುಟ್ಟಿದವರ ಆಯಸ್ಸು ಸುದೀರ್ಘವಾಗಿರುತ್ತದೆ, ದೇಹ ಸುಂದರವಾಗಿರುತ್ತದೆ. ತಮ್ಮ ಕೆಲಸದಲ್ಲಿ ನಿಷ್ಠೆ ಇರುತ್ತದೆ ಮತ್ತು ಮೂಗು ಉದ್ದವಾಗಿರುತ್ತದೆ.
ಸಿಂಹ ರಾಶಿಯವರು ದೈವ ಭಕ್ತಿ ಉಳ್ಳವರು,ಹಾಗೂ ನಡೆ ನುಡಿಗಳಿಂದ ಜನರಿಗೆ ಉಪಕಾರ ಮಾಡುವ ಮನೋಭಾವ ಹೊಂದಿರುವವರಾಗಿರುತ್ತಾರೆ. ಅಂದುಕೊಳ್ಳುವ ಕೆಲಸ ಆಗುವವರೆಗೂ ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದವರು, ಇವರು ಆಲೋಚನೆ ಮಾಡಿ ಯಾವುದೇ ಕೆಲಸಗಳನ್ನು ಮಾಡುತ್ತಾರೆ ಮತ್ತು ಪರೋಪಕಾರಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಈ ಲಗ್ನದವರು ಬಹಳ ಅಂದ ಚಂದದ ಉಡುಪುಗಳನ್ನು ಧರಿಸುತ್ತಾರೆ, ಯಾವಾಗಲೂ ಸುಗಂಧ ದ್ರವ್ಯಗಳನ್ನು ಉಪಯೋಗಿಸುತ್ತಾರೆ ಮತ್ತು ಆಭರಣಗಳನ್ನು ಆಸಕ್ತಿಯಿಂದ ಧರಿಸುತ್ತಾರೆ.
ಧನು ರಾಶಿಯವರು ಕೂಡ ಪ್ರಯತ್ನ ಪಡುವಲ್ಲಿ ನಿಷ್ಠೆ ಅನುಸರಿಸುತ್ತಾರೆ ,ಹಠವಾದಿ ಆಗುತ್ತಾರೆ. ಅರ್ಧಕ್ಕೆ ಯಾವ ಕೆಲಸವನ್ನು ಬಿಡುವುದಿಲ್ಲ, ನದಿ ಸರೋವರ ಇರುವ ಜಾಗಗಳು ಪ್ರಿಯವಾದವು. ಗಲಾಟೆ ತಂಟೆ ತಕರಾರಿಗೆ ಹೋಗುವುದಿಲ್ಲ, ಸಾರ್ವಜಿನಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಇವರು ತಮ್ಮ ಪರಿಸರವನ್ನು ಸುಂದರವಾಗಿ ಇಟ್ಟುಕೊಳ್ಳುತ್ತಾರೆ, ಇವರು ಬಂಧು ವರ್ಗದವರೊಂದಿಗೆ ಅನ್ಯೋನ್ಯ ಪ್ರೀತಿ ಇದ್ದು ದೇವರಲ್ಲಿ ಅಪಾರ ಭಕ್ತಿ ಹೊಂದಿರುತ್ತಾರೆ. ಈ ಎಲ್ಲ ರಾಶಿಗಳು ಈ ವರ್ಷದ ಅಂತ್ಯದಲ್ಲಿ ಕೂಡ ಉತ್ತಮ ಫಲ ಇದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.