ಸಾರಸ್ವತ್ ಕೊ ಆಪರೇಟಿವ್ ಬ್ಯಾಂಕ್ ಅಗತ್ಯ ಜೂನಿಯರ್ ಆಫೀಸ್ ಗಳ ನೇಮಕಾತಿಗೆ (saraswat bank Recruitment) ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಮಾರ್ಕೆಟಿಂಗ್ ಮತ್ತು ಆಪರೇಷನ್ (ಕ್ಲೆರಿಕಲ್ ಕೇಡರ್) ವಿಭಾಗಗಳಲ್ಲಿ ನೇಮಕ ಮಾಡಲಿದೆ ಆಸಕ್ತರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ಉದ್ಯೋಗ ಸಂಸ್ಥೆ /ಬ್ಯಾಂಕ್ – ಸಾರಸ್ವತ ಕೊ ಆಪರೇಟಿವ್ ಬ್ಯಾಂಕ್.. ಹುದ್ದೆಯ ಹೆಸರು – ಜೂನಿಯರ್ ಆಫೀಸರ್.. ಹುದ್ದೆಗಳ ಸಂಖ್ಯೆ – 300… ವಿದ್ಯಾರ್ಹತೆ – ಯಾವುದೇ ಪದವಿ ಪಾಸ್ ಆಗಿರಬೇಕು.. ಕಾರ್ಯಾನುಭವ – ಯಾವುದೇ ಬ್ಯಾಂಕ್ /ಸಬ್ಸಿಡಿಯರಿ ಬ್ಯಾಂಕ್, ಎನ್,ಬಿ,ಎಫ್,ಸಿ /ಡಿ,ಎಸ್,ಎ /ಕ್ರೆಡಿಟ್ ಸೊಸೈಟಿಗಳಲ್ಲಿ ಒಂದು ವರ್ಷ ಕಾರ್ಯಾನುಭವ.
ವಿದ್ಯಾರ್ಹತೆ : ಪ್ರಥಮ ಶ್ರೇಣಿಯಲ್ಲಿ ಪದವಿ ಅಥವಾ ದ್ವಿತೀಯ ಶ್ರೇಣಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಕಾಮರ್ಸ್, ವಿಜ್ಞಾನ ಅಥವಾ ಮ್ಯಾನೇಜ್ಮೆಂಟ್ ಮೊದಲ ಆದ್ಯತೆ ನೀಡಲಾಗುತ್ತದೆ. ವಯೋಮಿತಿ ಅರ್ಹತೆಗಳು : ದಿನಾಂಕ 01/12/2021 ಕ್ಕೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಧಾನ : ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಾರಸ್ವತ್ ಕೊ – ಆಪರೇಟಿವ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ http://www.saraswatbank.com ಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು : ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 22/12/2021.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31/12/2021
ಈ ಹುದ್ದೆಗಳನ್ನು ಮುಂಬೈ ಮತ್ತು ಪುಣೆ ಬ್ರಾಂಚ್ ಗಳಲ್ಲಿ ನಿಯೋಜಿಸಲಾಗುತ್ತದೆ.
ವೇತನ : 25.000