ನಾವಿಂದು ನಿಮಗೆ ದ್ವಾದಶ ರಾಶಿಗಳಲ್ಲಿ ಸಿಂಹರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳ ಗುಣಸ್ವಭಾವ ಯಾವ ರೀತಿಯಾಗಿರುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸಿಂಹರಾಶಿಯು ಬಲಿಷ್ಠ ವಾದಂತಹ ಅಗ್ನಿ ತತ್ವವನ್ನು ಸೂಚಿಸುವಂತಹ ರಾಶಿಯಾಗಿರುತ್ತದೆ. ಈ ರಾಶಿಗೆ ರವಿಯು ಅಧಿಪತಿಯಾಗಿರುತ್ತಾನೆ. ಸಿಂಹ ರಾಶಿಯಲ್ಲಿ ಜನನ ವಾಗಿರುವಂತಹ ವ್ಯಕ್ತಿಗಳ ಮುಖಲಕ್ಷಣ ಹಾಗೂ ಕಣ್ಣು ಬಹಳ ತೇಜಸ್ವಿ ಮತ್ತು ಬಹಳ ಚೈತನ್ಯದಿಂದ ಕೂಡಿರುತ್ತದೆ. ಈ ರಾಶಿಯವರು ನಿರ್ಭೀತವಾಗಿ ಉದಾರಿಯಾಗಿ ಹಾಗೂ ವಿಶಾಲ ಹೃದಯವಂತ ರಾಗಿರುತ್ತಾರೆ.
ಹಾಗೆ ಈ ರಾಶಿಯಲ್ಲಿ ಜನನವಾಗಿರುವಂತವರು ಆದರ್ಶಪ್ರಾಯರಾಗಿರುತ್ತಾರೆ ಆದರ್ಶಮಯ ಜೀವನ ಹಾಗೂ ಬಹಳ ಬುದ್ಧಿವಂತಿಕೆಯಿಂದ ಜೀವನವನ್ನು ನಡೆಸುತ್ತಿರುತ್ತಾರೆ. ಹಾಗೆಯೇ ಈ ರಾಶಿಯವರು ಸಂಬಂಧಿಕರು ಹಾಗೂ ಸ್ನೇಹಿತರ ನಡುವೆ ವಿಶ್ವಾಸಿಯಾಗಿರುತ್ತಾರೆ ಸ್ವಲ್ಪ ಹಠವಾದಿ ಆಗಿರುತ್ತಾರೆ. ನನ್ನ ನಿರ್ಣಯ ಸರಿ ಎಂಬುದು ಇವರ ವಾದ ವಾಗಿರುತ್ತದೆ. ಬೇರೆಯವರ ನಿರ್ಣಯಕ್ಕೆ ಬೇರೆಯವರ ಮಾರ್ಗದರ್ಶನಕ್ಕೆ ಬೆಲೆ ಕೊಡುವಂತಹ ಮನಸ್ಥಿತಿ ಇರುವುದಿಲ್ಲ. ತನ್ನ ನಿರ್ಣಯವನ್ನು ಸಮರ್ಥನೆ ಮಾಡಿಕೊಳ್ಳುವಂತಹ ದೃಢವಾದ ಮನಸ್ಸು ಈ ರಾಶಿಯವರದ್ದಾಗಿರುತ್ತದೆ. ಈ ರಾಶಿಯವರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹಳ ಆಸಕ್ತಿ ಇರುತ್ತದೆ ಯಾರಾದರೂ ಧಾರ್ಮಿಕ ಕ್ಷೇತ್ರದಲ್ಲಿ ತೊಂದರೆ ಹಾನಿಯನ್ನುಂಟು ಮಾಡಿದರೆ ಇವರಲ್ಲಿ ಕ್ರೋಧದ ಮನೋಭಾವನೆ ಉಂಟಾಗುತ್ತದೆ.
ಇವರು ದಾನಿಗಳಾಗಿರುತ್ತಾರೆ ವಿಶೇಷವಾಗಿ ಈ ರಾಶಿಯವರದ್ದು ದಾನಧರ್ಮದ ಕೈಯಾಗಿರುತ್ತದೆ. ಸಜ್ಜನಿಕರಾಗಿರುತ್ತಾರೆ ಜೊತೆಗೆ ಮಾನವೀಯ ಗುಣಗಳನ್ನು ಹೊಂದಿರುತ್ತಾರೆ. ಬಡ ಬಗ್ಗರಿಗೆ ಸಹಾಯ ಮಾಡುವಂತಹ ಮನುಷ್ಯತ್ವದ ಗುಣ ಈ ರಾಶಿಯವರದ್ದಾಗಿದೆ. ಇವರಿಗೆ ನ್ಯಾಯಮಾರ್ಗದಲ್ಲಿ ಸಂಪಾದನೆ ಮಾಡುವಂತಹ ಗುಣ ದೃಢವಾಗಿರುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವಂತಹ ದೃಢ ಸಂಕಲ್ಪವನ್ನು ಮನಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಈ ರಾಶಿಯವರು ಬಲಾಡ್ಯವಾದಂತಹ ದಷ್ಟಪುಷ್ಟವಾದಂತಹ ದೇಹವನ್ನು ಹೊಂದಿರುತ್ತಾರೆ. ಜೊತೆಗೆ ಮುಂಗೋಪಿಗಳು ಶಕ್ತಿವಂತರು ಸಾಹಸವಂತರಾಗಿರುತ್ತಾರೆ ಜೊತೆಗೆ ಭೋಜನಪ್ರಿಯ ರಾಗಿರುತ್ತಾರೆ. ಇವರು ಪ್ರವಾಸ ಪ್ರಯಾಣಗಳಲ್ಲಿ ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ.
ಇವರು ಸ್ವಾಭಿಮಾನಿಗಳಾಗಿದ್ದರೂ ಕೂಡ ಬಹಳ ಜನರಿಂದ ನಿಷ್ಟೂರವಾಗುತ್ತಾರೆ. ಬೇರೆಯವರ ಅಧೀನದಲ್ಲಿ ಅವರ ಕೈಕೆಳಗೆ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಶ್ರಮದಿಂದ ಒಳ್ಳೆಯ ಹೆಸರನ್ನು ಕೀರ್ತಿಯನ್ನು ಸಂಪಾದನೆ ಮಾಡಿ ಹಣವನ್ನು ಗಳಿಸಬೇಕು ಎಂಬುದೇ ಇವರ ಸಂಕಲ್ಪವಾಗಿರುತ್ತದೆ. ಇವರು ತಮ್ಮ ಸಂಗಾತಿಯನ್ನು ಬಹುವಾಗಿ ಪ್ರೀತಿಸುತ್ತಾರೆ ತಮ್ಮ ಕುಟುಂಬದಲ್ಲಿ ಮೂರನೆಯವರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ.
ಇನ್ನು ಈ ರಾಶಿಯವರು ಸ್ವಲ್ಪ ಅನುಮಾನ ಹಾಗೂ ಅಹಂಕಾರದಿಂದ ಸಂಸಾರವನ್ನು ಹಾಳು ಮಾಡಿಕೊಳ್ಳುವಂತಹ ಸಾಧ್ಯತೆ ಇರುತ್ತದೆ. ಇದರ ಕುರಿತು ಜಾಗ್ರತೆಯನ್ನು ವಹಿಸುವುದು ಒಳ್ಳೆಯದು ಈ ರಾಶಿಯವರಿಗೆ ವಿಶೇಷವಾಗಿ ತಂದೆ-ತಾಯಿಯರ ಜೊತೆ ಹೊಂದಾಣಿಕೆ ಸ್ವಲ್ಪ ಕಡಿಮೆ ಇರುತ್ತದೆ. ಈ ರಾಶಿಯವರು ಸಾಧನ ಜೀವಿಗಳಾಗಿರುತ್ತಾರೆ ಏನಾದರೂ ಸಾಧನೆ ಮಾಡಬೇಕು ಎಂಬುದಿರುತ್ತದೆ.
ಜೊತೆಗೆ ಇವರ ನಾಯಕತ್ವ ಗುಣ ಕೂಡ ಚೆನ್ನಾಗಿರುತ್ತದೆ ಈ ರಾಶಿಯವರು ಮಾನ ಮರ್ಯಾದೆಗೆ ಹೆಚ್ಚು ಬೆಲೆಯನ್ನು ಕೊಡುತ್ತಾರೆ. ಸಮಾಜಮುಖಿ ಕಾರ್ಯಗಳನ್ನು ಮಾಡಿ ಉತ್ತಮ ಸ್ಥಾನಮಾನವನ್ನು ಗಳಿಸುತ್ತಾರೆ. ಇವರಿಗೆ ಐಷಾರಾಮಿ ಜೀವನದ ಬಗ್ಗೆ ಆಸಕ್ತಿ ಇರುತ್ತದೆ ಜೊತೆಗೆ ತಮ್ಮ ಯೋಗ್ಯತೆಗೆ ತಕ್ಕ ಜನರ ಸಹವಾಸವನ್ನು ಮಾಡುತ್ತಾರೆ. ಇವರನ್ನ ಯಾರಾದರೂ ಹೊಗಳಿದರೆ ಅವರಿಗೆ ಏನು ಬೇಕಾದರೂ ಮಾಡಿಕೊಡುವಂತಹ ಮನಸ್ಥಿತಿ ಇವರದ್ದು. ಎಂತಹ ಕಷ್ಟದ ಸಂಧಿಗ್ನ ಪರಿಸ್ಥಿತಿ ಬಂದರೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಈ ರಾಶಿಯವರಿಗೆ ಯಾವುದಾದರೂ ವಿಷಯದ ಕುರಿತು ತರ್ಕ ಮಾಡುವುದು ವಾದ-ವಿವಾದ ಮಾಡುವುದು ಚರ್ಚೆ ಮಾಡುವುದರ ಬಗ್ಗೆ ಆಸಕ್ತಿ ಹೆಚ್ಚಿಗೆ ಇರುತ್ತದೆ ಈ ರಾಶಿಯವರಿಗೆ ಅವರ ಮೇಲೆ ಅವರಿಗೆ ನಂಬಿಕೆ ವಿಶ್ವಾಸ ಹೆಚ್ಚಿರುತ್ತದೆ.
ಈ ರಾಶಿಯವರಿಗೆ ವ್ಯವಸಾಯ ಕ್ಷೇತ್ರದಲ್ಲಿಯು ಕೂಡ ಏಳಿಗೆ ಉಂಟಾಗುತ್ತದೆ. ಚಿನ್ನ ವಜ್ರ ವ್ಯಾಪಾರಿಗಳಿಗೂ ಕೂಡ ಒಳ್ಳೆಯದಾಗುತ್ತದೆ ಸಂಗೀತ ಸಾಹಿತ್ಯ ನಾಟಕ ಕಲಾರಂಗದಲ್ಲಿ ತೊಡಗಿಸಿಕೊಂಡಿರುವವರಿಗೆ ಯಶಸ್ಸು ಸಿಗುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಈ ರಾಶಿಯವರು ಅಹಂಕಾರ ಮತ್ತು ಬೇರೆಯವರನ್ನು ನಿರ್ಲಕ್ಷ ಮಾಡುವ ಗುಣವನ್ನು ಹೊಂದಿರುವುದರಿಂದ ತಂದೆ ತಾಯಿಯ ಸೇವೆಯನ್ನು ಮಾಡುವುದು ಒಳ್ಳೆಯದು.
ಜೊತೆಗೆ ರವಿವಾರದ ದಿನ ಯಾರಿಗಾದರೂ ಗೋಧಿಯನ್ನು ದಾನ ಮಾಡಬೇಕಾಗುತ್ತದೆ. ಸೂರ್ಯನಮಸ್ಕಾರವನ್ನು ಮಾಡಿ ಸೂರ್ಯನ ಶ್ಲೋಕವನ್ನು ಪಠಣ ಮಾಡುತ್ತಿದ್ದರೆ ಕೆಲವು ಸಮಸ್ಯೆಗಳು ಪರಿಹಾರ ಆಗುತ್ತವೆ. ಈ ರೀತಿಯಾಗಿ ಸಿಂಹ ರಾಶಿಯವರು ಮಿಶ್ರಿತ ಗುಣಗಳನ್ನು ಹೊಂದಿದ್ದು ನಾವು ಮೇಲೆ ಹೇಳಿರುವ ಪರಿಹಾರವನ್ನು ಮಾಡಿಕೊಳ್ಳುವುದರ ಮೂಲಕ ಉತ್ತಮ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493