ಸಾಮಾನ್ಯವಾಗಿ ಪುದಿನಾ ಸೊಪ್ಪನ್ನು ಚಟ್ನಿ ವಡೆ ಪಲಾವ್ ಪಕೋಡ ಇಂತಹ ತಿನಿಸುಗಳು ರುಚಿಕರವಾಗಿ ಇರಲೆಂದು ಬಳಸಲಾಗುತ್ತದೆ. ಪುದಿನಾ ಸೊಪ್ಪನ್ನ ಪ್ರತ್ಯೇಕವಾಗಿ ಬೆಳೆಯುವ ಅಗತ್ಯವಿಲ್ಲ ಯಾವುದಾದರೊಂದು ತೇವಾಂಶವಿರುವ ಜಾಗದಲ್ಲಿ ಒಂದು ಕಡ್ಡಿತನ್ನು ನೆಟ್ಟರೆ ಸಾಕು ಇಡೀ ಜಾಗವನ್ನೇ ಅಲ್ಪ ಕಾಲಾವಧಿಯಲ್ಲೇ ಆಕ್ರಮಿಸಿಬಿಡುತ್ತದೆ ಈ ಸೊಪ್ಪು. ಪುದಿನಾ ಸೊಪ್ಪು ಬರಿಯ ಸೊಪ್ಪಲ್ಲ ಇದು ತೇವಾಂಶ ಸಾರಜನಕ ಮೇದಸ್ಸು ಕಾರ್ಬೊ ಹೈಡ್ರೇಟ್ಸ್ ಕ್ಯಾಲ್ಸಿಯಮ್ ಫಾಸ್ಪರಸ್ ಕಬ್ಬಿಣದ ಅಂಶ ನಿಯಸಿನ್ ವಿಟಮಿನ್ ಸಿ ವಿಟಮಿನ್ ಎ ಆಕ್ಸಾಲಿಕ್ ಆಮ್ಲ ಇಂತಹ ಪೋಷಕಾಂಶಗಳ ಮಹಾಪೂರವನ್ನೆ ತನ್ನಲ್ಲಿ ಅಡಗಿಸಿಕೊಂಡಿರುವ ಹಲವಾರು ರೋಗಗಳಿಗೆ ಮನೆ ಮದ್ದು ಈ ಪುದಿನಾ.ಅಷ್ಟಕ್ಕೂ ಈ ಪುದಿನಾ ಸೊಪ್ಪಿನ ಉಪಯೋಗಗಳೇನು ಪುದಿನಾ ಸೊಪ್ಪಿನಿಂದ ಮಾಡಬಹುದಾದ ಮನೆ ಮದ್ಧುಗಳು ಯಾವುವು ಎಂಬುದರ ಬಗ್ಗೆ ಒಮ್ಮೆ ತಿಳಿಯಿರಿ.
ಅಜೀರ್ಣ ವ್ಯಾದಿಯಿಂದ ಬಳಲುವ ರೋಗಿಗಳು ಪ್ರತಿದಿನ ಐದಾರು ಹಸಿ ಪುದಿನಾ ಎಲೆಗಳನ್ನು ಊಟಕ್ಕೆ ಮೊದಲು ಜಗಿದು ತಿಂದು ನಂತರ ಆಹಾರ ಸೇವಿಸುವುದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇನ್ನು ಪುದಿನಾ ಸೊಪ್ಪಿನಿಂದ ಟೀ ತಯಾರಿಸಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ, ಪುದಿನಾ ಸೊಪ್ಪಿನ ಚಟ್ಣಿಯನ್ನು ಊಟದಲ್ಲಿ ಬಳಸುವುದರಿಂದ ಹಸಿವೆ ಹೆಚ್ಚಾಗುವುದು.
ಒಂದು ಚಮಚ ಪುದಿನಾ ಸೊಪ್ಪಿನ ರಸದೊಂದಿಗೆ ಒಂದು ಚಮಚ ನಿಂಬೆ ರಸ ಒಂದು ಚಮಚ ಜೇನು ತುಪ್ಪವನ್ನು ಮಿಶ್ರಣ ಮಾಡಿ ಪ್ರತಿದಿನ ಎರಡರಿಂದ ಮೂರು ಬಾರಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಅಜೀರ್ಣ ಹೊಟ್ಟೆ ನೋವು ಹಾಗೂ ಗರ್ಭಿಣಿ ಸ್ತ್ರೀಯರಲ್ಲಿ ವಾಂತಿ ಆಗುವುದು ನಿಲ್ಲುತ್ತದೆ, ಊಟವಾದ ನಂತರ ನಾಲ್ಕರಿಂದ ಐದು ಪುದಿನಾ ಎಲೆಗಲನ್ನು ಬಾಯಲ್ಲಿ ಹಾಕಿಕೊಂಡು ಜಗಿದು ತಿನ್ನುವುದರಿಂದ ಹಲ್ಲುಗಳಲ್ಲಿ ಹುಳುಕು ಬರುವುದಿಲ್ಲ ಹಾಗೂ ಒಸಡುಗಳು ಶಕ್ತಿಯುತವಾಗುತ್ತವೆ
ಪುದಿನಾ ಸೊಪ್ಪಿನ ಹಸೀ ಎಲೆಗಳನ್ನು ಅಗಿದು ತಿನ್ನುವುದರಿಂದ ಹೊಟ್ಟೆಯಲ್ಲಿನ ಜಂತು ಹುಳುಗಳು ನಾಶವಾಗುತ್ತವೆ. ಪುದಿನಾ ಸೊಪ್ಪಿನಿಂದ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿಯಾದರೂ ನಾಲ್ಕು ಚಮಚದಷ್ಟು ಸೇವಿಸುವುದರಿಂದ ಕೆಮ್ಮು ಹಾಗೂ ನೆಗಡಿ ಶಮನವಾಗುತ್ತದೆ. ಪುದಿನಾ ಸೊಪ್ಪಿನ ಎಳೆಯ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಸೇರಿಸಿ ಅರೆದು ಮುಖಕ್ಕೆ ಹಚ್ಚುತ್ತಿದ್ದರೆ ಮೊಡವೆಗಳು ನಿವಾರಣೆಯಾಗಿ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ