ಜನವರಿ 1 ರಿಂದ ದೇಶಾದ್ಯಂತ ಎಲ್ಲ ಸಾರ್ವಜನಿಕರಿಗೆ ಹೊಸ ಆರು ನಿಯಮಗಳು ಜಾರಿಗೆ ಬರುತ್ತಿದೆ. ಇದೇ ಡಿಸೆಂಬರ್ 31 ರಿಂದ ಹೊಸದಾಗಿ ಆರು ನಿಯಮಗಳು ಜಾರಿಗೆ ಬರಲಿದ್ದು ಎಲ್ಲಾ ಸಾರ್ವಜನಿಕರ ಜೀವನದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಲಿದೆ.

ಮೊದಲನೆ ನಿಯಮ, ಪಾನ್ ಕಾರ್ಡ್ ಹೊಂದಿರುವ ಎಲ್ಲಾ ಗ್ರಾಹಕರು ನಿಮ್ಮ ಪಾನ್ ಕಾರ್ಡ್ ಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಇದೆ ಡಿಸೆಂಬರ್ 31 ಕೊನೆಯ ದಿನಾಂಕ ವಾಗಿದೆ. ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸದೇ ಇದ್ದಲ್ಲಿ ನಿಮ್ಮ ಪಾನ್ ಕಾರ್ಡ್ ಕಾರ್ಯ ನಿರ್ವವಹಿಸುವುದನ್ನು ನಿಲ್ಲಿಸಬಹುದು.

ಈಗಾಗಲೇ ಆದಾಯ ತೆರಿಗೆ ಇಲಾಖೆಯು ಸಾಕಷ್ಟು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿಕೊಂಡು ಬಂದಿದ್ದು ಎಲ್ಲಾ ಸಾರ್ವಜನಿಕರಿಗೆ ಮೇಲಿಂದ ಮೇಲೆ ಸೂಚನೆಯನ್ನು ಕೂಡ ನೀಡಲಾಗಿದೆ. ಅದಕ್ಕಾಗಿ ನೀವು ನಿಮ್ಮ ಬಳಿ ಪಾನ್ ಕಾರ್ಡ್ ಹೊಂದಿದ್ದರೆ ಕಡ್ಡಾಯವಾಗಿ ಆನ್‌ಲೈನ್ ಮುಖಾಂತರ ನಿಮ್ಮ ಆಧಾರ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ ಹಾಗೂ ನಿಮ್ಮ ಕುಟುಂಬದಲ್ಲೂ ಸಹ ಯಾರಾದರೂ ಪಾನ್ ಕಾರ್ಡ್ ಹೊಂದಿದ್ದರೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸಿ.

ಎರಡನೇ ನಿಯಮ, ಇದೇ ಡಿಸೆಂಬರ್ 31 ರ ಒಳಗೆ ಭಾರತೀಯ ಜೀವ ವಿಮಾ ಪಾಲಿಸಿದಾರರು ಕಡ್ಡಾಯವಾಗಿ ಬಾಂಡ್ ಹೊಂದಿದ ಪ್ರತಿಯೊಬ್ಬ ಗ್ರಾಹಕರು ಕೂಡ ನಿಮ್ಮ ಎಲ್ ಐ ಸಿ ಪಾಲಿಸಿಗಳಿಗೆ ಹಾಗೂ ನಿಮ್ಮ ಬಾಂಡ್ ಗಳಿಗೆ ಆಧಾರ್ ಲಿಂಕ್ ಮಾಡಿಸಲು ಇದೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಒಂದು ವೇಳೆ ನಿಮ್ಮ ಎಲ್ ಐ ಸಿ ಪಾಲಿಸಿಗಳಿಗೆ ಆಧಾರ್ ನಂಬರ್ ಲಿಂಕ್ ಮಾಡಿಸದೇ ಹೋದಲ್ಲಿ ಮುಂದೆ ಹಣ ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಮೂರನೇ ನಿಯಮ, ಎ ಟಿ ಎಂ ಕಾರ್ಡ್ ಹೊಂದಿದ ದೇಶದ ಎಲ್ಲಾ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ. ಎ ಟಿ ಎಂ ಕಾರ್ಡ್ ಹೊಂದಿದ ಪ್ರತಿಯೊಬ್ಬ ಗ್ರಾಹಕನು ಇದೆ ಡಿಸೆಂಬರ್ 31 ರ ಬಳಿಕ ಅಂದರೆ ಜನವರಿ ಒಂದರ ನಂತರ ಎ ಟಿ ಎಂ ಕಾರ್ಡ್, ಕ್ರೆಡಿಟ್ ಕಾರ್ಡ್, ಡೆಬಿಟ್‌ಕಾರ್ಡ್, ಗಳ ಮೇಲಿನ ಶುಲ್ಕಗಳನ್ನು ಏರಿಕೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ಅನುಮತಿ ನೀಡಿದ್ದು ಇನ್ನೂ ಮುಂದೆ ಎ ಟಿ ಎಂ ಕಾರ್ಡ್ ಬಳಕೆದಾರರ ಮೇಲೆ ಮತ್ತಷ್ಟು ಹೊರೆ ಹೆಚ್ಚಾಗುತ್ತದೆ.

ನಾಲ್ಕನೇ ನಿಯಮ, ಆದಾಯ ಮತ್ತು ತೆರಿಗೆ ಇಲಾಖೆಯ ಅಧಿಸೂಚನೆಯ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ 10,000 ದಂಡದ ಜೊತೆಗೆ ಶಿಕ್ಷೆಯನ್ನು ಕೂಡ ವಿಧಿಸಲಾಗುತ್ತದೆ. ಐದನೇ ನಿಯಮ, ಬ್ಯಾಂಕಿನಲ್ಲಿ ಖಾತೆ ಹೊಂದಿದ ಪ್ರತಿಯೊಬ್ಬ ಗ್ರಾಹಕರು ಕೂಡ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇದ್ದರೆ ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ.

ಆರನೇ ನಿಯಮ, ಬಿ ಪಿ ಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ಕೂಡ ಕಡ್ಡಾಯವಾಗಿ ಕುಟುಂಬ ಸಮೇತವಾಗಿ ರೇಷನ್ ಅಂಗಡಿಯಲ್ಲಿ ಈ ಕೆ ವೈ ಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಬಂದ್ ಆಗಬಹುದು ಈಗಾಗಲೇ ಆಹಾರ ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿಲಾಗಿದ್ದು ಇದೆ ಡಿಸೆಂಬರ್ 31 ರ ಒಳಗೆ ಕಡ್ಡಾಯವಾಗಿ ಪ್ರತಿಯೊಬ್ಬರೂ ಕೂಡ ರೇಷನ್ ಅಂಗಡಿಗೆ ತೆರಳಿ ಕಾರ್ಡ್ ಗಳಿಗೆ ಮಾಡಿಸಿ ಎಂದು ತಿಳಿಸಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!