ಗ್ರಾಮೀಣ ಜನತೆಗೆ ಗುಡ್ ನ್ಯೂಸ್ 10 ರೂಪಾಯಿಗೆ ಎಲ್,ಇ,ಡಿ ಬಲ್ಬ್, ಕೇಂದ್ರ ಸರ್ಕಾರದಿಂದ ಉಜಾಲ ಯೋಜನೆಯಡಿಯಲ್ಲಿ ವಿತರಿಸಲಾಗುತ್ತದೆ. ಡಿಸೆಂಬರ್ 14 ರಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಕೇಂದ್ರ ಸರ್ಕಾರ “ಗ್ರಾಮ ಉಜಾಲ” ಯೋಜನೆಯಡಿಯಲ್ಲಿ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಗಳಲ್ಲಿ 10 ರೂ. ರಿಯಾಯಿತಿ ದರದಲ್ಲಿ ಎಲ್,ಇ,ಡಿ ಬಲ್ಬ್ ಅನ್ನು ವಿತರಿಸಲಿದೆ.
ದಿನದಿಂದ ದಿನಕ್ಕೆ ವಿದ್ಯುತ್ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಡಜನರಿಗಾಗಿ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮೀಣ ಜನರಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಹೊಸ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಕೇವಲ ಹತ್ತು ರೂಪಾಯಿಗಳಿಗೆ ಹೊಸ ಎಲ್,ಇ,ಡಿ ಬಲ್ಬ್ಗಳನ್ನೂ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರದ ಇಂಧನ ಸಚಿವಾಲಯವು ಉಜಾಲ ಯೋಜನೆಯನ್ನು EESL (Energy Efficiency Service Ltd) ಮೂಲಕ ಅನುಷ್ಠಾನಗೊಳಿಸಿದೆ, ಮನಮೋಹನ್ ಸಿಂಗ್ ಸರ್ಕಾರವು 2011 ರಲ್ಲಿ “ಬಚತ್ ಲ್ಯಾಂಪ್” ಯೋಜನೆಯನ್ನು CFL (Compact Fluorescent Lamp) ವಿತರಿಸುವ ಸಲುವಾಗಿ 2011 ರಲ್ಲಿ ಪ್ರಾರಂಬಿಸಲಾಗಿತ್ತು, ಇದನ್ನು ಉಜಾಲ ಯೋಜನೆಯ ಹೆಸರಿನಲ್ಲಿ ಮೇ 2015 ರಂದು ಚಾಲನೆ ನೀಡಲಾಗಿದ್ದು ಇಲ್ಲಿ ಸಿ,ಎಫ್,ಎಲ್(CFL) ಬದಲಿಗೆ ಎಲ್ ಇ ಡಿ (LED) ಬಲ್ಬ್ ಗಳನ್ನು ಅಂದಿನಿಂದ ಈ ಯೋಜನೆಯಡಿಯಲ್ಲಿ ಕಡಿಮೆ ಬೆಲೆಗೆ ವಿತರಿಸಲಾಗುತ್ತಿದೆ.
ಮಾರ್ಚ್ 21 ರಲ್ಲಿ ಕೇಂದ್ರ ವಿದ್ಯುತ್ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್ ಕೆ ಸಿಂಗ್ ಆರಂಭಿಸಿದ ಯೋಜನೆಯಡಿಯಲ್ಲಿ ಬಿಹಾರ್ ಹಾಗೂ ಉತ್ತರಪ್ರದೇಶ ಹಳ್ಳಿಗಳಲ್ಲಿ 33 ಲಕ್ಷ ಎಲ್,ಇ,ಡಿ ಬಲ್ಬ್ ಗಳನ್ನು ವಿತರಿಸಲಾಗಿತ್ತು.
ಈ ಯೋಜನೆಯನ್ನು ಈಗ ಕರ್ನಾಟಕ, ಆಂಧ್ರಪ್ರದೇಶ, ಹಾಗೂ ತೆಲಂಗಾಣಗಳಲ್ಲಿ ವಿಸ್ತರಿಸಲಾಗಿದ್ದು, ಡಿಸೆಂಬರ್ 14 ರಂದು ಐದು ರಾಜ್ಯಗಳ ಒಟ್ಟು 2579 ಹಳ್ಳಿಗಳಲ್ಲಿ ಎಲ್,ಇ, ಡಿ ಬಲ್ಬ್ಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಮೂರು ವರ್ಷ ಗ್ಯಾರಂಟಿಯುಳ್ಳ 7 ವ್ಯಾಟ್ ಹಾಗೂ 12 ವ್ಯಾಟ್ ಸಾಮರ್ಥ್ಯದ ಎಲ್,ಇ,ಡಿ ಬಲ್ಬ್ಗಳನ್ನು ಸರ್ಕಾರಿ ಸ್ವಾಮ್ಯದ ಸಿ, ಎಸ್,ಇ,ಎಲ್ ಕಂಪನಿ ಒದಗಿಸಲಿದೆ.