ಕೃಷಿಯಿಂದ ಲಾಭ ಅಷ್ಟಕ್ಕಷ್ಟೇ ಎಂದು ಕೈಚೆಲ್ಲಿ ಕೂರುವ ಬದಲು ಚೆಂದದ ಚೆಂಡು ಹೂವು ಬೆಳೆದು ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಕೆಲವು ರೈತರು. ಗುಲಾಬಿ, ಸೇವಂತಿಗೆ, ಮಲ್ಲಿಗೆ, ಸುಗಂಧರಾಜ ಮುಂತಾದ ಕೃಷಿಗಳಿಗೆ ಹೋಲಿಸಿದರೆ ಕಡಿಮೆ ರೋಗ ತರುವ ಹೂವು ಚೆಂಡು. ಇತರ ಹೂವುಗಳಿಗೆ ಹೋಲಿಸಿದರೆ ಖರ್ಚು ಕಡಿಮೆ. ನೀರಾವರಿ ವ್ಯವಸ್ಥೆಯಿದ್ದರೆ ಹಾಕಿದ ಬಂಡವಾಳದ ಮೂರು ಪಟ್ಟು ಆದಾಯ ಗಳಿಸಬಹುದು. ಈ ಚೆಂಡು ಹೂವಿನ ಬೆಳೆಯಿಂದ ಲಕ್ಷ ಆದಯಾ ಗಳಿಸುತ್ತಿರುವ ರೈತನ ಬಗ್ಗೆ ನಾವು ಈ ಲೇಖನದಲ್ಲಿ ನೋಡೋಣ.
ಬಾಗಲಕೋಟೆ ಜಿಲ್ಲೆಯಲ್ಲಿ ರೈತರೊಬ್ಬರ ಹೊಲದಲ್ಲಿ ಹೂವು ಅರಳಿ ಹಳದಿ ಲೋಕವನ್ನೇ ಸೃಷ್ಟಿ ಮಾಡಿದ ಹಾಗೆ ಇದೆ ಈ ರೈತ ಬೆಳೆದ ಚೆಂಡು ಹೂವು. ಸತತವಾಗಿ ಮಳೆ ಹಾಗೂ ಭಾರೀ ಪ್ರವಾಹದಿಂದ ಕೆಂಗೆಟ್ಟಿದ್ದ ಬಾಗಲಕೋಟೆ ಜಿಲ್ಲೆ ಈಗ ಅಕ್ಷರಶಃ ಹುವಿನದೋಟದ ಹಾಗೇ ಕಂಗೊಳಿಸುತ್ತಿದೆ. ಇಡೀ ಹೊಲಕ್ಕೆ ಹಳದಿ ಬಣ್ಣವನ್ನು ಬಳಿದ ಹಾಗೆ ಕಾಣುತ್ತಾ ರಂಗು ರಂಗಿನ ಹೂವುಗಳಿಂದ ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ಬಾಗಲೋಟೆಯ ಬೇವಿನಮಟ್ಟಿ ಗ್ರಾಮದ ಈ ರೈತನ ಹೆಸರು ಶ್ರೀಶೈಲ್ ಎಂದು. ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ಸಿರಿ ತಳಿಯ ಹಳದಿ ಬಣ್ಣದ ಚೆಂಡು ಹೂವು ಹಾಗೂ ಕಲ್ಕತ್ತಾ ವೆರೈಟಿ ತಳಿಯ ಕೇಸರಿ ಬಣ್ಣದ ಚೆಂಡು ಹೂವು ಇವುಗಳನ್ನು ಬೆಳೆದಿದ್ದಾರೆ. ಕೋರೋನ ಲಾಕ್ ಡೌನ್ ಅತಿವೃಷ್ಟಿ ಉಂಟಾಗಿ ಹೀಗೇ ಬೆಳೆದ ಈರುಳ್ಳಿ ಟೊಮೆಟೊ ಗೋವಿನ ಜೋಳ ಸೇರಿದಂತೆ ಇವರ ಎಲ್ಲಾ ಬೆಳೆಗಳೂ ಜಲಾವೃತವಾಗಿ ಹಾಳಾಗಿ ಹೋಗಿತ್ತು.
ಇಂತಹ ಕಠಿಣ ಸಂದರ್ಭದಲ್ಲಿ ಇವರ ಕೈ ಹಿಡಿದಿದ್ದು ಈ ಚೆಂಡು ಹೂವು. ದೀಪಾವಳಿಯಲ್ಲಿ ಉತ್ತಮ ಬೆಳೆ ಹಾಗೂ ಬೆಲೆ ಎರಡೂ ಸಿಕ್ಕಿದ್ದು ನೋದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ. ಇವರು ಒಂದು ಎಕರೆ ಜಮೀನಿನಲ್ಲಿ 50 ಸಾವಿರ ರೂಪಾಯಿ ಹಣ ಖರ್ಚು ಮಾಡಿ ಚೆಂಡು ಹೂವು ಬೆಳೆದು ಒಂದು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಡ್ರಿಪ್ ಪೈಪ್ ಮೂಲಕ ಈರು ಹರಿಸಿ ಬೆಳೆ ಬೆಳೆಯುತ್ತಾರೆ. ಇವರ ಈ ಪದ್ಧತಿ ಇತರೆ ರೈತರಿಗೂ ಮಾದರಿ ಆಗಿದ್ದು ಇತರೆ ರಾತ್ರೋ ಸಹ ಬೇರೆ ಬೆಳೆಗಳ ಜೊತೆಗೆ ಹೂವಿನ ಬೆಳೆಯನ್ನೂ ಬೆಳೆಯುವ ಲೆಕ್ಕಾಚಾರ ಹಾಕುತ್ತಿದ್ದಾರೆ.
ಬೆಳೆ ಆರಂಭಿಸುವುದಕ್ಕೂ ಮೊದಲು ಅವರು ಭೂಮಿಯನ್ನು ನೇಗಿಲನಿಂದ ಹದವಾಗಿ ಉಳುಮೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಕುತ್ತಾರೆ. ಆನಂತರ ಮಳೆಗಾಲದ ಅವಧಿಯಲ್ಲಿ ಸಾಲಿನಿಂದ ಸಾಲಿಗೆ 5 ಅಡಿಗಳ ಅಂತರದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ಸಾಲಿನಿಂದ ಸಾಲಿಗೆ 4 ಅಡಿಗಳ ಅಂತರದಲ್ಲಿ ಸಾಲು ಮಾಡಿ ಗಿಡದಿಂದ ಗಿಡಕ್ಕೆ 2 ಅಡಿಗಳ ಅಂತರದಲ್ಲಿ ಗಿಡ ನಾಟಿ ಮಾಡುತ್ತಾರೆ.
ಮಳೆಗಾಲದಲ್ಲಿ ಎಕರೆಗೆ ಸುಮಾರು ನಾಲ್ಕು ಸಾವಿರ ಹಾಗೂ ಬೇಸಿಗೆ ಕಾಲದಲ್ಲಿ ಎಕರೆಗೆ ಸುಮಾರು ಐದು ಸಾವಿರ ಸಸಿ ನಾಟಿ ಮಾಡುತ್ತಾರೆ. ನಾಟಿ ನಂತರ ಕಾಲ ಕಾಲಕ್ಕೆ ರಾಸಾಯನಿಕ ಗೊಬ್ಬರ ಹಾಗೂ ಬೆಳೆ ಬೆಳವಣಿಗೆಗೆ ಶಿಫಾರಸಿದ ಔಷಧ ಸಿಂಪಡಿಸುತ್ತಾರೆ. ಹನಿ ನೀರಾವರಿ ಪದ್ಧತಿಯಿಂದ ನೀರು ಉಣಿಸುತ್ತಾರೆ.