ಯುವರತ್ನ ಒಂದೆಡೆ ಮುಚ್ಚುತ್ತಿರುವ ಸರ್ಕಾರಿ ಕಾಲೇಜುಗಳು, ಇನ್ನೊಂದೆಡೆ ಅವನ್ನು ಮುಚ್ಚಿಸಲಿಕ್ಕೆಂದೇ ಶತಪ್ರಯತ್ನ ಮಾಡುತ್ತಿರುವ ಖಾಸಗಿ ವಿದ್ಯಾವ್ಯಾಪಾರಿಗಳು; ಇವರ ನಡುವಿನ ಹೋರಾಟವನ್ನು ಯುವರತ್ನ ನಮ್ಮ ಮುಂದಿಡುತ್ತದೆ. ಕಾಲೇಜಿನ ವಿದ್ಯಾರ್ಥಿಗಳನ್ನು ದಾರಿತಪ್ಪಿಸುವುದರಿಂದ ಹಿಡಿದು, ಸರಿಯಾಗಿ ಸಾಗುತ್ತಿರುವ ಕಾಲೇಜುಗಳನ್ನು ಸರ್ವನಾಶ ಮಾಡುವ ತನಕ ಹಲವು ಹುನ್ನಾರಗಳನ್ನು ಶಿಕ್ಷಣ ಸಚಿವರಿಂದ ಹಿಡಿದು ಅಧಿಕಾರದ ಎಲ್ಲ ಹಂತದಲ್ಲೂ ಇರುವವರು ಮಾಡುತ್ತಿರುವುದನ್ನು ಸಿನಿಮಾ ತೋರಿಸುತ್ತದೆ.
ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸುಂದರವಾದ ಕಾಲೇಜು, ಸಂಭ್ರಮ, ಸಂಗೀತ ಮತ್ತು ಗಮ್ಮತ್ತು ಅನ್ನುತ್ತಲೇ ಅದನ್ನು ಕೊಡಲಿಕ್ಕೆ ನಿಂತಿರುವ ಶಿಕ್ಷಣ ವ್ಯಾಪಾರಿ ಮತ್ತು ಮುರಿದ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿ ಒಳ್ಳೆಯ ಪಾಠ ಕಲಿಯುವುದಿಲ್ಲ ಅಂತೇನಿಲ್ಲ ಎಂದು ನಂಬಿರುವ ಪ್ರಿನ್ಸಿಪಾಲರ ನಡುವಿನ ಹೋರಾಟ ಇದು. ಇಂಥ ಕಥಾವಸ್ತುವನ್ನು ನಿಭಾಯಿಸುವುದಕ್ಕೆ ಪುನೀತ್ ರಾಜಕುಮಾರ್ ಅವರಿಗಿಂತ ಅತ್ಯುತ್ತಮ ಆಯ್ಕೆ ಮತ್ತೊಂದಿರಲಿಕ್ಕೆ ಸಾಧ್ಯವಿಲ್ಲ ಎಂಬಂತೆ ಅವರು ಇಡೀ ಚಿತ್ರವನ್ನು ಮುಂದಕ್ಕೆ ಒಯ್ಯುತ್ತಾ ಹೋಗುತ್ತಾರೆ.
ಆಗಷ್ಟೇ ಕಾಲೇಜು ಸೇರಿದ ವಿದ್ಯಾರ್ಥಿಯ ತೆಳು ಮೈಕಟ್ಟು, ಹನ್ನೆರಡು ವರುಷಗಳ ನಂತರದ ರೂಪುರೇಷೆ ಎರಡೂ ಅವರಿಗೆ ಒಪ್ಪುತ್ತದೆ. ಕಾಲೇಜು ಹುಡುಗನ ಲವಲವಿಕೆ, ತುಂಟತನ ಕೂಡ ಚಿತ್ರದ ವೇಗ ಹೆಚ್ಚಿಸಿತ್ತು. ಈ ಸಂದರ್ಭದಲ್ಲಿ ಯುವರತ್ನ ಚಿತ್ರದಲ್ಲಿ ನಟಿಸಿದ ಇನ್ನೊಬ್ಬ ಸಹನಟ ಕಾಕ್ರೋಚ್ ಸುಧಿ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಅವರ ಮರಣದ ನಂತರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಅವರು ಏನು ಹೇಳಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪುನೀತ್ ರಾಜಕುಮಾರ್ ಅವರು ನಿಧನರಾದರು ಎಂಬ ಸುದ್ಧಿ ಕೇಳಿದಾಗಿನಿಂದ ಆ ಮಾತು ಸುಳ್ಳಾಗಲಿ ಎಂದು ದೇವರ ಬಳಿ ಕೇಳಿಕೊಂಡವರು ಅದೆಷ್ಟು ಜನರೋ ಲೆಕ್ಕಕ್ಕೆ ಇಲ್ಲ. ಪ್ರತಿಯೊಬ್ಬ ವ್ಯಕ್ತಿ ಕೂಡಾ ಈ ಒಂದು ವಿಷಯ ನಿಜ ಆಗದೆ ಇರಲಿ ಪುನೀತ್ ರಾಜಕುಮಾರ್ ಅವರು ಬದುಕಿ ಬರಲಿ ಎಂದು ಬೇಡಿಕೊಂಡವರೇ. ಆದರೆ ನಮ್ಮ ಯಾರೊಬ್ಬರ ಕುಗೂ ಕೂಡಾ ಆ ದೇವರಿಗೆ ಕೇಳಿಸಲಿಲ್ಲವೇನೋ ನಮ್ಮ ಪವರ್ ಸ್ಟಾರ್ ಹಿಂದಿರುಗಿ ಬರಲೇ ಇಲ್ಲ. ಅವರು ನಿಧನರಾಗೀ ಒಂದೂವರೆ ತಿಂಗಳೇ ಆದರೂ ಸಹ ಅವರ ಸಾವನ್ನು ಅರಗಿಸಿಕೊಳ್ಳಲು ನಮ್ಮ ಯಾರಿಂದಲೂ ಸಾಧ್ಯವಾಗುತ್ತಿಲ್ಲ ಅವರ ಸಾವನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಿಲ್ಲ.
ಪುನೀತ್ ರಾಜಕುಮಾರ್ ಅವರು ನಿಧನಾರಾದಾಗಿನಿಂದ ಅದೆಷ್ಟೋ ಜನರು ದೇವರನ್ನು ಹಳಿದರು, ದುಷಿಸಿದರು. ನಿಜಕ್ಕೂ ದೇವರ ಮೇಲಿನ ನಂಬಿಕೆ ಎನ್ನುವುದೇ ಹೊರಟುಹೋಗಿತ್ತು. ಬಹುಶಃ ದೇವರಿಗೆ ಪುನೀತ್ ರಾಜಕುಮಾರ್ ಅವರು ತನಗಿಂತ ಹೆಚ್ಚು ಭಕ್ತರನ್ನು ಹೊಂದಿದ್ದಾರೆ ಎಂದು ಹೊಟ್ಟೆಯುರಿ ಬಂದಿರಬೇಕು ಹಾಗಾಗಿ ಅವರನ್ನು ಬೇಗ ಕರೆಸಿಕೊಂಡ ಎಂದು ಕಾಕ್ರೊಚ್ ಸುಧಿ ಹೇಳಿದ್ದಾರೆ.
ಯಾವುದೇ ಒಂದು ಸಮಾರಂಭ ಅಥವಾ ಜಾತ್ರೆ ಏನೇ ಇದ್ದರೂ ಅಲ್ಲಿ ಇಪ್ಪತ್ತೈದು ಲಕ್ಷ ಜನ ಸೇರಿದ ಉದಾಹರಣೆಯೇ ಇದುವರೆಗೂ ಇಲ್ಲಾ. ಪುನೀತ್ ರಾಜಕುಮಾರ್ ಅವರ ಕೊನೆಯ ದರ್ಶನ ಪಡೆಯಲು ಮಾತ್ರ ಅಷ್ಟು ಜನ ಬಂದಿದ್ದಾರೆ ಅಂದರೆ ಅವರ ವ್ಯಕ್ತಿತ್ವ ಎಂತದ್ದಿರಬಹುದು ಯೋಚಿಸಿ ಎಂದಿದ್ದಾರೆ. ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ನಮ್ಮನ್ನ ಬಿಟ್ಟು ಹೋಗಿದ್ದಾರೆ ಹೊರತು ನಮ್ಮೆಲ್ಲರ ಮನಸ್ಸಿನಲ್ಲಿ ಎಂದಿಗೂ ಅವರು ಶಾಶ್ವತ.
ಅವರು ಹೋದರೂ ಸಹ ಅವರ ಕೆಲವು ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ ನಾವು ಅವುಗಳನ್ನು ಪಾಲಿಸಿಕೊಂಡು ಹೋದರೆ ಸಾಕು ನಮಗೇ ತಿಳಿಯದೇ ನಾವು ಒಳ್ಳೆಯವರಾಗಿರುತ್ತೇವೆ. ಅವರು ಹೋದರೂ ಅಂತಾ ಆತ್ಮಹತ್ಯೆ ಮಾಡಿಕೊಳ್ಳುವುದಲ್ಲ ಅದರ ಬದಲು ಅವರ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳೋಣ. ಪುನೀತ್ ರಾಜಕುಮಾರ್ ಅವರ ಆದರ್ಶಗಳನ್ನು ಸಣ್ಣದಾಗಿ ತಾನೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ತನ್ನ ಕೈಲಾದಷ್ಟು ಸಹಾಯ ತಾನು ಮಾಡುವುದಾಗಿ ಸಹ ಸುಧಿ ತಿಳಿಸಿದ್ದಾರೆ.
ಅಷ್ಟೆ ಅಲ್ಲದೆ ಪುನೀತ್ ರಾಜಕುಮಾರ್ ಅವರನ್ನ ಕೊಡುಗೈ ದಾನಿ ಅಂದರೆ ತಪ್ಪಾಗಲಾರದು. ಕಾಕ್ರೋಚ್ ಸುಧಿ ಅವರು ಇನ್ನೊಂದು ವಿಷಯವನ್ನು ಸಹ ಹಂಚಿಕೊಂಡಿದ್ದಾರೆ. ಒಮ್ಮೆ ಶೂಟಿಂಗ್ ನಡೆಯುತ್ತಿರುವಾಗ ಸೆಟ್ ಬಾಯ್ ಒಬ್ಬ ತಡವಾಗಿ ಬಂದಿದ್ದರಂತೆ. ತಡವಾಗಿ ಬಂದಿದ್ದಕ್ಕೆ ಡೈರೆಕ್ಟರ್ ಕೇಳಿದಾಗ ಆ ಡೈರೆಕ್ಟರ್ ಮತ್ತು ಸೆಟ್ ಬಾಯ್ ನಡುವಿನ ಮಾತುಕೆಗಳನ್ನ ಕೇಳಿಸಿಕೊಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆ ಹುಡುಗನನ್ನು ಪಕ್ಕಕ್ಕೆ ಕರೆಸಿ, ತಡವಾಗಿ ಯಾಕೆ ಬಂದೆ ಎಂದು ಅವರ ಬಳಿ ಕಾರಣ ಕೇಳಿದಾಗ ಆ ಹುಡುಗ ತಾನು ಬೆಳಿಗ್ಗೆ ಮೂರು ಗಂಟೆಗೇ ಮನೆಯಿಂದ ಹೊರಟು 3 ಬಸ್ ಬದಲಿಸಿ ಬರಬೇಕು ಹಾಗೂ ಬಂದು ಶೂಟಿಂಗ್ ಸೆಟ್ ಗೆ ಬರುವಾಗ ಒಂದೂ ಆಟೋ ಸಿಗಲಿಲ್ಲ ಹಾಗಾಗಿ ತಡವಾಯಿತು ಅಂದು ಹೇಳುತ್ತಾರೆ.
ಅದಕ್ಕೆ ಪುನೀತ್ ರಾಜಕುಮಾರ್ ಅವರು ಇನ್ನೂ ಮುಂದೆ ತಡವಾಗಿ ಬರಬೇಡಿ ನಿಮ್ಮ ಕಷ್ಟ ಅರ್ಥ ಆಗತ್ತೆ ಎಂದು ಹೇಳಿ ಅವರಿಗೆ ಸಮಾಧಾನ ಮಾಡಿದ್ದು ಮಾತ್ರವಲ್ಲದೇ ಸಂಜೆ ಶೂಟಿಂಗ್ ಮುಗಿಯುವ ವೇಳೆಗೆ ತಮ್ಮ RX135 ಬೈಕ್ ಅನ್ನು ಆ ಹುಡುಗನಿಗೆ ನೀಡಿದ್ದರಂತೆ ಅದೂ ಬೈಕ್ ಗೆ ಸಂಬಂಧಿಸಿದ ಎಲ್ಲಾ ಕಾಗದ ಪತ್ರಗಳ ಸಮೇತವಾಗಿ. ಇಂತಹ ಒಬ್ಬ ದೇವತಾ ಮನುಷ್ಯ ಇಂದು ನಮ್ಮ ನಿಮ್ಮ ನಡುವೆ ಇಲ್ಲ ಎನ್ನುವುದೇ ದುಃಖದ ಸಂಗತಿ. ಆದರೂ ಅವರಿಲ್ಲದೇ ಇದ್ದರೂ ಕನ್ನಡಿಗರು ನಾವು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಅವರ ಹೆಸರನ್ನು ಉಳಿಸುವ ಕೆಲಸಗಳನ್ನು ಮಾಡೋಣ.