ನಾವು ಪ್ರತಿದಿನ ಆಹಾರದಲ್ಲಿ ಬಳಸುವ ಕೆಲವು ಪದಾರ್ಥಗಳು ಆರೋಗ್ಯದ ಮೇಲೆ ತುಂಬಾ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತವೆ ಅವುಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರುವುದಿಲ್ಲ ಯಾವ ಯಾವ ಆಹಾರ ಪದಾರ್ಥಗಳಲ್ಲಿ ಯಾವ ಯಾವ ಔಷಧೀಯ ಗುಣಗಳಿವೆ ಎಂಬುದರ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಹಾಗಾಗಿ ನಾವಿಂದು ನಿಮಗೆ ಸಾಸಿವೆ ಎಣ್ಣೆಯ ಉಪಯೋಗಗಳ ಬಗ್ಗೆ ತಿಳಿಸಿಕೊಡುತ್ತೇವೆ. ಭಾರತೀಯ ಅಡುಗೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಸಾರು ಪಲ್ಯ ಮೊದಲಾದ ಖಾದ್ಯಗಳಲ್ಲಿ ಒಗ್ಗರಣೆ ಇಲ್ಲದೆ ರುಚಿಯೇ ಇರುವುದಿಲ್ಲ ಒಗ್ಗರಣೆಯಲ್ಲಿ ಅಗತ್ಯವಾದ ಸಾಮಾನುಗಳೆಂದರೆ ಸಾಸಿವೆಕಾಳು.
ಇದು ನೋಡುವುದಕ್ಕೆ ರಾಗಿಯಂತೆ ಕಾಣಿಸುತ್ತದೆ ಆದರೆ ರಾಗಿಗಿಂತ ಕೊಂಚ ದೊಡ್ಡದಾಗಿರುತ್ತದೆ. ಇದರ ಗಾತ್ರ ಚಿಕ್ಕದಾಗಿದ್ದರೂ ಇದು ಪೋಷಕಾಂಶಗಳ ಆಗರವೂ ಆಗಿದೆ ಜೊತೆಗೆ ಇದರಿಂದ ತೆಗೆದ ಎಣ್ಣೆ ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದ್ದು ಅಡುಗೆಯಲ್ಲಿ ಸುರಕ್ಷಿತವಾಗಿ ಬಳಸಬಹುದಾಗಿದೆ. ಆರೋಗ್ಯ ತಜ್ಞರ ಪ್ರಕಾರ ಆಲಿವ್ ಮೆಕ್ಕೆಜೋಳ ಸೂರ್ಯಕಾಂತಿ ಮತ್ತು ಸಾಸಿವೆ ಎಣ್ಣೆಗಳ ಆಯ್ಕೆ ತುಂಬಾ ಉತ್ತಮವಾದದ್ದು. ಇದಕ್ಕಿಂತ ಮುಖ್ಯವಾಗಿ ಸಾಸಿವೆಯಲ್ಲಿ ಆರೋಗ್ಯಕ್ಕೆ ಲಾಭದಾಯಕವಾದಂತಹ ಅಂಶಗಳಿವೆ. ಅವು ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಮ್ಮೆ ವಾತಾವರಣದಲ್ಲಿನ ಏರುಪೇರುಗಳಿಂದ ಶೀತ ಕೆಮ್ಮು ಕಫ ತಲೆನೋವು ತಲೆ ಸಿಡಿತ ಜ್ವರ ಮೊದಲಾದ ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಇಂತಹ ಸಮಯದಲ್ಲಿ ಸಾಸಿವೆ ಎಣ್ಣೆಯನ್ನು ಅಡುಗೆಯ ಮೂಲಕ ನಿತ್ಯವೂ ಸೇವಿಸುತ್ತಾ ಬಂದರೆ ಎಲ್ಲ ತೊಂದರೆಗಳಿಂದ ಆದಷ್ಟು ಮುಕ್ತಿಯನ್ನು ಹೊಂದಬಹುದು. ಸಾಸಿವೆ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾನಿವಾರಕ ಗುಣ ದೇಹಕ್ಕೆ ಮಾರಕವಾದ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ. ವಿಶೇಷವಾಗಿ ಹೊಟ್ಟೆ ಮೂತ್ರಕೋಶ ಮೂತ್ರ ನಾಳಗಳಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳಿಗೆ ಸಾಸಿವೆ ಎಣ್ಣೆ ಸಿಂಹಸ್ವಪ್ನವಾಗಿದೆ.
ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆಗಳ ಪಟ್ಟಿಯಲ್ಲಿ ಸಾಸಿವೆಯೆಣ್ಣೆ ಮೊದಲನೇ ಸ್ಥಾನವನ್ನು ಪಡೆಯುತ್ತದೆ. ಇದರಲ್ಲಿರುವ ಎಣ್ಣೆ ಕಣಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ನಿವಾರಿಸಿ ಉತ್ತಮ ಕೊಲೆಸ್ಟ್ರಾಲ್ ಗಳನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸುವ ಮೂಲಕ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳದಂತೆ ಸಹಕರಿಸುತ್ತದೆ. ಇದು ಹೃದಯಕ್ಕೆ ಉಂಟಾಗುವ ಹಲವು ತೊಂದರೆಗಳನ್ನು ಬರದಂತೆ ನೋಡಿಕೊಳ್ಳುತ್ತದೆ.
ಇನ್ನು ಮಲಬದ್ಧತೆ ಉಂಟಾದಾಗ ದಿನಕ್ಕೆ ಎರಡರಿಂದ ಮೂರು ಬಾರಿ ನೇರವಾಗಿ ಸಾಸಿವೆ ಎಣ್ಣೆಯನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಮಲ ವಿಸರ್ಜನೆ ಸರಾಗವಾಗಿ ಆಗಿ ಮೂಲವ್ಯಾಧಿ ಆಗದಂತೆ ರಕ್ಷಿಸುತ್ತದೆ ಸಾಸಿವೆ ಎಣ್ಣೆಯಲ್ಲಿ ಸೆನೆಲಿಯಮ್ ಮತ್ತು ಮೆಗ್ನೀಷಿಯಂ ಅಂಶಗಳು ಹೇರಳವಾಗಿದ್ದು ಇವೆರಡರ ಸಂಯೋಜನೆ ಉರಿಯುತಕ್ಕೆ ಪ್ರತಿರೋಧಕ ನೀಡುವ ಗುಣವನ್ನು ಹೊಂದಿದೆ. ನಿಯಮಿತ ಸೇವನೆಯಿಂದ ಈ ಧಾತುಗಳು ಶ್ವಾಸನಾಳಗಳಲ್ಲಿ ಆಗುವ ಸೋಂಕನ್ನು ನಿವಾರಿಸಿ ಅಸ್ತಮಾ ಶೀತ ಮತ್ತು ಕಫ ಕಟ್ಟಿರುವ ಎದೆ ಗೂಡನ್ನು ತೆರವುಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ ಶ್ವಾಸ ಸಂಬಂಧಿ ರೋಗವನ್ನು ದೂರಮಾಡುತ್ತದೆ.
ಈ ರೀತಿಯಾಗಿ ಸಾಸಿವೆ ಎಣ್ಣೆ ಆರೋಗ್ಯಕ್ಕೆ ಉತ್ತಮವಾದ ಪ್ರಯೋಜನಕಾರಿಯಾದ ಗುಣವನ್ನು ಹೊಂದಿದೆ ನೀವು ಕೂಡ ಸಾಸಿವೆ ಎಣ್ಣೆಯನ್ನು ಪ್ರತಿನಿತ್ಯ ಬಳಸುವುದರ ಮೂಲಕ ಅದರ ಉಪಯೋಗವನ್ನು ಪಡೆದುಕೊಳ್ಳುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನಿಮ್ಮ ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.