ಮೇಷ ರಾಶಿಯವರಿಗೆ ಗುರುಬಲ ಇರುವುದರಿಂದ ಸಂಕ್ರಾತಿಯಿಂದ ಇವರ ಲೈಫ್ ಹೇಗಿರತ್ತೆ ಗೊತ್ತಾ

0 3

12 ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ರಾಶಿ ಭವಿಷ್ಯವನ್ನು ಹೊಂದಿರುತ್ತಾರೆ. ಅದರಂತೆ ಮೊದಲ ರಾಶಿ ಮೇಷ ರಾಶಿಯವರಿಗೆ ಸಂಕ್ರಾಂತಿ ಯಾವ ರೀತಿಯಲ್ಲಿ ಫಲ ಕೊಡಲಿದೆ ಎಂದು ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ.

ದ್ವಾದಶ ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿಯವರ ಸಂಕ್ರಾಂತಿ ಭವಿಷ್ಯ ಹೇಗಿದೆ ಎಂದು ನೋಡುವುದಾದರೆ 10 ನೆ ಮನೆಗೆ ಸೂರ್ಯ ಪ್ರವೇಶ ಮಾಡುತ್ತಾನೆ. ಎಲ್ಲ ರೀತಿಯಿಂದಲೂ ಒಳ್ಳೆಯದಾಗುತ್ತದೆ ಆರೋಗ್ಯದ ವಿಷಯದಲ್ಲಿಯೂ ಉತ್ತಮವಾಗಿದೆ. ಬಂಧುಬಳಗ, ಮಿತ್ರರು ಮನೆಗೆ ಬಂದು ಹೋಗುತ್ತಾರೆ ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡುಬರುತ್ತದೆ.

ಮೇಷ ರಾಶಿಯವರಿಗೆ ಈ ಸಮಯದಲ್ಲಿ ರಾಜಯೋಗ ಇರಲಿದೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದೆ, ರಾಜಕೀಯ ವ್ಯಕ್ತಿಗಳಿಂದ ಸಹಾಯವಾಗುತ್ತದೆ. ಈ ಸಮಯದಲ್ಲಿ ಮೇಷ ರಾಶಿಯವರು ಕೈಗೊಂಡ ಕಾರ್ಯ ಈಡೇರುತ್ತದೆ. 11 ನೆ ಮನೆಗೆ ಗುರು ಪ್ರವೇಶ ಮಾಡುವುದರಿಂದ ಮೇಷ ರಾಶಿಯವರಿಗೆ ಗುರುಬಲವಿದೆ ಕುಜದೋಷ ನಿವಾರಣೆಯಾಗಿ 16 ನೇ ತಾರೀಖಿನಿಂದ ಕುಜನು ಮೇಷ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತಾನೆ ಇದರಿಂದ ವ್ಯಾಪಾರ, ಕಂಪ್ಯೂಟರ್ ಗೆ ಸಂಬಂಧಿಸಿದ ಕೆಲಸ ಮಾಡುವ ಮೇಷ ರಾಶಿಯವರಿಗೆ ಒಳ್ಳೆಯದಾಗುತ್ತದೆ. 8 ನೇ ಮನೆಯಲ್ಲಿ ಕೇತು ಇದ್ದು ಸರ್ಪಶಾಂತಿ ಮಾಡಬೇಕು ಅಥವಾ ಆದಿಶೇಷ, ಅನಂತ ಶಯನ ದೇವರ ಧ್ಯಾನ ಮಾಡಿದಾಗ ಸರ್ಪದೋಷ ನಿವಾರಣೆಯಾಗುತ್ತದೆ. ಕೆಟ್ಟ ಸ್ವಪ್ನಗಳು ಬರುತ್ತಿದ್ದರೆ ಈ ಸಮಯದಲ್ಲಿ ನಿವಾರಣೆಯಾಗುತ್ತದೆ.

ಮೇಷ ರಾಶಿಯವರು ದೇವರ ಧ್ಯಾನ, ಪೂಜೆಗಳಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ರೀತಿಯಲ್ಲಿ ಒಳ್ಳೆಯದಾಗುತ್ತದೆ. ಮೇಷ ರಾಶಿಯವರಿಗೆ ಸಂಕ್ರಾಂತಿ ವಿಶೇಷ ಫಲ ಕೊಡಲಿದೆ. ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಸಣ್ಣ ಪುಟ್ಟ ಸಮಸ್ಯೆ ಬಿಟ್ಟರೆ ಉಳಿದೆಲ್ಲ ಒಳ್ಳೆಯದಾಗಲಿದೆ. ಇದು ಕೇವಲ ರಾಶಿ ಭವಿಷ್ಯವಾಗಿರುತ್ತದೆ ಮೂಲ ಜಾತಕವನ್ನು ನೋಡಿದಾಗ ಅವರವರ ಭವಿಷ್ಯದ ಬಗ್ಗೆ ಸರಿಯಾಗಿ ತಿಳಿಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಮೇಷ ರಾಶಿಯವರಿಗೆ ತಿಳಿಸಿ.

Leave A Reply

Your email address will not be published.