ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಪಾಲು ಸಿಗುತ್ತೆ ತಿಳಿಯಿರಿ

0 15

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಪಾಲು ಸಿಗುತ್ತದೆ ಇದರ ಬಗ್ಗೆ ಮಾನ್ಯ ಸುಪ್ರೀಂಕೋರ್ಟ್ ಯಾವೆಲ್ಲಾ ಅಂಶಗಳನ್ನು ಸ್ಪಷ್ಟಪಡಿಸಿದೆ ಜೊತೆಗೆ ಈ ಬಗ್ಗೆ ಮಹಿಳೆಯ ಹೊಣೆಗಾರಿಕೆ ಏನು, 1956 ಮತ್ತು 2005 ರ ಕಾಯ್ದೆಗಳಲ್ಲಿ ಮಹಿಳೆಯರಿಗೆ ದೊರಕಬಹುದಾದ ಆಸ್ತಿಗೆ ಸಂಬಂಧಿಸಿದಂತೆ ಯಾವ ಯಾವ ತೀರ್ಪುಗಳನ್ನು ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

1956ರ ಕಾಯ್ದೆ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೆ ಹಕ್ಕು ಇರಲಿಲ್ಲ. 2005ರಲ್ಲಿ ಈ ಕಾಯ್ದೆ ತಿದ್ದುಪಡಿಯಾಗುವ ಮೊದಲು ಅವರಿಗೆ ಯಾವುದೆ ರೀತಿಯಲ್ಲಿ ಆಸ್ತಿಯಲ್ಲಿ ಪಾಲು ಇರಲಿಲ್ಲ. ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ಭಾರತ ಸರ್ಕಾರವು ಮಹಿಳೆಯರ ಆಸ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಹಿಂದೂ ಉತ್ತರಾಧಿಕಾರಿ ಕಾಯ್ದೆ

1956ರನ್ನು ತಿದ್ದುಪಡಿ ಮಾಡಿ ಹಿಂದೂ ಉತ್ತರಾಧಿಕಾರಿ ತಿದ್ದುಪಡಿ ಕಾಯ್ದೆ 2005 ಜಾರಿಗೆ ಬಂದಿದೆ. 2005ರ ಕಾಯ್ದೆ ಜಾರಿಗೆ ಬರುವ ಮೊದಲು ಮನೆಯ ಹಿರಿಯರು ನಿಧನರಾದರು ಸಹ 2005ರ ಕಾಯ್ದೆಯ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಹಕ್ಕಿದೆ ಎಂದು ಮಾನ್ಯ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯ ಪೀಠವು ತೀರ್ಪು ನೀಡಿದೆ.

ಇನ್ನೊಂದು ಪ್ರಕರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನ ಎಕಿ ಸುಕ್ರಿ ಹಾಗೂ ಅಶೋಕ ಭೂಷಣ್ ಅವರ ಪೀಠವು 2005ಕ್ಕಿಂತ ಮೊದಲು ಜನಿಸಿದ ಹೆಣ್ಣುಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕಿದೆ ಎಂದು ತೀರ್ಪು ನೀಡಿದ್ದಾರೆ. ಹಿಂದೂ ಉತ್ತರಾಧಿಕಾರಿ ಕಾಯ್ದೆಯಲ್ಲಿ ಹೆಣ್ಣುಮಕ್ಕಳು ಹುಟ್ಟಿನಿಂದಲೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಉತ್ತರಾಧಿಕಾರ ಹೊಂದಿರುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

2005 ರ ಪ್ರಕಾರ ತಾಯಿ ಹಾಗೂ ತಂದೆಯ ಆಸ್ತಿಯಲ್ಲಿ ಮಗನಷ್ಟೆ ಮಗಳಿಗೂ ಸಹ ಸಮಾನ ಅಧಿಕಾರವಿದೆ. ಮಹಿಳೆಗೆ ನೀಡಿದ ಸಮಾನ ಪಾಲಿನ ಪ್ರಮಾಣದಷ್ಟೆ ಸಹೋದರ ಹಾಗೂ ಸಹೋದರಿಗೂ ನೀಡಲಾಗುವುದು ಹೆಣ್ಣುಮಕ್ಕಳು ತಾವು ಪಡೆದ ಪಾಲನ್ನು ಮಾರಾಟದ ಮೂಲಕ, ವಿಲ್ ಮೂಲಕ ಅಥವಾ ಉಡುಗೊರೆ ರೂಪದಲ್ಲಿ ವಿಲೇವಾರಿ ಮಾಡಬಹುದು.

ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡುಮಕ್ಕಳಿಗೆ ಹಾಗೂ ಹೆಣ್ಣುಮಕ್ಕಳಿಗೆ ಇಬ್ಬರಿಗೂ ಸಮಾನ ಪಾಲು ಪಡೆಯುವ ಅಧಿಕಾರ ನೀಡಲಾಗಿದೆ. 20/12/2004ರ ಮೊದಲು ಪಿತ್ರಾರ್ಜಿತ ಆಸ್ತಿ ವಿಲ್ ಅಥವಾ ಪರಭಾರೆ ಆಗಿದ್ದರೆ ಮಹಿಳೆಗೆ ಹಕ್ಕು ಸಿಗದೆ ಇರಬಹುದು ಆದರೆ ನೋಂದಣಿ ಆಗಿದ್ದಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ಸಿಗುತ್ತದೆ.

ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ದೊರೆತಂತೆ ಕೆಲವು ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು ಕುಟುಂಬದಲ್ಲಿ ಸಾಲ ಅಥವಾ ಋಣಭಾರ ಇದ್ದರೆ ಮಹಿಳೆಯರು ಅದರ ಜವಾಬ್ದಾರಿ ತೆಗೆದುಕೊಳ್ಳಬೇಕು. ತಂದೆ ತಾಯಿಯ ವೈದ್ಯಕೀಯ ಚಿಕಿತ್ಸೆಯನ್ನು ನೋಡಿಕೊಳ್ಳಬೇಕು. 2005ರ ಕಾಯ್ದೆ ತಿದ್ದುಪಡಿಯು ಕೆಲವು ಉದ್ದೇಶಗಳನ್ನು ಹೊಂದಿದೆ. ಗಂಡು-ಹೆಣ್ಣು ಎಂಬ ಲಿಂಗ ತಾರತಮ್ಯ ಮಾಡಬಾರದು. ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಬೇಕು. ಮಹಿಳೆಯರು ಸಮಾಜದಲ್ಲಿ ನ್ಯಾಯಬದ್ಧತೆಯ ಸ್ಥಾನವನ್ನು ಹೊಂದಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಮಹಿಳೆಯರಿಗೆ ತಿಳಿಸಿ.

Leave A Reply

Your email address will not be published.