ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೆಮ್ಮು ಮತ್ತು ಕಫಗಳಿಂದ ಬಳಲುತ್ತಿದ್ದಾರೆ. ವಾತಾವರಣದಲ್ಲಿ ಉಂಟಾಗುವ ಹವಾಮಾನ ಬದಲಾವಣೆ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಮ್ಮು ಕಫವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅದರಿಂದ ಹೊರಬರುವುದಕ್ಕೆ ಮನೆಯಲ್ಲಿ ಸುಲಭವಾಗಿ ಯಾವ ರೀತಿಯಾದಂತಹ ಔಷಧಿಗಳನ್ನು ತಯಾರಿಸಿಕೊಳ್ಳಬಹುದು ಎಂಬುದರ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಮೊದಲನೆಯದಾಗಿ ಮೆಂತೆ ಸೊಪ್ಪನ್ನು ತೆಗೆದು ಕೊಂಡು ಐದು ನೂರು ಎಂ ಎಲ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು ಐದುನೂರು ಎಂ ಎಲ್ ಇರುವ ನೀರು ಎರಡು ನೂರಾ ಐವತ್ತು ಎಂಎಲ್ ಆಗುವವರೆಗೆ ಕುದಿಸಬೇಕು. ನಂತರ ಅದನ್ನು ಸೋಸಿಕೊಂಡು, ಹತ್ತರಿಂದ ಹದಿನೈದು ದಿನ ಒಂದೊಂದು ಗ್ಲಾಸನ್ನು ಕುಡಿದರೆ ಕಫ ಇರಬಹುದು ಕೆಮ್ಮು ಇರಬಹುದು ಅಥವಾ ತಂಡಿಯಿರಬಹುದು
ಶೀತ ಕೆಮ್ಮು ಕಫ ಮೂರು ಕೂಡ ಕಡಿಮೆಯಾಗುತ್ತದೆ. ನೀವು ಕೆಮ್ಮುವಾಗ ಹಳದಿ ಅಥವಾ ಬಿಳಿ ಬಣ್ಣದ ಕಫಹೋಗುತ್ತದೆ ಅವೆಲ್ಲವೂ ಕೂಡ ಕಡಿಮೆಯಾಗುತ್ತದೆ ಜೊತೆಗೆ ಇದು ಲಂಕ್ಸ್ ಗು ಕೂಡ ತುಂಬಾ ಒಳ್ಳೆಯದು. ಈ ರೀತಿಯಾಗಿ ಶೀತ ಕೆಮ್ಮು ಕಫ ವಾದಾಗ ಮೆಂತ್ಯಸೊಪ್ಪನ್ನು ಕುದಿಸಿ ಕುಡಿಯುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು.
ನಿಮಗೆ ಕೆಮ್ಮು ಕಫ ಕಾಣಿಸಿಕೊಂಡಾಗ ಫೇಶಿಯಲ್ ಸ್ಟೀಮ ತೆಗೆದುಕೊಳ್ಳಬೇಕು. ಒಂದು ವೇಳೆ ನಿಮ್ಮ ಬಳಿ ಫೇಶಿಯಲ್ ಸ್ಟೀಮರ್ ಇಲ್ಲದಿದ್ದಾಗ ಮನೆಯಲ್ಲಿ ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನಷ್ಟು ನೀರನ್ನು ಹಾಕಿ ಅದನ್ನು ಚೆನ್ನಾಗಿ ಕುದಿಸಿ ಅದರ ಹವೆಯನ್ನು ತೆಗೆದುಕೊಳ್ಳಬೇಕು ಬೆಡ್ ಶೀಟನ್ನ ಹಾಕಿಕೊಂಡು ಮುಖದ ಮೇಲೆ ಹವೆಯನ್ನು ತೆಗೆದುಕೊಳ್ಳಬೇಕು ನೀವು ಹವೆಯನ್ನು ತೆಗೆದುಕೊಳ್ಳುವಾಗ ಹತ್ತರಿಂದ ಹದಿನೈದು ನಿಮಿಷ ಮೂಗಿನೊಳಗೆ ಹವೆ ಹೋಗುವಂತೆ ಉಸಿರಾಟ ಮಾಡಬೇಕು. ಇದರಿಂದಾಗಿಯೂ ಕೂಡ ಶೀತ ಕಫ ಕಡಿಮೆಯಾಗುತ್ತದೆ.
ಕಫವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇನ್ನೊಂದು ಮನೆ ಮದ್ದು ಯಾವುದು ಎಂದರೆ ಶುಂಠಿ ಕಷಾಯ. ಎರಡು ಲೋಟ ನೀರಿಗೆ ಸ್ವಲ್ಪ ಶುಂಠಿಯನ್ನು ಹಾಕಿ ಅದನ್ನು ಹತ್ತರಿಂದ ಹದಿನೈದು ನಿಮಿಷ ಚೆನ್ನಾಗಿ ಕುದಿಸಬೇಕು. ನಿಮಗೆ ಬೇಕೆನಿಸಿದರೆ ಸ್ವಲ್ಪ ಬೆಲ್ಲವನ್ನು ಬಳಸಬಹುದು. ಶುಂಠಿ ಹಾಕಿ ಕುದಿಸಿದ ನೀರನ್ನು ಸೋಸಿ ಕುಡಿದರೆ ಕೆಮ್ಮು ಕಫ ಶೀತ ಕಡಿಮೆಯಾಗುತ್ತದೆ. ಇದನ್ನು ಒಂದು ದಿನ ಎರಡು ದಿನ ಮಾಡುವುದಲ್ಲ ಹತ್ತರಿಂದ ಹದಿನೈದು ದಿನ ನಿರಂತರವಾಗಿ ಮಾಡುವುದರಿಂದ ಮಾತ್ರ ಕೆಮ್ಮು ಕಫ ಕಡಿಮೆಯಾಗುತ್ತದೆ.
ಇನ್ನೊಂದು ಜೀರಿಗೆ ಕಷಾಯವನ್ನು ಮಾಡಿಕೊಳ್ಳುವುದರಿಂದ ಕಫವನ್ನು ಕಡಿಮೆ ಮಾಡಿಕೊಳ್ಳಬಹುದು. ಜೀರಿಗೆ ಕಷಾಯ ಯಾವ ರೀತಿ ಮಾಡಿಕೊಳ್ಳಬೇಕು ಎಂದರೆ ಎರಡರಿಂದ ಮೂರು ಚಮಚ ಜೀರಿಗೆಯನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿಸಬೇಕು. ಎರಡು ಲೋಟ ನೀರು ಒಂದು ಲೋಟ ಆಗುವವರೆಗೂ ಚೆನ್ನಾಗಿ ಕುದಿಸಬೇಕು ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಐದು ನಿಮಿಷ ಬಿಟ್ಟು ಅದನ್ನು ಸೋಸಿ ಕುಡಿದರೆ ಒಳಗಡೆ ಇರುವಂತಹ ಕಫ ಹೊರಹೋಗುತ್ತದೆ
ಜೊತೆಗೆ ಕೆಮ್ಮು ಕೂಡ ಕಡಿಮೆಯಾಗುತ್ತದೆ. ಈ ರೀತಿಯಾಗಿ ಸುಲಭವಾಗಿ ನೀವು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿಕೊಂಡು ಸುಲಭ ವಿಧಾನದಿಂದ ಔಷಧಿಗಳನ್ನು ತಯಾರಿಸಿಕೊಳ್ಳಬಹುದು. ನೀವು ಕೂಡ ಶೀತ ಕೆಮ್ಮು ಕಫ ಕಾಣಿಸಿಕೊಂಡಾಗ ಈ ಮೇಲಿನ ಮನೆಮದ್ದು ಮದ್ದುಗಳನ್ನು ಮಾಡಿಕೊಳ್ಳುವುದರ ಮೂಲಕ ಅವುಗಳಿಂದ ಮುಕ್ತಿ ಪಡೆಯಬಹುದು ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರ ಜೊತೆಗೆ ಇತರರಿಗೂ ತಿಳಿಸಿರಿ.