ನಿತ್ಯ ಜೀವನದಲ್ಲಿ ನಾವು ಕೆಲಸದ ನಿಮಿತ್ತವೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ಪ್ರಯಾಣವನ್ನು ಮಾಡಲೇಬೇಕಾಗುತ್ತದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುವಾಗಲೆಲ್ಲ ನಮಗೆ ಅಲ್ಲಲ್ಲಿ ಮೈಲಿಗಲ್ಲುಗಳು ಕಾಣಸಿಗುತ್ತವೆ ಆದರೆ ನಾವ್ಯಾರೂ ಮೈಲುಗಲ್ಲುಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಹಾಗೆ ಪ್ರಯಾಣವನ್ನು ಮುಂದುವರಿಸುತ್ತೇವೆ. ನಾವಿಂದು ರಸ್ತೆ ಬದಿಯಲ್ಲಿರುವ ಮೈಲಿಗಲ್ಲುಗಳ ಬಗ್ಗೆ ಕುರಿತಾದ ಒಂದಿಷ್ಟು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಲ್ಲಾ ಮೈಲಿಗಲ್ಲುಗಳ ಶೇಕಡ ಎಂಬತ್ತರಷ್ಟು ಭಾಗ ಬಿಳಿ ಬಣ್ಣದಲ್ಲಿದ್ದರೆ ಉಳಿದ ಇಪ್ಪತ್ತರಷ್ಟು ಭಾಗ ಹಳದಿ ಹಸಿರು ಕಿತ್ತಳೆ ಕಪ್ಪು ಅಥವಾ ನೀಲಿ ಬಣ್ಣವನ್ನು ಹೊಂದಿರುತ್ತದೆ. ಒಂದೊಂದು ಕಡೆ ಮೈಲಿಗಲ್ಲುಗಳ ಬಣ್ಣ ಒಂದೊಂದು ರೀತಿಯಲ್ಲಿ ಇರುತ್ತದೆ. ಈ ಬಣ್ಣಗಳು ನಾವು ಸಂಚಾರ ಮಾಡುತ್ತಿರುವ ರಸ್ತೆಯ ಕುರಿತಾದ ಮಾಹಿತಿಯನ್ನು ತಿಳಿಸುತ್ತವೆ.

ಅದು ಹೇಗೆಂದರೆ ಮೈಲುಗಲ್ಲಿನ ಕೆಳಭಾಗ ಬಿಳಿ, ಮೇಲ್ಭಾಗ ಹಳದಿ ಆಗಿದ್ದರೆ ನಾವು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದೇವೆ ಎಂದು ಅರ್ಥ. ರಾಷ್ಟ್ರೀಯ ಹೆದ್ದಾರಿಗಳನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿರುತ್ತದೆ ಈ ರಸ್ತೆಯ ನಿರ್ಮಾಣ ಗಳಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ. ಆ ರಸ್ತೆಗಳನ್ನು ನಿರ್ಮಾಣ ಮಾಡುವುದಕ್ಕೆ ತಗಲುವ ಎಲ್ಲಾ ಖರ್ಚು ವೆಚ್ಚವನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ.

ಹಾಗಾಗಿ ಹಳದಿಬಣ್ಣದ ಮೈಲಿಗಲ್ಲು ಕಾಣಿಸಿಕೊಂಡರೆ ಅದು ರಾಷ್ಟ್ರೀಯ ಹೆದ್ದಾರಿ ಎಂದು ಅರ್ಥ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಗಳ ನಿರ್ಮಾಣವನ್ನು ಮಾಡುತ್ತದೆ ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ನಗರಗಳು ಹಾಗೂ ರಾಜ್ಯಗಳಿಗೆ ಸಂಪರ್ಕವನ್ನು ಒದಗಿಸುತ್ತವೆ. ನಮ್ಮ ದೇಶದಲ್ಲಿ ಸರಿ ಸುಮಾರು ಎಪ್ಪತ್ತು ಸಾವಿರ ಕಿಲೋಮೀಟರ್ ಗಳಿಗಿಂತಲೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳಿವೆ ಈ ರಾಷ್ಟ್ರೀಯ ಹೆದ್ದಾರಿಗಳನ್ನು ಉತ್ತರ-ದಕ್ಷಿಣ ಪೂರ್ವ-ಪಶ್ಚಿಮ ಹಾಗೂ ಗೋಲ್ಡನ್ ಬಾರ್ಡರ್ ಲ್ಯಾಟರ್ ಇಂದು ವರ್ಗೀಕರಿಸಲಾಗಿದೆ.

ಕರ್ನಾಟಕದಲ್ಲಿ ಒಟ್ಟು ಆರು ಸಾವಿರದ ನಾಲ್ಕು ನೂರಾ ಮೂವತ್ತೆರಡು. ಎರಡು ಎಂಟು ಕಿಲೋಮೀಟರಿನಷ್ಟು ರಾಷ್ಟ್ರೀಯ ಹೆದ್ದಾರಿಗಳಿವೆ ಸರಿಸುಮಾರು ಹದಿನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಕರ್ನಾಟಕದ ಮೂಲಕ ಹಾದುಹೋಗುತ್ತವೆ. ಎನ್ಎಚ್ ನಾಲ್ಕು ಇದು ಕರ್ನಾಟಕದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಯಾಗಿದೆ.ಇದರ ಉದ್ದ ಆರು ನೂರಾ ತೊಂಬತ್ತೊಂಬತ್ತು. ಐದು ಎಂಟು ಕಿಲೋಮೀಟರ್. ಈ ಹೆದ್ದಾರಿ ಮಹಾರಾಷ್ಟ್ರದ ಗಡಿಯಿಂದ ಆರಂಭವಾಗಿ ಬೆಳಗಾವಿ ಹುಬ್ಬಳ್ಳಿ ಚಿತ್ರದುರ್ಗ ಬೆಂಗಳೂರು ಆಂಧ್ರಪ್ರದೇಶದ ಗಡಿ ಮೂಲಕ ಹಾದುಹೋಗುತ್ತದೆ.

ಎನ್ ಎಚ್ ನಂಬರ್ ನಾಲ್ಕು ಎನ್ ಎಚ್ ನಂಬರ್ ಏಳು ಎನ್ ಎಚ್ ನಂಬರ್ ಒಂಬತ್ತು ಎನ್ ಎಚ್ ನಂಬರ್ ಹದಿಮೂರು ಎನ್ ಎಚ್ ಹದಿನೇಳು ಎನ್ ಎಚ್ ನಂಬರ್ ನಲವತ್ತೆಂಟು ಎನ್ ಎಚ್ ಎರಡು ನೂರಾ ಆರು ಎನ್ ಎಚ್ ನಂಬರ್ ಎರಡು ನೂರಾ ಒಂಬತ್ತು ಎನ್ ಎಚ್ ನಂಬರ್ ಎರಡು ನೂರಾ ಹನ್ನೆರಡು ಎನ್ ಎಚ್ ಅರವತ್ಮೂರು ಎನ್ ಎಚ್ ಎರಡು ನೂರಾ ಹದಿನೆಂಟು ಇವು ಕರ್ನಾಟಕ ರಾಜ್ಯದಲ್ಲಿ ಹಾದು ಹೋಗುವ ಕೆಲವು ರಾಷ್ಟ್ರೀಯ ಹೆದ್ದಾರಿಗಳು ಆಗಿವೆ.

ರಾಷ್ಟ್ರೀಯ ಹೆದ್ದಾರಿ ನಲವತ್ನಾಲ್ಕು ಭಾರತದ ಅತಿ ಉದ್ದದ ನ್ಯಾಷನಲ್ ಹೈವೇ ಆಗಿದ್ದು ಇದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಾದ ಶ್ರೀನಗರದಿಂದ ಪ್ರಾರಂಭವಾಗಿ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ. ಹೆದ್ದಾರಿಯ ಮೂಲಕ ಹಾದು ಹೋಗುವ ಪ್ರಮುಖ ನಗರಗಳೆಂದರೆ ಶ್ರೀನಗರ ಜಮ್ಮು ಪಠಾನ್ಕೋಟ್ ಜಲಂಧರ್ ಲೂಧಿಯಾನ ಪಾಣಿಪತ್ ದೆಹಲಿ ಫರಿದಾಬಾದ್ ಮಥುರಾ ಅಗ್ರವಲ್ ವಾಲಿಯಾರ್ ನಾಗ್ಪೂರ್ ಹೈದರಾಬಾದ್ ಕರ್ನೂರ್ ಅನಂತಪುರ ಬೆಂಗಳೂರು ದಿಂಡಿಗಲ್ ಮದುರೈ ಹಾಗೂ ಕನ್ಯಾಕುಮಾರಿ ಆಗಿದೆ.

ಮೈಲಿಗಲ್ಲುಗಳ ಮೇಲ್ಭಾಗದಲ್ಲಿ ಹಸಿರುಬಣ್ಣ ಇದ್ದರೆ ನೀವು ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದೀರಿ ಎಂದು ಅರ್ಥ. ಈ ರಾಜ್ಯ ಹೆದ್ದಾರಿಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಮಾಣ ಮಾಡಿರುತ್ತವೆ ನಮ್ಮ ರಾಜ್ಯದಲ್ಲಿ ಇಪ್ಪತ್ತೆಂಟು ಸಾವಿರದ ಮುನ್ನುರಾ ಹನ್ನೊಂದು ಕಿಲೋಮೀಟರ್ ಗಳಷ್ಟು ರಾಜ್ಯ ಹೆದ್ದಾರಿಗಳಿದ್ದು ಬೆಳಗಾವಿ ಅತಿ ಉದ್ದದ ರಾಜ್ಯ ಹೆದ್ದಾರಿಯನ್ನು ಹೊಂದಿದೆ. ಒಟ್ಟು ನೂರಾ ಹದಿನೈದು ರಾಜ್ಯ ಹೆದ್ದಾರಿಗಳನ್ನು ಕರ್ನಾಟಕದಲ್ಲಿ ನೋಡಬಹುದಾಗಿದೆ.

ನೀವು ಸಾಗುತ್ತಿರುವ ರಸ್ತೆಯಲ್ಲಿ ಕಪ್ಪು ನೀಲಿ ಮತ್ತು ಬಿಳಿ ಬಣ್ಣದ ಮೈಲಿಗಲ್ಲುಗಳನ್ನು ಕಂಡರೆ ನೀವು ಆ ನಗರದ ಮುಖ್ಯ ರಸ್ತೆಯಲ್ಲಿ ಇದ್ದೀರಿ ಎಂದು ಅರ್ಥ. ಇದನ್ನು ಸ್ಥಳೀಯ ಸರ್ಕಾರ ಅಂದರೆ ಜಿಲ್ಲಾಡಳಿತಗಳು ನಿರ್ಮಾಣ ಮಾಡಿರುತ್ತವೆ. ನೀವು ಓಡಾಡುತ್ತಿರುವ ರಸ್ತೆ ಹಳ್ಳಿಯಲ್ಲಿದ್ದರೆ ರಸ್ತೆಯಲ್ಲಿ ಕೇಸರಿ ಬಣ್ಣದ ಮೈಲಿಗಲ್ಲುಗಳನ್ನು ಕಾಣಬಹುದು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ರಸ್ತೆಗಳಲ್ಲಿರುವ ಮೈಲಿಗಲ್ಲುಗಳ ಮೇಲೆ ಕೇಸರಿ ಬಣ್ಣವನ್ನು ಹಚ್ಚಲಾಗುತ್ತದೆ.

ಈ ರೀತಿಯಾಗಿ ಬೇರೆ ಬೇರೆ ಬಣ್ಣಗಳ ಮೈಲಿಗಲ್ಲುಗಳ ಮೂಲಕವಾಗಿ ರಸ್ತೆಗಳನ್ನು ಯಾರು ನಿರ್ಮಿಸಿದ್ದಾರೆ ಎಂಬುದನ್ನು ಗುರುತಿಸಬಹುದಾಗಿದೆ. ಅಲ್ಲದೇ ನಾವು ಯಾವ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಇದಷ್ಟೇ ಅಲ್ಲದೆ ಹೆದ್ದಾರಿಗಳಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಪಟ್ಟಿಗಳನ್ನು ಹಾಕಿರಲಾಗುತ್ತದೆ. ಈ ಪಟ್ಟಿಗಳು ಕೂಡ ವಾಹನ ಚಾಲಕರಿಗೆ ಸಂಚಾರದ ಸಂದೇಶವನ್ನು ನೀಡುತ್ತವೆ.

ರಸ್ತೆ ಮಧ್ಯದಲ್ಲಿ ಬಿಡಿಬಿಡಿಯಾಗಿ ಬಿಳಿ ಬಣ್ಣದ ಪಟ್ಟಿಗಳನ್ನು ಬರೆದಿದ್ದರೆ ನೀವು ಯಾವುದೇ ಸಂದರ್ಭದಲ್ಲಿಯೂ ಲೈನನ್ನು ಬದಲಾಯಿಸಬಹುದು. ಯು ಟರ್ನ್ ಮಾಡಬಹುದು ಅಗತ್ಯವಿದ್ದರೆ ಗಾಡಿಗಳನ್ನು ಓವರ್ ಟೆಕ್ ಮಾಡಬಹುದು ಎಂದು ಅರ್ಥ. ಅದೇ ಬಿಳಿಬಣ್ಣದ ಗೆರೆಗಳನ್ನು ರಸ್ತೆಯ ಮೇಲೆ ಸ್ಥಿರವಾಗಿ ಉದ್ದಕ್ಕೆ ಯಾವುದೇ ಗ್ಯಾಪ್ ಇಲ್ಲದೆ ಬರೆದಿದ್ದರೆ ವಾಹನಗಳನ್ನು ಓವರ್ ಟೆಕ್ ಮಾಡಬಾರದು ಹಾಗೆ ಯು ಟರ್ನ್ ತೆಗೆದುಕೊಳ್ಳಬಾರದು ಮತ್ತು ವಾಹನಗಳು ತಮ್ಮ ಲೈನಲ್ಲಿಯೇ ಸಾಗಬೇಕು ಎಂದು ಅರ್ಥ.

ಇನ್ನು ಹೆದ್ದಾರಿಗಳ ಮೇಲೆ ಎರಡು ಸ್ಥಿರವಾದ ಹಳದಿಬಣ್ಣದ ಗೆರೆಗಳಿದ್ದರೆ ಓವರ್ ಟೆಕ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಅರ್ಥ. ಈ ಪಟ್ಟಿಕೆಗಳು ಸಾಮಾನ್ಯವಾಗಿ ಒಂದೇ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಎರಡು ಲೇನ್ ಗಳ ರಸ್ತೆಗಳ ಮೇಲಿರುತ್ತದೆ. ಇದಿಷ್ಟೂ ರಸ್ತೆಗಳ ಮೇಲೆ ಮತ್ತು ಮೈಲುಗಲ್ಲುಗಳ ಮೇಲೆ ಇರುವ ಬಣ್ಣಗಳ ಮಾಹಿತಿ.

ದಯವಿಟ್ಟು ಪ್ರತಿಯೊಬ್ಬರು ಮೋಟಾರ್ ಬೈಕಿನಲ್ಲಿ ಸಂಚರಿಸುವಾಗ ಹೆಲ್ಮೆಟ್ ಅನ್ನು ಧರಿಸಿ ಮತ್ತು ಕಾರಿನಲ್ಲಿ ಸಂಚರಿಸುವಾಗ ಸೀಟ್ ಬೆಲ್ಟ್ ಅನ್ನು ಹಾಕಿ ಕೊಳ್ಳಿ ಪ್ರತಿಯೊಬ್ಬರ ಜೀವವು ಅಮೂಲ್ಯವಾದದ್ದು ಒಂದು ಸಣ್ಣ ನಿರ್ಲಕ್ಷದಿಂದ ಜೀವ ಹೋಗುವ ಸಾಧ್ಯತೆ ಇರುತ್ತದೆ ಹೀಗಾಗಿ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರಿ.

Leave a Reply

Your email address will not be published. Required fields are marked *