ಇಂದಿನ ದಿನದಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ ನಾವು ವಿಧ ವಿಧವಾದ ಶಾಂಪೂ ಅನ್ನು ಬಳಸುವುದರಿಂದ ಕೂದಲಿಗೆ ಪೋಷಣೆ ನೀಡುತ್ತಿಲ್ಲ ಹೀಗಾಗಿ ಕೂದಲಿಗೆ ಪೋಷಣೆ ಸಿಗದೆ ಕೂದಲಿನ ಸಮಸ್ಯೆ ಹೆಚ್ಚಾಗಿದೆ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ನಾವು ಕೂದಲಿಗೆ ರಕ್ಷಣೆ ಒದಗಿಸಬಹುದು ಕೂದಲಿನ ಸಮಸ್ಯೆಗಳು ಹಲವಾರು ಕಂಡು ಬರುತ್ತದೆ
ಕೆಲವರಿಗೆ ಕೂದಲು ಉದುರುವುದು ತೊಂದರೆಯಾದರೆ ಮತ್ತೆ ಕೆಲವರಿಗೆ ಕೂದಲು ಬೆಳ್ಳಗಾಗುವುದು ಹಾಗೆಯೇ ಕೂದಲಿನ ಬುಡದಲ್ಲಿ ಹೊಟ್ಟು ಕಾಣಿಸಿಕೊಳ್ಳುತ್ತದೆ ಕೂದಲಿನ ತುದಿಗಳು ಟಿಸಿಲೊಡೆಯುತ್ತದೆ ಕೂದಲಿನ ನೈಸರ್ಗಿಕ ಬಣ್ಣವನ್ನು ಕಳೆದುಕೊಂಡು ಬೆಳ್ಳಗೆ ಅಥವಾ ಕಂದು ಬಣ್ಣಕ್ಕೆ ತಿರುಗುವುದು ಹೀಗೆ ಸಮಸ್ಯೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ನಾವು ಈ ಲೇಖನದ ಮೂಲಕ ಕೂದಲಿನ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿದುಕೊಳ್ಳೋಣ.
ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರಲ್ಲೂ ಕಾಣಿಸುತ್ತದೆ ಮತ್ತು ಇಂದಿನ ದಿನಮಾನದಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಕೂದಲು ಉದುರುತ್ತದೆ ಈ ಕೂದಲು ಉದುರುವ ಸಮಸ್ಯೆಯಿಂದ ಹೊರಬರಲು ಮನೆಯಲ್ಲಿ ಉಪಯೋಗಿಸುವ ಟಿ ಪೌಡರ್ ತುಂಬಾ ಉಪಯುಕ್ತ ಹಾಗೂ ಬಿಳಿ ಕೂದಲು ಆಗದಂತೆ ತಡೆಯುತ್ತದೆ ಹಾಗೂ ಕೂದಲ ಬೆಳವಣಿಗೆಗೆ ಟಿ ಪವರ್ ತುಂಬಾ ಪ್ರಯೋಜನವನ್ನು ಹೊಂದಿದೆ ಮತ್ತು ಮುಖದ ಸೌದರ್ಯ ಕ್ಕೂ ತುಂಬಾ ಸಹಕಾರಿಯಾಗಿದೆ
ಹಾಗಾಗಿ ಟಿ ಪೌಡರ್ ಅನ್ನು ನುಣ್ಣಗೆ ಕುಟ್ಟಿಕೊಳ್ಳಬೇಕು ಹಾಗೆಯೇ ಕಾಪಿ ಪೌಡರ್ ಸಹ ಹೆಚ್ಚು ಉಪಯೋಗವನ್ನು ಹೊಂದಿದ್ದು ಕೂದಲಿಗೆ ಬಣ್ಣ ಹಾಗೂ ಹೊಳಪನ್ನು ನೀಡುತ್ತದೆ ಹಾಗಾಗಿ ಎರಡು ಚಮಚ ಕಾಫಿ ಪೌಡರ್ ತೆಗೆದುಕೊಳ್ಳಬೇಕು ಕಾಫಿ ಪೌಡರ್ ಬಳಸುದರಿಂದ ತಲೆಯಲ್ಲಿ ಹೇನು ಅಥವಾ ಹೊಟ್ಟು ಆದರೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ .
ಕೂದಲು ವೇಗವಾಗಿ ಬೆಳೆಯಲು ಕಾಫಿ ಪೌಡರ ಸಹಾಯಕಾರಿಯಾಗಿದೆ ಕಾಫಿ ಪೌಡರ್ ನ ಗುಣ ಕೂದಲನ್ನು ದಪ್ಪವಾಗಿ ಬೆಳೆಯಲು ಸಹಾಯಕಾರಿಯಾಗಿದೆ ಮೂರರಿಂದ ನಾಲ್ಕು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕು ಕೊಬ್ಬರಿ ಎಣ್ಣೆ ಕೂದಲ ಬೆಳವಣಿಗೆಗೆ ಸಹಾಯಕಾರಿಯಾಗಿದೆ .ಕೊಬ್ಬರಿ ಎಣ್ಣೆಗೆ ಐದಾರು ಹನಿ ನಿಂಬೆ ರಸವನ್ನು ಹಾಕಬೇಕು ಮತ್ತು ಪೌಡರ್ ತರ ಇರುವ ಟಿ ಪೌಡರ ಸಹ ಹಾಕಬೇಕು ಹಾಗೆಯೇ ಎರಡು ಚಮಚ ಕಾಫಿ ಪೌಡರ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು
ಸರಿಯಾಗಿ ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು ಒಂದು ತಿಂಗಳವರೆಗೆ ತಲೆ ಕೂದಲಿಗೆ ಹಚ್ಚ ಬಹುದು ಈ ರೀತಿ ಮಾಡಿ ಕೂದಲಿಗೆ ಹಚ್ಚುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ ಕೊಬ್ಬರಿ ಎಣ್ಣೆ ಗೆ ಲಿಂಬು ರಸ ಕಾಫಿ ಪುಡಿ ಮತ್ತು ಚಹಾ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಒಂದು ಸ್ಟೀಲ್ ಪಾತ್ರೆಯಲ್ಲಿ ಬಿಸಿ ನೀರನ್ನು ಮಾಡಿಕೊಂಡು ಮಿಶ್ರಣ ಮಾಡಿದ ಬೌಲ್ ಅನ್ನು ಇಡಬೇಕು ಇದರಿಂದ ಬಿಸಿಯಾಗುವ ಜೊತೆಗೆ ಚಹಾ ಪುಡಿ ಮತ್ತು ಕಾಫಿ ಪುಡಿ ಸಹ ಸರಿಯಾಗಿ ಮಿಕ್ಸ್ ಆಗುತ್ತದೆ ಹಾಗೆಯೇ ಅವುಗಳ ಪೋಷಕಾಂಶವನ್ನು ಬಿಡುತ್ತದೆ .
ಎಣ್ಣೆಯನ್ನು ಬಿಸಿ ಮಾಡಿಕೊಂಡ ನಂತರ ಸೋಸಿಕೊಳ್ಳಬೇಕು ಕೊಬ್ಬರಿ ಎಣ್ಣೆಯಲ್ಲಿ ಕಾಫಿ ಪುಡಿ ಮತ್ತು ಲಿಂಬೆ ರಸ ಚಹಾ ಪುಡಿ ಸೇರಿಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚುದರಿಂದ ಕೂದಲಿಗೆ ಬೇಕಾದ ನ್ಯೂಟ್ರಿಷನ್ ಸಿಗುತ್ತದೆ ಹೀಗೆ ಮನೆಯಲ್ಲೇ ಎಣ್ಣೆಯನ್ನು ಸಿದ್ಧ ಮಾಡಿಕೊಳ್ಳುವುದರಿಂದ ಒಣ ಕೂದಲು ಅಥವಾ ಒರಟು ಕೂದಲು ಇರುವರಿಗೆ ತುಂಬಾ ಉಪಯೋಗವಾಗುತ್ತದೆ ಹಾಗೂ ಕೂದಲು ಸದೃಢವಾಗುತ್ತದೆ ಕೂದಲಿಗೆ ಹಚ್ಚುವಾಗ ಸ್ವಲ್ಪ ಬಿಸಿ ಮಾಡಿ ಹಚ್ಚಬೇಕು ಇದರಿಂದ ಕೂದಲಿಗೆ ರಕ್ತಸಂಚಾರ ಸುಗಮವಾಗುತ್ತದೆ
ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಕೂದಲಿನ ಬುಡ ಸದೃಢವಾಗಿ ಇರುತ್ತದೆ ಬಿಳಿ ಕೂದಲು ಆಗುತ್ತಿರುವರು ಹಚ್ಚಿದರೆ ಕೂದಲು ತನ್ನಷ್ಟಕ್ಕೆ ತಾನೆ ಕಪ್ಪಾಗುತ್ತದೆ ಹಾಗೂ ವಾರದಲ್ಲಿ ಎರಡು ಸಹ ತಲೆಗೆ ಹಚ್ಚಬೇಕು ಈ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಶಾಂಪೂ ತಲೆ ಕೂದಲಿಗೆ ಹಚ್ಚಬಾರದು ಅಂಟವಾಳ ಮತ್ತು ಶಿಗೇಕಾಯಿ ಪುಡಿಮಾಡಿ ದಾಸವಾಸ ಹೂವಿನ ಪೇಸ್ಟ್ ಮಾಡಿಕೊಂಡು ತಲೆಯ ಕೂದಲಿಗೆ ಶಾಂಪೂ ಆಗಿ ಬಳಸುದರಿಂದ ಸಹ ಕೂದಲಿಗೆ ತುಂಬಾ ಸಹಾಯಕಾರಿಯಾಗಿದೆ ಈ ರೀತಿ ಎಣ್ಣೆಯನ್ನು ಮನೆಯಲ್ಲೇ ಮಾಡುವುದರಿಂದ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.