ಕೃಷಿ ಎಂದರೆ ಎಲ್ಲರೂ ಮೂಗು ಮುರಿಯುವವರೆ ಕೃಷಿ ಮಾಡುವುದರಿಂದ ಲಾಭ ಗಳಿಸಲು ಸಾಧ್ಯವಿಲ್ಲ ಎನ್ನುವುದು ಹಲವರ ವಾದ ಆದರೆ ಕೃಷಿ ಮಾಡುವುದರ ಜೊತೆಗೆ ಕುರಿ, ಮೇಕೆ ಸಾಕಾಣಿಕೆ ಮಾಡುವುದರಿಂದ ಆದಾಯ ಗಳಿಸಬಹುದು ಹಾಗಾದರೆ ಕುರಿ ಹಾಗೂ ಮೇಕೆ ಸಾಕಾಣಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ರೈತರು ಇದೀಗ ಪಶುಸಂಗೋಪನೆಯಲ್ಲಿ ಬಹಳಷ್ಟು ಆಸಕ್ತಿಯನ್ನು ತೋರಿಸುತ್ತಿದ್ದಾರೆ ಕಾರಣ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಆದಾಯ ಬರುವ ಒಂದು ಪ್ರಮುಖ ವ್ಯವಸಾಯದ ಪದ್ಧತಿಯಾಗಿದೆ ಎಂದು ಹೇಳಬಹುದು ಆದರೆ ಕುರಿ ಹಾಗೂ ಮೇಕೆ ಸಾಕಾಣಿಕೆ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಬಹುದು.
ಎಲ್ಲರೂ ಕುರಿ ಸಾಕಾಣಿಕೆ ಹಾಗೂ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಕುರಿ ಹಾಗೂ ಮೇಕೆ ಸಾಕಾಣಿಕೆ ಶೇಡ ಅಥವಾ ಘಟಕ ಸ್ಥಾಪನೆಗೆ ಹಣದ ಅವಶ್ಯಕತೆ ಇರುತ್ತದೆ ಆದರೆ ರೈತರ ಕೈಯಲ್ಲಿ ಹಣ ಇಲ್ಲದೆ ಇರುವ ಕಾರಣ ಹಲವಾರು ರೈತರು ಕುರಿ ಹಾಗೂ ಮೇಕೆ ಸಾಕಾಣಿಕೆಯಲ್ಲಿ ಮುಂದೆ ಬರುತ್ತಿಲ್ಲ.
ನಿಜವಾಗಿಯೂ ಮೇಕೆ ಹಾಗೂ ಕುರಿ ಸಾಕಾಣಿಕೆಯಲ್ಲಿ ಲಾಭ ಗಳಿಸಬಹುದು ಹೀಗಾಗಿ ಕುರಿ ಹಾಗೂ ಮೇಕೆ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡುತ್ತಿದ್ದು ರೈತರು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕುರಿ, ಮೇಕೆ ಘಟಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕುರಿ ಮತ್ತು ಮೇಕೆ ಘಟಕಗಳ ಅನುಷ್ಟಾನಕ್ಕಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಸದಸ್ಯರುಗಳು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ಸಹಾಯಕ ನಿರ್ದೇಶಕರು ಅಥವಾ ತಮ್ಮ ವ್ಯಾಪ್ತಿಯಲ್ಲಿ ಬರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯವರಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2488830 ಸಂಪರ್ಕಿಸಬಹುದು. ಆಸಕ್ತಿ ಇರುವ ರೈತರು ಮೇಲೆ ನೀಡಿದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಎಲ್ಲಾ ಅಗತ್ಯವಾಗಿರುವ ದಾಖಲೆಗಳನ್ನು ಕೇಳಿ ನೇರವಾಗಿ ಅರ್ಜಿಯನ್ನು ಸಲ್ಲಿಸುವ ಮೂಲಕ ದೊಡ್ಡ ಪ್ರಮಾಣದ ಕುರಿ ಹಾಗೂ ಮೇಕೆ ಘಟಕಗಳ ಸ್ಥಾಪನೆಯನ್ನು ಮಾಡಬಹುದು.
ವಿಶೇಷ ಸೂಚನೆ ಈ ವಿಷಯ ಕೇವಲ ತುಮಕೂರು ಜಿಲ್ಲೆಗೆ ಮಾತ್ರ ಸಂಬಂಧಿತವಾಗಿದೆ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಆ ಸಮಯದಲ್ಲಿ ಎಲ್ಲಾ ಭಾಗದ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ರೈತ ಬಾಂಧವರು ಈ ಯೋಜನೆಯ ಲಾಭ ಪಡೆದು ಹೆಚ್ಚಿನ ಆದಾಯ ಗಳಿಸಬಹುದು.