ಒಬ್ಬ ಮನುಷ್ಯನ ಜೀವನದಲ್ಲಿ ಅವನ ಜೀವನಗಾಥೆಯನ್ನು ನೋಡಿದಾಗ ಅದರಲ್ಲಿ ಕಷ್ಟ-ಸುಖ ಏಳುಬೀಳು ಸೋಲು-ಗೆಲುವು ಇರುವುದು ಸಹಜ ಅಂತಹ ಜೀವನವನ್ನು ಸಾಗಿಸಿದವರಲ್ಲಿ ಒಬ್ಬರು ಥ್ರಿಲ್ಲರ್ ಮಂಜು. ಅವರ ಬಾಲ್ಯ ಜೀವನದ ಬಗ್ಗೆ ಕೆಲವು ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಥ್ರಿಲ್ಲರ್ ಮಂಜು ಅವರು ಹುಟ್ಟಿರುವುದು ಬಯಲುಸಂದ್ರದಲ್ಲಿ ಇವರ ತಂದೆ ಸಿ ಹನುಮಂತಪ್ಪ ರೆಡ್ಡಿ ಊರಿಗೆ ಪಟೇಲರು. ತಾಯಿಯ ಹೆಸರು ಎ ರುಕ್ಮಿಣಿಯಮ್ಮ. ಇವರ ಹೆಸರು ಎಂಎಚ್ ಮಂಜುನಾಥರೆಡ್ಡಿ ಇವರಿಗೆ ಒಬ್ಬ ಅಣ್ಣನಿದ್ದಾನೆ ಅವರ ಹೆಸರು ಎಂಎಚ್ ಗುರುಮೂರ್ತಿ ಇವರಿಗೆ ಒಬ್ಬಳು ತಂಗಿ ಇದ್ದಾಳೆ ಅವಳ ಹೆಸರು ಪದ್ಮಾವತಿ. ಇದು ಇವರ ಕುಟುಂಬ.

ಇವರು ಹುಟ್ಟಿದ್ದು ಬಯಲು ಸಂದ್ರದಲ್ಲಿ ಆದರೆ ಇವರು ಹುಟ್ಟಿದ ಒಂದೆರಡು ವರ್ಷಗಳ ಬಳಿಕ ಇವರು ತಂದೆ ಕೆಲಸಕ್ಕಾಗಿ ನಗರಕ್ಕೆ ಬರುತ್ತಾರೆ. ಊರಲ್ಲಿ ಇವರಿಗೆ ಇಪ್ಪತ್ಮೂರು ಎಕರೆ ಜಮೀನಿತ್ತು ಆದರೆ ನಗರಕ್ಕೆ ಬರುವ ಪೂರ್ವದಲ್ಲಿ ಇಪ್ಪತ್ತು ಎಕರೆ ಜಮೀನನ್ನು ತಂದೆಯವರು ಮಾರುತ್ತಾರೆ. ನಗರಕ್ಕೆ ಬಂದ ನಂತರ ಜೀವನ ನಡೆಸುವುದಕ್ಕೆ ಹೋರಾಟ ತುಂಬಾ ಕಷ್ಟ ಪಡುತ್ತಾರೆ. ಮಂಜು ಅವರನ್ನು ಕಮಲಾ ನೆಹರು ಮಕ್ಕಳ ಮಂದಿರಕ್ಕೆ ಶಾಲೆಗೆ ಸೇರಿಸುತ್ತಾರೆ

ಅವರಿಗೆ ಓದುವುದರಲ್ಲಿ ಅಷ್ಟು ಆಸಕ್ತಿ ಇರಲಿಲ್ಲ.ಯಾಕೆಂದರೆ ಇವರು ಶಾಲೆಗೆ ಹೋಗುವ ಮಾರ್ಗ ರತ್ನ ವಿಲಾಸ ರಸ್ತೆ ಬಸವನಗುಡಿ ಬೆಂಗಳೂರು ಇವರ ಮನೆಯ ಬಲಭಾಗದಿಂದ ನೇರವಾಗಿ ಹೋದರೆ ಶಾಂತಿ ಚಿತ್ರ ಮಂದಿರದ ಸರ್ಕಲ್ ಸಿಗುತ್ತಿತ್ತು ಅದರ ಎದುರಲ್ಲೇ ಶಾಲೆಗೆ ಹೋಗಬೇಕು. ಶಾಲೆಗೆ ಹೋಗುವಾಗ ಚಿತ್ರ ಮಂದಿರವನ್ನು ನೋಡುತ್ತಲೇ ಹೋಗುತ್ತಿದ್ದರು.

ಚಿತ್ರಮಂದಿರಗಳಲ್ಲಿ ರಾಜಕುಮಾರ್ ಅವರ ಚಿತ್ರಗಳು ಇರುತ್ತಿದ್ದವು ಶನಿವಾರ-ಭಾನುವಾರ ತಪ್ಪಿಸಿದೆ ಚಿತ್ರಮಂದಿರಕ್ಕೆ ಹೋಗುತ್ತಿದ್ದರು ಪ್ರತಿದಿನ ಥಿಯೇಟರ್ ಬಳಿ ಹೋಗುವುದು ಬ್ಯಾನರ್ ಗಳನ್ನು ವೀಕ್ಷಿಸುವುದು ಇವರ ಕೆಲಸವಾಗಿತ್ತು. ಸಿನಿಮಾವನ್ನು ನೋಡುವುದಕ್ಕಾಗಿ ಹಣವನ್ನ ಕುಡಿಸುತ್ತಿದ್ದರು. ಚಿತ್ರಮಂದಿರಕ್ಕೆ ಹೋಗುವ ಬಲಭಾಗದಲ್ಲಿ ಒಂದು ಕರಾಟೆ ಕ್ಲಾಸ್ ನಡೆಸುತ್ತಿದ್ದರು ಅದರ ಗೇಟ್ ಬಳಿ ನಿಂತು ಐದು ನಿಮಿಷ ನಿಂತು ಕರಾಟೆ ಕ್ಲಾಸ್ ನೋಡುವುದು ಇವರನ್ನು ಒಳಗೆ ಬಿಡುತ್ತಿರಲಿಲ್ಲ.

ಈ ರೀತಿಯಾಗಿ ಕರಾಟೆ ಕ್ಲಾಸ್ ಅನ್ನು ನೋಡಿಕೊಂಡು ಚಿತ್ರಮಂದಿರವನ್ನು ನೋಡಿಕೊಂಡು ಶಾಲೆಗೆ ಹೋಗುತ್ತಿದ್ದ ರಿಂದ ಇವರಿಗೆ ಯಾವುದೇ ವಿದ್ಯೆ ತಲೆಗೆ ಹತ್ತುತ್ತಿರಲಿಲ್ಲ. ರಾಜಕುಮಾರ್ ಅವರ ಯಾವುದಾದರೂ ಒಂದು ಹೊಸ ಚಿತ್ರ ಬಿಡುಗಡೆಯಾದರೆ ಸಾಕು ಯಾವ ಚಿತ್ರ ಮಂದಿರದಲ್ಲಿ ಹೆಚ್ಚು ಸ್ಟಾರ್ ಗಳನ್ನ ಹಾಕಿದ್ದಾರೆ ಎಂದು ಎಣಿಸುವುದು ಇವರ ಕೆಲಸವಾಗಿತ್ತು.

ಸಿನಿಮಾ ನೋಡುವುದಕ್ಕಾಗಿ ಶಾಲೆಗೆ ಚಕ್ಕರ್ ಹಾಕುವುದನ್ನೂ ಮಾಡುತ್ತಿದ್ದರು ಹೀಗೆ ಸಿನಿಮಾ ನೋಡುತ್ತಾ ನೋಡುತ್ತಾ ಬೆಳೆಯುತ್ತಿದ್ದರಿಂದ ಸಿನಿಮಾ ಕ್ಷೇತ್ರದಲ್ಲಿ ತಾನು ಏನನ್ನಾದರೂ ಮಾಡಬೇಕೆನ್ನುವ ಹಂಬಲ ಹೆಚ್ಚಾಯಿತು. ಸಾವಿರ ಒಂಬೈನೂರ ಎಪ್ಪತ್ತೆಂಟು ಎಪ್ಪತೊಂಬತ್ತರಲ್ಲಿ ಎಂಟರ್ ದಿ ಡ್ರಾಗನ್ ಎನ್ನುವ ಚಿತ್ರ ಗ್ಯಾಲಕ್ಸಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಇವರು ಕುಟುಂಬದವರ ಜೊತೆ ಹೋಗಿ ಆ ಸಿನಿಮಾವನ್ನು ನೋಡಿದರು ಆ ಸಿನಿಮಾವನ್ನು ನೋಡುತ್ತಿದ್ದಂತೆ ಅವರಿಗೆ ಮೈ ರೋಮಾಂಚನವಾಗಿತ್ತು

ರಾತ್ರಿಯಲ್ಲಾ ಕನಸಿನಲ್ಲಿ ಬ್ರುಸ್ಲಿ ಅವರು ಕಾಣಿಸುತ್ತಿದ್ದರಂತೆ ಇವರಿಗೂ ಕೂಡ ನಾನು ಅವರಂತೆ ಆಗಬೇಕು ಎಂಬ ಆಸೆ ಚಿಗುರೊಡೆಯಿತು ಪ್ರತಿದಿನ ಅವರನ್ನು ನೆನೆಸಿಕೊಳ್ಳುತ್ತಿದ್ದರಂತೆ. ಇವರಿಗೆ ಕರಾಟೆ ಕಲಿಯಬೇಕೆಂಬ ಆಸೆ ಇತ್ತು ಆದರೆ ಕರಾಟೆ ಕ್ಲಾಸ್ ಗೆ ಸೇರಿಸುವ ಅಷ್ಟು ಹಣ ಇವರ ಮನೆಯಲ್ಲಿರಲಿಲ್ಲ ಕೆಲವೊಮ್ಮೆ ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತಿತ್ತು.

ಇವರಿಗೆ ಮನೆಯಲ್ಲಿ ಊಟಕ್ಕಾಗಿ ಪ್ರತಿದಿನ ಐವತ್ತು ಪೈಸೆಯನ್ನು ಕೊಡುತ್ತಿದ್ದರಂತೆ ಅದರಿಂದ ಶಾಲೆಯ ಹತ್ತಿರದಲ್ಲಿರುವ ಒಂದು ಹೋಟೆಲಿನಲ್ಲಿ ಅವರ ಗೆಳೆಯನ ಜೊತೆಗೆ ಹೋಟೆಲ್ಲಿಗೆ ಹೋಗಿ ಇವರು ದೋಸೆ ತೆಗೆದುಕೊಳ್ಳುತ್ತಿದ್ದರು ಅವರ ಗೆಳೆಯ ಮನೆಯಿಂದಲೇ ಊಟ ತರುತ್ತಿದ್ದರಂತೆ ಇಬ್ಬರು ಅಲ್ಲಿ ಹೋಗಿ ಊಟ ಮಾಡಿ ಬರುತ್ತಿದ್ದರಂತೆ ಆದರೆ ಒಂದು ದಿನ ಇವರಿಗೆ ಹಣವನ್ನು ಕೊಡದಿದ್ದಾಗ ಶಾಲೆಯಲ್ಲಿ ಊಟದ ಸಮಯದಲ್ಲಿ ಇವರು ಊಟಕ್ಕಾಗಿ ಮನೆಗೆ ಹೋಗುವುದಾಗಿ ಗೆಳೆಯನಿಗೆ ತಿಳಿಸುತ್ತಾರೆ

ಗೆಳೆಯನು ಇವರ ಜೊತೆ ಮನೆಗೆ ಊಟಕ್ಕೆ ಬಂದಾಗ ಇವರ ಮನೆಯಲ್ಲಿ ಏನು ಮಾಡಿರಲಿಲ್ಲವಂತೆ ಅವರ ಗೆಳೆಯನನ್ನು ಹಾಲ್ನಲ್ಲಿ ಕುಳಿಸಿ ಅವನ ಡಬ್ಬಿಯಿಂದ ಊಟ ಮಾಡುವಂತೆ ತಿಳಿಸಿ ತಾವು ಒಳಗೆ ಹೋದಾಗ ಅವರ ಅಮ್ಮ ಅಡುಗೆ ಮಾಡುವುದಕ್ಕೆ ಏನು ಇರದ ಕಾರಣ ಅಡುಗೆ ಮಾಡಿರಲಿಲ್ಲ ಹಾಗಾಗಿ ಮಂಜು ಅವರು ಅಡುಗೆ ಮನೆಯ ಬಾಗಿಲನ್ನು ಹಾಕಿಕೊಂಡು ಕಾಲಿ ತಟ್ಟೆ ಚಮಚವನ್ನು ತೆಗೆದುಕೊಂಡು ಊಟಮಾಡುವರಂತೆ ಸಪ್ಪಳ ಮಾಡುತ್ತಿದ್ದರಂತೆ ಇವರನ್ನು ನೋಡಿ ತಾಯಿ ಕಣ್ಣೀರು ಹಾಕುತ್ತಿದ್ದಂತೆ. ಅಷ್ಟು ಬಡತನ ಇರುವ ಕಾರಣ ಇವರಿಗೆ ಕರಾಟೆ ಕ್ಲಾಸಿಗೆ ಆ ಸಮಯದಲ್ಲಿ ಹೋಗುವುದಕ್ಕೆ ಆಗುವುದಿಲ್ಲ.

ಎಂಟರ್ ದಿ ಡ್ರಾಗನ್ ಚಿತ್ರ ನೋಡಿದ ನಂತರ ಅವರು ಬರೀ ಆಕ್ಷನ್ ಸಿನಿಮಾಗಳನ್ನು ನೋಡುತ್ತಿದ್ದರಂತೆ ಅದು ಯಾವುದೇ ಭಾಷೆಯದ್ದಾಗಿರಲಿ. ಈ ರೀತಿಯಾಗಿ ಚಿಕ್ಕವಯಸ್ಸಿನಲ್ಲಿಯೇ ಸಿನಿಮಾದ ಕಡೆ ಅತಿಯಾಗಿಯೇ ಒಲವಿದ್ದ ಇವರು ಮುಂದೆ ಕನ್ನಡ ಸಿನಿಮಾರಂಗದಲ್ಲಿ ನಟ ನಿರ್ದೇಶಕ ಚಿತ್ರಕಥೆಗಾರ ಸಾಹಸ ಸಂಯೋಜಕ ನೃತ್ಯ ನಿರ್ದೇಶಕರಾಗಿ ಹೆಸರನ್ನು ಮಾಡುತ್ತಾರೆ. ಕೇವಲ ಕನ್ನಡ ಚಿತ್ರಗಳಲ್ಲದೆ ಪರಭಾಷೆ ಚಿತ್ರಗಳಲ್ಲಿಯು ಕೆಲಸವನ್ನು ಮಾಡುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!