ಪ್ರಕೃತಿಯು ಹಲವಾರು ಗಿಡಮರಗಳಿಂದ ಕೂಡಿದ್ದು ಕೆಲವೊಂದು ಗಿಡಮರಗಳು ತಮ್ಮದೇ ಆದ ವೈದ್ಯಕೀಯ ಗುಣಗಳನ್ನು ಹೊಂದಿವೆ ತಮ್ಮ ಎಲೆಗಳಿಂದ ಅನೇಕ ರೋಗರುಜಿನಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತವೆ
ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಎಲ್ಲರೂ ತುಂಬಾ ಖುಷಿಯಿಂದಲೇ ಉಪಯೋಗಿಸುತ್ತಾರೆ ಮಾವಿನ ಎಲೆಗಳು ಕೂಡ ತುಂಬಾ ಉಪಯೋಗ ಹಾಗೂ ಅದರಲ್ಲಿ ಔಷಧೀಯ ಗುಣವನ್ನು ಹೊಂದಿರುತ್ತವೆ ಎನ್ನುವುದು ಆಶ್ಚರ್ಯವೇ ಸರಿ ಮಾವಿನ ಹಣ್ಣನ್ನು ತಿನ್ನಲು ನಾವು ಉಪಯೋಗಿಸುತ್ತೇವೆ ಆದರೆ ಇಂದಿನ ಅಂಕಣ ಅಲ್ಲಿ ಮಾವಿನ ಎಲೆಗಳ ಬಗ್ಗೆ ತಿಳಿಸಲು ಹೊರಟಿದ್ದೇವೆ
ಮಾವಿನ ಎಲೆಯನ್ನು ಸಾಮಾನ್ಯವಾಗಿ ವಸಂತ ಕಾಲದಲ್ಲಿ ಚಿಗುರಿನಲ್ಲಿ ನೋಡಲು ಕೆಂಪು ಮತ್ತು ಕೆನ್ನೇರಳೆ ಬಣ್ಣವನ್ನು ಹೊಂದಿರುತ್ತದೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಾವಿನ ಎಲೆಗಳನ್ನು ತಳಿರು ತೋರಣ ಕಟ್ಟಲು ಉಪಯೋಗಿಸುತ್ತೇವೆ ಹಾಗೂ ಕಳಸಕ್ಕೆ ಕೂಡ ಇಡಲು ಮಾವಿನ ಎಲೆಗಳನ್ನು ಉಪಯೋಗಿಸುತ್ತೇವೆ ಇನ್ನೂ ಹಣ್ಣಿನಲ್ಲಿ ಕೂಡ ವಿಟಮಿನ್ ಸಿ ಹೇರಳ ಆಗಿದ್ದು ತಿಂದರೆ ತುಂಬಾ ಆರೋಗ್ಯಕರ ಆಹಾರ ಇನ್ನೂ ಎಲೆಗಳು ಕೂಡ ಹಲವಾರು ಔಷಧಿಯ ಗುಣಗಳನ್ನು ಹೊಂದಿದ್ದು ವಿಟಮಿನ್ ಎ ಬಿ ಮತ್ತು ಸಿ ಗುಣಗಳು ಹೊಂದಿರುತ್ತವೆ ಹಾಗೂ ಫ್ಲೇವನಾಯ್ಡ್ ಗಳು ಮತ್ತು ಪಿನಲ್ಗ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ಇದು ಶಕ್ತಿಯುತ ಮತ್ತು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ ಆಯುರ್ವೇದಿಕ ಅಲ್ಲಿ ಮಾವಿನ ಎಲೆಗಳಿಗೆ ತನ್ನದೇ ಆದ ಮಹತ್ವವಿದೆ ಮಾವಿನ ಎಲೆಗಳ ಕೆಲವೊಂದು ಉಪಯೋಗದ ಬಗ್ಗೆ ಈ ಕೆಳಗೆ ನೀಡಲಾಗಿದೆ
ಒಬ್ಬ ವ್ಯಕ್ತಿಗೆ ಆಯುಧ ಮೂಲಕ ಬಿದ್ದು ಗಾಯವಾಗಿದ್ದರೆ ಆ ವ್ಯಕ್ತಿ ಮಾವಿನ ಎಲೆಯನ್ನು ಸುಟ್ಟು ಅದರ ಬೂದಿಯನ್ನು ಗಾಯದಮೇಲೆ ಹಾಕಿದರೆ ರಕ್ತಸ್ರಾವ ನಿಲ್ಲುವುದು ಒಸಡಿನ ರಕ್ತಸ್ರಾವಕ್ಕೆ ನೀವು ಮದ್ದನ್ನು ಹುಡುಕುತ್ತಿದ್ದರೆ ಇಲ್ಲಿದೆ ಪರಿಹಾರ ಮಾವಿನ ಚಿಗುರೆಲೆಯನ್ನು ಕಚ್ಚಿ ಆಗೆದ್ದರೆ ಒಸಡುಗಳಲ್ಲಿ ರಕ್ತಸ್ರಾವ ನಿಲ್ಲುವುದು ಆಮಶಂಕೆ ಅತಿಸಾರ ಉಂಟಾದಲ್ಲಿ ಅವರು ಮಾವಿನ ಚಿಗುರೆಲೆಗಳ ಕಷಾಯವನ್ನು ಮಾಡಿ ಕುಡಿದರೆ ತಕ್ಷಣವೇ ಶಮನಗೊಳ್ಳುವುದು ಇತ್ತೀಚೆಗೆ ಕೆಲವೊಬ್ಬರು ಕಿಡ್ನಿ ಸ್ಟೋನ್ ಗಳಲ್ಲೆಲ್ಲ ಬಳಲುತ್ತಾರೆ ಅಂತವರು ಮಾವಿನ ಚಿಗುರು ಎಲೆಗಳನ್ನು ನೀರಿನಲ್ಲಿ ನೆನೆಸಿ ಕುಡಿದರೆ ಅದರಿಂದ ಪರಿಹಾರ ಆಗುವುದು
ಗಂಟಲಲ್ಲಿ ಕಿರಿಕಿರಿ ಹಾಗೂ ಸಮಸ್ಯೆ ಉಂಟಾದರೆ ಮಾವಿನ ಒಣಗಿದ ಎಲೆಗಳನ್ನು ಸುಟ್ಟು ಅದರ ಹೊಗೆಯನ್ನು ಸೇವಿಸಿದರೆ ಶಮನವಾಗುವುದು ಯಾರಿಗಾದರೂ ರಕ್ತಬೇದಿ ಉಂಟಾದಲ್ಲಿ ಮಾವಿನ ಎಲೆಯ ಪುಡಿಯನ್ನು ಚಹಾ ಮಾಡಿ ದಿನಕ್ಕೆ 3 ಬಾರಿ ಕುಡಿದರೆ ಶಮನವಾಗುವುದು ಕೆಲವೊಬ್ಬರಿಗೆ ಕಿವಿ ನೋವಿನ ಸಮಸ್ಯೆ ಉಂಟಾಗುವುದು ಅದಕ್ಕೆ ಮಾವಿನ ಎಲೆಯನ್ನು ಬಿಸಿ ಮಾಡಿ ಅದಕ್ಕೆ ಅದರ ರಸವನ್ನು ಕಿವಿಗೆ ಹಾಕಿದ್ದಲ್ಲಿ ಶಮನವಾಗುವುದು ರಾತ್ರಿ ಮಲಗುವ ಮುನ್ನ ಮಾವಿನ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಅದರ ನೀರನ್ನು ಬೆಳಿಗ್ಗೆ ಬಸಿದು ಖಾಲಿ ಹೊಟ್ಟೆಗೆ ಕುಡಿದರೆ ಉದರ ಸಂಬಂಧ ಪಟ್ಟಿದ ಸಮಸ್ಯೆಗಳು ನಿವಾರಣೆಯಾಗುವುದು
ಮಾವಿನ ಎಲೆಯು ರಕ್ತದೊತ್ತಡ ಸಮಸ್ಯೆ ನಿಯಂತ್ರಣ ತರುವುದು ಹಾಗೂ ಮಧುಮೇಹಿಗಳು ಕೂಡ ಮಾವಿನ ಎಲೆಯನ್ನು ಉಪಯೋಗಿಸಿದರೆ ಅವರಲ್ಲಿ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುವುದು ಹಾಗೂ ದೇಹದ ತೂಕವು ಹೆಚ್ಚುವುದನ್ನು ಕಡಿಮೆ ಮಾಡಲು ಸಹಕಾರಿ ಅಸ್ತಮಾ ಮತ್ತು ಚರ್ಮದ ಸಮಸ್ಯೆಗೂ ಕೂಡ ರಾಮಬಾಣ ಆಗಿದೆ