ಅನೇಕ ಜನರಿಗೆ ಪ್ರಶ್ನೆ ಇರುವುದು ಜಮೀನಿನ ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಮಾಡಿಕೊಳ್ಳುವುದು ಹೇಗೆ ಎನ್ನುವುದು. ಜಮೀನಿನ ಹಕ್ಕುಪತ್ರವು ಜಂಟಿ ಆಗಿದ್ದಲ್ಲಿ ಅದನ್ನು ಯಾವ ರೀತಿ ಏಕಮಾತ್ರ ಖಾತೆಯನ್ನಾಗಿ ಪರಿವರ್ತಿಸಬೇಕು. ಹೀಗೆ ಪರಿವರ್ತನೆಯನ್ನು ಮಾಡಿಕೊಳ್ಳಲು ಯಾವೆಲ್ಲ ದಾಖಲೆಗಳು ಬೇಕು ಬದಲಾವಣೆಯನ್ನು ಮಾಡಿಕೊಳ್ಳುವುದಕ್ಕೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಮತ್ತು ಹೇಗೆ ಸಲ್ಲಿಸಬೇಕು. ಯಾವ ಸಂದರ್ಭದಲ್ಲಿ ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಬದಲಾಯಿಸುವುದಕ್ಕೆ ಸಾಧ್ಯವಾಗುತ್ತದೆ. ಅದರ ಪ್ರಕ್ರಿಯೆ ಹೇಗಿರುತ್ತದೆ ಮತ್ತು ಜಂಟಿ ಖಾತೆಯಿಂದ ರೈತರಿಗಾಗುವ ಸಮಸ್ಯೆಗಳು ಯಾವುವು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಸಾಮಾನ್ಯವಾಗಿ ಜಂಟಿ ಖಾತೆ ಇದ್ದಾಗ ಕೆಲವು ಸಮಸ್ಯೆಗಳು ಬರಬಹುದು. ಕೆಲವೊಮ್ಮೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಬಹುದು. ಎರಡನೆಯದಾಗಿ ಬೆಳೆ ಪರಿಹಾರದ ಧನ ಸಿಗದಿರಬಹುದು ಮೂರನೆಯದಾಗಿ ಬ್ಯಾಂಕಿನಿಂದ ಸಾಲ ಸೌಲಭ್ಯವನ್ನು ಪಡೆಯುವುದಕ್ಕೆ ಕಷ್ಟವಾಗುತ್ತದೆ. ಜಂಟಿ ಖಾತೆಯಲ್ಲಿ ಜಮೀನನ್ನು ಕ್ರಯ ಮಾಡುವುದಕ್ಕೆ ಬರುವುದಿಲ್ಲ. ಈ ರೀತಿಯಾಗಿ ಹಲವಾರು ಸಂದರ್ಭಗಳಲ್ಲಿ ಜಂಟಿ ಖಾತೆಯಿಂದ ಜನರಿಗೆ ತೊಂದರೆಗಳು ಉಂಟಾಗುತ್ತದೆ. ಹಾಗಾಗಿ ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದು.
ಹಾಗಾದರೆ ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಪಹಣಿಯ ಕಾಲಂ ಒಂಬತ್ತರಲ್ಲಿ ಹಲವರು ಖಾತೆ ಹೊಂದಿರುತ್ತಾರೆ. ಅಂತವರು ತತ್ಕಾಲ್ ಪೋಡಿಗೆ ಅರ್ಜಿ ಹಾಕಬೇಕು ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಿದ ಸ್ವಲ್ಪ ದಿನಗಳ ನಂತರ ನಿಮ್ಮ ಜಮೀನಿಗೆ ಭೂಮಾಪಕರು ಬಂದು ಜಮೀನಿನ ಸರ್ವೆ ಮಾಡುತ್ತಾರೆ ಹಾಗೆ ಒಂದು ಜಮೀನಿನ ದಾಖಲೆಗಳನ್ನು ಸಿದ್ಧಗೊಳಿಸುತ್ತಾರೆ.
ಪೋಡಿ ಕಾರ್ಯ ಮುಗಿದ ಇಪ್ಪತ್ತು ದಿನಗಳ ನಂತರ ಸರ್ವೆ ಇಲಾಖೆಯಿಂದ ಲೇವಣಿ ನಕ್ಷೆಯನ್ನು ಪಡೆದುಕೊಂಡು ನೋಂದಣಿಗೆ ಬೇಕಾದ ಅವಶ್ಯಕತೆ ಇರುವ ದಾಖಲೆಗಳನ್ನು ತೆಗೆದುಕೊಂಡು ಜಂಟಿ ಖಾತೆದಾರರು ತಮ್ಮ ತಮ್ಮ ಅನುಭೋಗದ ತಕ್ಕಂತೆ ಸಬ್ ರಿಜಿಸ್ಟರ್ ಆಫೀಸಿನಲ್ಲಿ ವಿಭಾಗ ನೋಂದಣಿ ಮಾಡಿಕೊಳ್ಳಬೇಕು. ನೊಂದಣಿ ಪ್ರಕ್ರಿಯೆ ಮುಗಿದ ನಂತರ ನೊಂದಣಿಯಾದ ಕಡತವು ಭೂಮಿ ಕೇಂದ್ರಕ್ಕೆ ಹೋಗಿ ಅಲ್ಲಿ ಕಾರ್ಯಗತವಾಗುತ್ತದೆ. ಈ ರೀತಿಯಾಗಿ ಪ್ರತ್ಯೇಕವಾಗಿ ಹಕ್ಕುಪತ್ರ ಮಾಡಿಕೊಳ್ಳಬಹುದು.
ಎರಡನೆಯದಾಗಿ ಪೌತಿ ಖಾತೆಯಡಿ ಜಂಟಿ ಖಾತೆ ಇದ್ದರೆ ಅದನ್ನು ಈಗ ಏಕಮಾತ್ರ ಖಾತೆಯನ್ನಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ನೋಡುವುದಾದರೆ ಒಂದು ವೇಳೆ ಪೌತಿ ಖಾತೆಯಡಿ ಹಲವಾರು ಜನರ ಹಕ್ಕುಪತ್ರ ಇದ್ದಲ್ಲಿ ಪಹಣಿಯಲ್ಲಿ ಇರುವ ಎಲ್ಲರೂ ಪರಸ್ಪರ ಮಾತುಕತೆ ಒಪ್ಪಿಗೆ ಮೂಲಕ ತಮ್ಮ ತಮ್ಮ ಗಡಿಗಳನ್ನು ಗುರುತಿಸಿಕೊಂಡು ಅದರಂತೆ ನೇರವಾಗಿ ತತ್ಕಾಲ್ ಪೋಡಿಗೆ ಅರ್ಜಿಯನ್ನು ಸಲ್ಲಿಸಬೇಕು. ಅಲ್ಲಿಯೂ ಸಹ ಭೂಮಾಪಕರು ಅಳತೆ ಕಾರ್ಯಕ್ಕೆ ಬಂದಾಗ ಪಹಣಿಯಲ್ಲಿರುವ ಎಲ್ಲರು ಕಡ್ಡಾಯವಾಗಿ ಹಾಜರಿದ್ದು ತಮ್ಮ ತಮ್ಮ ಅನುಭೋಗಕ್ಕೆ ತಕ್ಕಂತೆ ಲೇವಣಿ ನಕ್ಷೆ ಮಾಡಿಸಿಕೊಳ್ಳಬೇಕು ನಂತರ ಇದರ ಜೊತೆಗೆ ಇನ್ನಿತರ ದಾಖಲೆಗಳೊಂದಿಗೆ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಒಂದು ವೇಳೆ ಜಮೀನಿಗೆ ಪಹಣಿ ಅಥವಾ ನಮೂನೆ ಹತ್ತು ಇದ್ದಲ್ಲಿ ದಾನ ಪತ್ರದ ಮೂಲಕ ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಮಾಡಿಕೊಳ್ಳಬಹುದು. ಜಮೀನನ್ನು ಜಂಟಿ ಖಾತೆಯಿಂದ ಏಕಮಾತ್ರ ಖಾತೆಯನ್ನಾಗಿ ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವು ದಾಖಲೆಗಳು ಬೇಕಾಗುತ್ತವೆ ಅವು ಯಾವವು ಎಂದರೆ ಮೊದಲನೆಯದು ಸರ್ವೆ ಇಲಾಖೆ ನೀಡಿರುವ ನಕ್ಷೆ ಎರಡನೆಯದು ಆಧಾರ್ ಕಾರ್ಡ್ ಮೂರನೆಯದು ಎರಡು ಜನ ಸಾಕ್ಷಿದಾರರ ಸಹಿ ನಾಲ್ಕನೆಯದು ವಂಶಾವಳಿ ಪ್ರಮಾಣ ಪತ್ರ ಐದನೆಯದು ಒಪ್ಪಿಗೆ ಪತ್ರ ಆರನೆಯದು ಪಹಣಿ ಮತ್ತು ನಮೂನೆ ಹತ್ತು.
ಈ ರೀತಿಯಾಗಿ ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಮಾಡಿಕೊಳ್ಳುವಾಗ ಈ ದಾಖಲೆಗಳು ಬೇಕಾಗುತ್ತವೆ. ನೀವು ಕೂಡ ಜಂಟಿ ಖಾತೆಯನ್ನು ಏಕಮಾತ್ರ ಖಾತೆಯನ್ನಾಗಿ ಮಾಡಿಕೊಳ್ಳಬೇಕು ಎಂಬ ಇಚ್ಛೆ ಹೊಂದಿದ್ದರೆ ನಾವು ಮೇಲೆ ತಿಳಿಸಿರುವ ಮಾಹಿತಿಯನ್ನು ಅನುಸರಿಸಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ತಿಳಿಸಿರಿ.