ಕೊರೋನ ವೈರಸ್ ಹರಡಿರುವ ಕಾರಣ ಬಹಳಷ್ಟು ಜನರು ತಮ್ಮ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ, ಜೀವನ ನಡೆಸುವುದು ಕಷ್ಟಕರವಾಗಿದೆ. ಸರ್ಕಾರ ಕೆಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಸ್ ಬಿಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಸಿಹಿಸುದ್ದಿಯೊಂದಿದೆ. ಹಾಗಾದರೆ ಎಸ್ ಬಿಐ ಬ್ಯಾಂಕ್ ಖಾತೆದಾರರಿಗೆ ಬ್ಯಾಂಕ್ ನಿಂದ ನೀಡಿರುವ ಸಿಹಿಸುದ್ದಿಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಕೊರೋನ ವೈರಸ್ ಬಂದ ನಂತರ ಜನಸಾಮಾನ್ಯರ ಜೀವನ ಕಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ವಿಮೆ ಬಗ್ಗೆ ತಿಳುವಳಿಕೆ ಹೆಚ್ಚಿದೆ. ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವ ಗುರಿಯನ್ನು ಸರ್ಕಾರ ಹೊಂದಿದೆ. ಇದೀಗ ಕಡಿಮೆ ಹಣಕ್ಕೆ ವಿಮೆ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಗಳನ್ನು ಜಾರಿಗೆ ತರುವ ಮೂಲಕ ಜನರಿಗೆ ವಿಮೆ ಸೌಲಭ್ಯ ಒದಗಿಸುತ್ತದೆ.
ಈ ಯೋಜನೆಯ ಮೂಲಕ ಜನರಿಗೆ 4 ಲಕ್ಷದವರೆಗೆ ಹಣ ನೀಡುತ್ತದೆ. ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ಕೇವಲ 342 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಕುರಿತು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಎಸ್ಬಿಐ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಈ ಎರಡು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಎಸ್ಬಿಐ ಈ ಟ್ವೀಟ್ನಲ್ಲಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವಿಮೆ ಮಾಡಿ ಮತ್ತು ಚಿಂತೆ-ಮುಕ್ತ ಜೀವನ ನಡೆಸಿ ಎಂದು ಬರೆದುಕೊಂಡಿದೆ.
ಆಟೊ ಡೆಬಿಟ್ ಸೌಲಭ್ಯದ ಮೂಲಕ ಉಳಿತಾಯ ಬ್ಯಾಂಕ್ ಖಾತೆದಾರರಿಂದ ಪ್ರೀಮಿಯಂ ಅನ್ನು ಕಡಿತಗೊಳಿಸಲಾಗುತ್ತದೆ. ಜನರು ಕೇವಲ ಒಂದು ಉಳಿತಾಯ ಖಾತೆಯ ಮೂಲಕ ಈ ಯೋಜನೆಗಳಿಗೆ ಸೇರಲು ಅರ್ಹರಾಗಿರುತ್ತಾರೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಅಪಘಾತದಲ್ಲಿ ವಿಮಾದಾರರು ಮರಣಹೊಂದಿದರೆ ಅಥವಾ ಸಂಪೂರ್ಣವಾಗಿ ಅಂಗವಿಕಲರಾದರೆ 2 ಲಕ್ಷ ರೂಪಾಯಿ ಪರಿಹಾರವನ್ನು ಕೊಡಲಾಗುತ್ತದೆ.
ಈ ಯೋಜನೆಯಡಿಯಲ್ಲಿ ವಿಮಾದಾರನು ಭಾಗಶಃ ಅಥವಾ ಶಾಶ್ವತವಾಗಿ ಅಂಗವಿಕಲನಾದರೆ 1 ಲಕ್ಷ ರೂಪಾಯಿ ಪರಿಹಾರ ಕೊಡಲಾಗುತ್ತದೆ. ಈ ಯೋಜನೆಯಡಿಯಲ್ಲಿ 18 ರಿಂದ 70 ವರ್ಷದೊಳಗಿನವರು ಸೌಲಭ್ಯ ಪಡೆಯಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೂಡ ಕೇವಲ 12 ರೂಪಾಯಿ ಆಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿಯಲ್ಲಿ ವಿಮಾದಾರನು ಮರಣ ಹೊಂದಿದರೆ ನಾಮಿನಿಯು 2 ಲಕ್ಷ ರೂಪಾಯಿ ಪಡೆಯುತ್ತಾನೆ ಎಂಬುದು ಗಮನಿಸಬೇಕಾದ ಸಂಗತಿ.
ಈ ಯೋಜನೆಗಳು ಟರ್ಮ್ ಇನ್ಶೂರೆನ್ಸ್ ಪಾಲಿಸಿಗಳಾಗಿವೆ. ಈ ವಿಮೆ ಒಂದು ವರ್ಷಕ್ಕೆ ಅಂದರೆ ಜೂನ್ 1 ರಿಂದ ಮೆ 31 ರವರೆಗೆ ಇರುತ್ತದೆ ಎಂದು ತಿಳಿದಿರಬೇಕು ಇದಕ್ಕೆ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಬ್ಯಾಂಕ್ ಖಾತೆಯ ಮುಚ್ಚುವಿಕೆ ಅಥವಾ ಪ್ರೀಮಿಯಂ ಕಡಿತದ ಸಮಯದಲ್ಲಿ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ ವಿಮೆಯನ್ನು ಸಹ ರದ್ದುಗೊಳಿಸಬಹುದು
ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಆದ್ದರಿಂದ ವಿಮೆಯನ್ನು ತೆಗೆದುಕೊಳ್ಳುವವರು ವಿಮೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಒಳ್ಳೆಯದು ಆದ್ದರಿಂದ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಅದರಲ್ಲೂ ಎಸ್ ಬಿಐ ಖಾತೆದಾರರಿಗೆ ತಿಳಿಸಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430