ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಸುಂದರವಾದ ಮನೆಯನ್ನು ಕಟ್ಟಿಸಿಕೊಳ್ಳುವ ಆಸೆ ಇರುತ್ತದೆ ಆದರೆ ಎಷ್ಟು ಜಾಗದಲ್ಲಿ ಮನೆಯನ್ನು ಕಟ್ಟಬೇಕು. ಯಾವ ರೀತಿಯಾಗಿ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಗೊಂದಲ ಇರುತ್ತದೆ ಹಾಗಾಗಿ ನಾವಿಂದು ನಿಮಗೆ ಕಡಿಮೆ ಜಾಗದಲ್ಲಿ ಡುಪ್ಲೆಕ್ಸ್ ಮನೆಗಳನ್ನು ಹೇಗೆ ನಿರ್ಮಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಮೂವತ್ತು ಬೈ ನಲವತ್ತು ಜಾಗದಲ್ಲಿ ಮನೆಯನ್ನು ಯಾವ ರೀತಿಯಾಗಿ ಕಟ್ಟಿಕೊಳ್ಳಬಹುದು ಅದಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿ ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

ಮೂವತ್ತು ಬೈ ನಲವತ್ತು ಜಾಗದಲ್ಲಿ ನೀವು ಡುಪ್ಲೆಕ್ಸ್ ಮನೆಯನ್ನು ಕಟ್ಟುವಾಗ ಗ್ರೌಂಡ್ ಫ್ಲೋರ್ ನಲ್ಲಿ ನಿಮಗೆ ಕಾರನ್ನು ನಿಲ್ಲಿಸುವುದಕ್ಕೆ ಜಾಗ ಇರುತ್ತದೆ. ಅದಾದನಂತರ ಒಂದು ಲಿವಿಂಗ್ ರೂಮ್ ಸಿಗುತ್ತದೆ ಒಂದು ಸಣ್ಣದಾದ ಪೂಜಾ ಕೊಠಡಿಯನ್ನೂ ಮಾಡಿಕೊಳ್ಳಬಹುದು. ಅದಾದನಂತರ ಎಡಭಾಗದಲ್ಲಿ ಒಂದು ಅಡುಗೆ ಕೋಣೆ ಒಂದು ಬೆಡ್ರೂಮ್ ನೀವು ಅದಕ್ಕೆ ಅಟಾಚ್ ಬಾತ್ರೂಮ್ ಮಾಡಿಕೊಳ್ಳಬಹುದು ಅಥವಾ ಸಾಮಾನ್ಯ ಬಾತ್ರೂಮನ್ನು ಕಟ್ಟಿಸಿಕೊಳ್ಳಬಹುದು.

ಮೇಲುಗಡೆ ಎರಡು ಬೆಡ್ರೂಮ್ ಅವುಗಳಿಗೆ ಅಟ್ಯಾಚ್ಡ್ ಬಾತ್ ರೂಮ್ ಮಾಡಿಕೊಳ್ಳಬಹುದು ನಂತರ ಲಿವಿಂಗ್ ರೂಮ್ ಮಾಡಿಕೊಳ್ಳಬಹುದು. ಜೊತೆಗೆ ಅಂದು ಚಿಕ್ಕದಾದ ಮಕ್ಕಳಿಗೆ ಕೊಠಡಿ ಅಥವಾ ಓದುವ ಕೊಠಡಿಯನ್ನ ಮಾಡಿಕೊಳ್ಳಬಹುದು. ಕೆಳಗಡೆ ಕಾರ್ ಪಾರ್ಕಿಂಗ್ ಇದೆ ಅದರ ಮೇಲುಗಡೆ ಸಿಟ್ ಔಟ್ ಮಾಡಿಕೊಳ್ಳಬಹುದು. ಈ ರೀತಿಯಾದ ಡೂಪ್ಲೆಕ್ಸ್ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ನಿಮಗೆ ಎಷ್ಟು ಹಣ ತಗಲುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಈ ರೀತಿಯ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ನಿಮಗೆ ಸಾವಿರದ ಒಂಬೈನೂರು ಅಡಿ ಜಾಗ ಬೇಕಾಗುತ್ತದೆ. ನೀವೇ ಮುಂದೆ ನಿಂತು ಮನೆಯನ್ನು ಕಟ್ಟಿಸಿಕೊಳ್ಳುವಾಗ ಎಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನೀವು ಮೂರು ವಿಧದಲ್ಲಿ ಮನೆಯನ್ನು ಕಟ್ಟಿಕೊಳ್ಳಬಹುದು. ಒಂದು ಸರಾಸರಿ ಗುಣಮಟ್ಟದ ಮನೆ, ಒಳ್ಳೆ ಗುಣಮಟ್ಟದ ಮನೆ ಮತ್ತು ಅತ್ಯುತ್ತಮ ಗುಣಮಟ್ಟದ ಮನೆ. ಸರಾಸರಿ ಗುಣಮಟ್ಟದ ಮನೆಯನ್ನು ಒಂದು ಅಡಿಗೆ ಒಂದು ಸಾವಿರದ ಎರಡು ನೂರು ರೂಪಾಯಿಯಂತೆ ಕಟ್ಟಿಕೊಳ್ಳಬಹುದು. ಅದೇ ರೀತಿ ನೀವು ಉತ್ತಮ ಗುಣಮಟ್ಟದ ಮನೆಯನ್ನು ಕಟ್ಟಿಕೊಳ್ಳಬೇಕು ಎಂದರೆ ಒಂದು ಅಡಿಗೆ ಒಂದು ಸಾವಿರದ ಐದುನೂರು ರೂಪಾಯಿ ಅಂತೆ ಕಟ್ಟಿಕೊಳ್ಳಬಹುದು.

ಅದೇ ರೀತಿ ನೀವು ಅತ್ಯುತ್ತಮ ಗುಣಮಟ್ಟದ ಮನೆಯನ್ನು ಕಟ್ಟಿ ಕೊಳ್ಳಬೇಕೆಂದರೆ ಒಂದು ಅಡಿಗೆ ಒಂದು ಸಾವಿರದ ಒಂಬೈನೂರು ರೂಪಾಯಿಯಂತೆ ಕಟ್ಟಿಕೊಳ್ಳಬಹುದು. ಒಂದು ವೇಳೆ ನೀವು ಸಾವಿರದ ಒಂಬೈನೂರ ಅಡಿಯಲ್ಲಿ ಮನೆಯನ್ನು ಕಟ್ಟಿದಾಗ ಸರಾಸರಿ ಗುಣಮಟ್ಟದ ಮನೆಗೆ ಸುಮಾರು ಇಪ್ಪತ್ತೆರಡು ಲಕ್ಷದ ಎಂಬತ್ತು ಸಾವಿರ ರೂಪಾಯಿ, ಉತ್ತಮ ಗುಣಮಟ್ಟದ ಮನೆಗೆ ಇಪ್ಪತ್ತೆಂಟು ಲಕ್ಷದ ಎಂಬತ್ತು ಸಾವಿರ ರುಪಾಯಿ ಮತ್ತು ಅತ್ಯುತ್ತಮ ಗುಣಮಟ್ಟದ ಮನೆಗೆ ಸುಮಾರು ಮೂವತ್ತಾರು ಲಕ್ಷದ ಹತ್ತು ಸಾವಿರ ರೂಪಾಯಿ ಹಣ ಬೇಕಾಗುತ್ತದೆ.

ಸರಾಸರಿ ಗುಣಮಟ್ಟದ ಮನೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಬಳಕೆ ಮಾಡಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಇಲ್ಲಿ ಸಿಮೆಂಟು ಇಟ್ಟಂಗಿ ಟೈಲ್ಸ್ ಸ್ಟೀಲ್ ವಸ್ತುಗಳು ಯಾವುದು ಮಾರುಕಟ್ಟೆಯಲ್ಲಿ ಒಳ್ಳೆಯ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಅವುಗಳನ್ನು ಬಳಸುವುದು ಒಳ್ಳೆಯದು. ರೆಡಿಮೇಡ್ ಬಾಗಿಲುಗಳನ್ನು ಹಾಕಿಕೊಳ್ಳಬೇಕು ಈ ರೀತಿಯಾಗಿ ಮಾಡಿದಾಗ ಸರಾಸರಿ ಗುಣಮಟ್ಟದ ಮನೆ ಆಗುತ್ತದೆ. ಇನ್ನು ನೀವು ಉತ್ತಮ ಗುಣಮಟ್ಟದ ಮನೆಯನ್ನು ಕಟ್ಟಿಸುವುದಾದರೆ ಒಳ್ಳೆಯ ಗುಣಮಟ್ಟದ ಸಿಮೆಂಟ್ ಇಟ್ಟಂಗಿ ಗ್ರಾನೈಟ್ ಸ್ಟೀಲ್ ವಸ್ತುಗಳನ್ನು ಹಾಕಿಕೊಳ್ಳಬಹುದು.

ಒಳ್ಳೆಯ ಗುಣಮಟ್ಟದ ಕಟ್ಟಿಗೆಯ ವಸ್ತುಗಳನ್ನು ಬಳಸಬಹುದು ಜೊತೆಗೆ ರೆಡಿಮೇಡ್ ಬಾಗಿಲುಗಳನ್ನು ಬಳಸುವುದು. ಅತ್ಯುತ್ತಮ ಗುಣಮಟ್ಟದ ಮನೆಯನ್ನು ಕಟ್ಟುವಾಗ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಬಹುದು ಒಳ್ಳೆಯ ಗುಣಮಟ್ಟದ ಸಿಮೆಂಟ್ ಗಳನ್ನ ಗ್ರಾನೈಟ್ ಅಥವಾ ಮಾರ್ಬಲ್ಸ್ ಗಳನ್ನು ಒಳ್ಳೆ ಗುಣಮಟ್ಟದ ಇಟ್ಟಂಗಿಗಳನ್ನು ಮತ್ತು ಸ್ಟೀಲಿನ ವಸ್ತುಗಳನ್ನು ಬಳಸಬಹುದು ಅತ್ಯುತ್ತಮ ಗುಣಮಟ್ಟದ ಕಟ್ಟಿಗೆಯ ವಸ್ತುಗಳನ್ನು ಬಳಸಬಹುದು.

ಮಾರುಕಟ್ಟೆಯಲ್ಲಿ ಬೇರೆಬೇರೆ ರೀತಿಯ ಗುಣಮಟ್ಟದ ವಸ್ತುಗಳು ಇರುತ್ತವೆ ನೀವು ನಿಮ್ಮ ಬಜೆಟ್ ನ ಆಧಾರದ ಮೇಲೆ ನಿಮಗೆ ಯಾವ ರೀತಿಯ ಗುಣಮಟ್ಟದ ವಸ್ತುಗಳು ಬೇಕು ಎನ್ನುವುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದರ ಜೊತೆಗೆ ನಿಮಗೆ ಕಂಪೌಂಡ್ ನಿರ್ಮಿಸುವುದಕ್ಕೆ ನೀರಿನ ವ್ಯವಸ್ಥೆ ಮಾಡುವುದಕ್ಕೆ ವಿದ್ಯುತ್ ಫಿಟಿಂಗ್ ಮಾಡಿಕೊಳ್ಳುವುದಕ್ಕೆ ಮುಂತಾದವುಗಳನ್ನು ಮಾಡಿಕೊಳ್ಳುವುದಕ್ಕೆ ಇನ್ನೂ ಸ್ವಲ್ಪ ಹಣ ಬೇಕಾಗುತ್ತದೆ.

ಈ ರೀತಿಯಾಗಿ ನೀವು ಒಂದು ಸಾವಿರದ ಒಂಬೈನೂರು ಅಡಿ ಜಾಗದಲ್ಲಿ ಸುಂದರವಾದ ಡುಪ್ಲೆಕ್ಸ್ ಮನೆಗಳನ್ನು ಸುಲಭವಾಗಿ ಕಟ್ಟಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಯಾರಾದರೂ ಮನೆಯನ್ನು ಕಟ್ಟಿಸುವವರಿದ್ದರೆ ಅವರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿರಿ. video credit For Success Loka

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!