ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಹಳ್ಳಿಗಳಲ್ಲಿ ವಾಸಿಸುವವರ ಮುಖ್ಯ ಸಮಸ್ಯೆ ಏನು ಎಂದರೆ ಮನೆಯ ಹಕ್ಕು ಪತ್ರಗಳು ಇಲ್ಲದಿರುವುದು. ಮನೆಗೆ ಸಂಬಂಧಪಟ್ಟ ದಾಖಲೆಗಳನ್ನು ಗ್ರಾಮ ಪಂಚಾಯತ್ ನೂಡಲ್ ನಲ್ಲಿ ಕೇಳಿದರೆ ಅಲ್ಲಿ ಅದು ಲಭ್ಯವಿರುವುದಿಲ್ಲ. ಕಾರಣ ಬಹಳಷ್ಟು ಹಳೆಯ ದಾಖಲೆಗಳು ಹರಿದು ಹೋಗಿರುತ್ತವೆ ಒಂದು ವೇಳೆ ಇದ್ದರೂ ಬರಹಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಅನೇಕ ಸಮಸ್ಯೆಗಳು ಜನರಿಗೆ ತೊಂದರೆ ಉಂಟು ಮಾಡುತ್ತಿವೆ. ಇದರಿಂದಾಗಿ ಕುಟುಂಬದ ಹಿರಿಯರು ಮರಣಹೊಂದಿದಾಗ ಅಥವಾ ಅಣ್ಣತಮ್ಮಂದಿರು ಮನೆಯನ್ನು ಇಬ್ಭಾಗ ಮಾಡಿ ಕೊಳ್ಳುವಾಗ ಹಕ್ಕುಪತ್ರ ಗಳಿಲ್ಲದೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ನಾವಿಂದು ನಿಮಗೆ ಕಳೆದುಹೋಗಿರುವ ಇ-ಸ್ವತ್ತು ಹಕ್ಕು ಪತ್ರವನ್ನು ಪಡೆದುಕೊಳ್ಳುವುದು ಹೇಗೆ ಅದನ್ನು ಎಲ್ಲಿ ಪಡೆಯಬೇಕು ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಮತ್ತು ಅದರ ಪ್ರಕ್ರಿಯೆ ಯಾವ ರೀತಿಯಾಗಿ ಇರುತ್ತದೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.
ನಿಮ್ಮ ಮನೆ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಇದ್ದರೆ ಹಕ್ಕುಪತ್ರವನ್ನು ಪಡೆಯುವುದಕ್ಕೆ ನಾವು ಹೇಳುವ ನಿಯಮಗಳನ್ನು ಅನುಸರಿಸಿ. ಮನೆಯ ಹಕ್ಕುಪತ್ರ ಇಲ್ಲದಿದ್ದಲ್ಲಿ ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಜೊತೆಗೆ ಆಧಾರ್ ಕಾರ್ಡ್ ನೊಂದಿಗೆ ಸ್ಥಳೀಯ ಸಿವಿಲ್ ಇಂಜಿನಿಯರ್ ಬಳಿ ತೆರಳಿ ನಿಮ್ಮ ಮನೆಯ ನಕ್ಷೆಯನ್ನು ಪಡೆದುಕೊಳ್ಳಬೇಕು. ನೀವು ಮನೆಯ ನಕ್ಷೆಯನ್ನು ಪಡೆದುಕೊಂಡ ನಂತರ ಅದನ್ನು ಗ್ರಾಮಪಂಚಾಯಿತಿಗೆ ನೀಡಿ ಮೊದಲು ನಮೂನೆ- ಹನ್ನೊಂದು ಬಿ ಮಾಡಿಸಿಕೊಳ್ಳಿ. ಗ್ರಾಮ ಪಂಚಾಯತಿಯ ಅಧಿಕಾರಿಗಳು ಮುಂದಿನ ಸಾಮಾನ್ಯ ಸಭೆಯಲ್ಲಿ ಅದನ್ನು ಇಟ್ಟು ಅನುಮತಿಯೊಂದಿಗೆ ನಿಮಗೆ ನಮೂನೆ- ಹನ್ನೊಂದು ಬಿ ಅನ್ನು ಕೊಡುತ್ತಾರೆ.
ಇದಾದ ನಂತರ ನೀವು ನಮೂನೆ- ಒಂಬತ್ತು ಮತ್ತು ನಮೂನೆ- ಹನ್ನೊಂದನ್ನು ಪಡೆದುಕೊಳ್ಳಬೇಕಾಗುತ್ತದೆ. ಅದನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಈಗ ನೋಡೋಣ. ಇದನ್ನು ಪಡೆಯಲು ಈಗಾಗಲೇ ಪಡೆದುಕೊಂಡಿರುವ ನಮೂನೆ- ಹನ್ನೊಂದು ಬಿ ನಕಲು ಪ್ರತಿ, ಆಧಾರ್ ಕಾರ್ಡ್ ವಿದ್ಯುತ್ ಬಿಲ್ ಮನೆಯ ನಕ್ಷೆ ಹಾಗೂ ಮನೆಯ ಫೋಟೋ ಜೊತೆಗೆ ಸದರಿ ಗ್ರಾಮ ನಕ್ಷೆ ಮತ್ತು ಕರ ರಶೀದಿ ಇವುಗಳ ಜೊತೆ ನಮೂನೆ ಅರ್ಜಿಯನ್ನು ತುಂಬಿ ಗ್ರಾಮಪಂಚಾಯಿತಿಯ ಗಣಕ ಶಾಖೆಗೆ ಇದನ್ನು ಕೊಡಬೇಕಾಗುತ್ತದೆ.
ಇ-ಸ್ವತ್ತುನ್ನು ಪಡೆಯುವ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡುವುದಾದರೆ ಇ-ಸ್ವತ್ತುನ್ನು ಪಡೆಯುವುದಕ್ಕಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂದರೆ ಪಿಡಿಓ ದಾಖಲೆಗಳನ್ನು ಹಾಗೂ ಸ್ಥಳದ ಪರಿಶೀಲನೆಯನ್ನು ಮಾಡುತ್ತಾರೆ ನಂತರ ಪಿಡಿಓ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಈ ಸ್ವತ್ತು ತಂತ್ರಾಂಶದ ಮೂಲಕ ಅಪ್ಲೋಡ್ ಮಾಡಿ ಆಸ್ತಿ ಪತ್ರವನ್ನು ಪಡೆಯುವುದಕ್ಕೆ ಮೋಜಿನಿಗೆ ವರ್ಗಾಯಿಸುತ್ತಾರೆ. ನಂತರ ನೀವು ನಾಡಕಚೇರಿಯಲ್ಲಿ ಮೋಜಿನಿ ಆಗುವುದಕ್ಕೊಸ್ಕರ ಶುಲ್ಕವನ್ನು ಪಾವತಿಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು.
ಇದಾದ ನಂತರ ಇಪ್ಪತ್ತೊಂದು ದಿನಗಳ ಒಳಗಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಅರ್ಜಿದಾರರು ಮತ್ತು ಬಾಜುದಾರರ ಸಮ್ಮುಖದಲ್ಲಿ ಸ್ಥಳಪರಿಶೀಲನೆ ನಡೆಯುತ್ತದೆ. ನಿಮ್ಮ ಆಸ್ತಿಗೆ ನಕ್ಷೆ ಬಂದನಂತರ ದ್ವಿತೀಯ ದರ್ಜೆ ಸಹಾಯಕ ಅದನ್ನು ಅನುಮೋದಿಸಿ ಕಾರ್ಯದರ್ಶಿ ಅಥವಾ ಪಿಡಿಓಗೆ ಕಳಿಸಲಾಗುತ್ತದೆ. ನಂತರ ಪಿಡಿಓ ಅವರು ಈ ಸ್ವತ್ತಿನ ಮೇಲೆ ಡಿಜಿಟಲ್ ಸಹಿ ಮಾಡುವ ಮೂಲಕ ಅನುಮೋದಿಸುತ್ತಾರೆ.
ನಿಮ್ಮ ಆಸ್ತಿಯನ್ನು ಗ್ರಾಮಪಂಚಾಯತಿಯಲ್ಲಿ ಇ- ಸ್ವತ್ತು ಮಾಡಿಸಲು ಸರ್ಕಾರದ ಶುಲ್ಕ ಕೇವಲ ಐವತ್ತು ರೂಪಾಯಿಗಳು ಮಾತ್ರ. ಈ ಸ್ವತ್ತನ್ನು ಪಡೆಯುವುದಕ್ಕೆ ಯಾರಾದರೂ ಅರ್ಜಿಯನ್ನು ಸಲ್ಲಿಸಿದರೆ ಕೇವಲ ನಲವತ್ತೈದು ದಿನಗಳ ಒಳಗಾಗಿ ಅದನ್ನು ನೀಡಬೇಕು ಎಂಬ ನಿಯಮ ಇದೆ. ನೀನೇನಾದರೂ ಈ ಸ್ವತ್ತನ್ನು ಮಾಡಿಸಿಕೊಂಡಿದ್ದರೆ ಅಥವಾ ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಿದ್ದರೆ ಅದು ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು. ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಭಿವೃದ್ಧಿಪಡಿಸಿರುವ ಲಿಂಕ್ ನ ಮೂಲಕ ತಿಳಿದುಕೊಳ್ಳಬಹುದು.
ಹಾಗಾದರೆ ಇ-ಸ್ವತ್ತುನ್ನು ಮಾಡಿಸುವುದರಿಂದ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುದನ್ನು ನೋಡೋಣ ಇ-ಸ್ವತ್ತು ತಂತ್ರಾಂಶವನ್ನು ಬಳಸಿ ಆನ್ಲೈನ್ ಮೂಲಕ ವಿತರಿಸಿದ ನಮೂನೆ ಒಂಬತ್ತು ಮತ್ತು ನಮೂನೆ- ಹನ್ನೊಂದನ್ನು ಆಸ್ತಿ ನೋಂದಣಿಗೆ ಬಳಸಬಹುದು ಅಂದರೆ ನಿಮ್ಮ ಆಸ್ತಿಯನ್ನು ರಜಿಸ್ಟರ್ ಮಾಡುವಾಗ ಈ ನಮೂನೆಗಳನ್ನು ಬಳಸಬಹುದು.
ಪಿಡಿಓಗಳು ಡಿಜಿಟಲ್ ಸಹಿಯನ್ನು ಹಾಕುವುದಕ್ಕೆ ಮಾತ್ರ ಅವಕಾಶ ಇರುವುದರಿಂದ ಅಕ್ರಮಗಳನ್ನು ತಡೆಯುವುದಕ್ಕೆ ಸಹಾಯವಾಗುತ್ತದೆ. ಸಾರ್ವಜನಿಕರು ಅವಶ್ಯಕತೆ ಇದ್ದರೆ ಇ-ಸ್ವತ್ತುನ್ನು ಮಾಡಿಸಿಕೊಂಡು ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ನಿಮ್ಮ ಆಸ್ತಿಯನ್ನು ನೊಂದಾಯಿಸಿಕೊಳ್ಳಬಹುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಯನ್ನು ಮಾರುವಾಗ ಅಥವಾ ಕೊಂಡುಕೊಳ್ಳುವಾಗ ಇ-ಸ್ವತ್ತು ಕಡ್ಡಾಯವಾಗಿದೆ. ಹಾಗಾಗಿ ನೀವು ಕೂಡ ನಿಮ್ಮ ಆಸ್ತಿ ಹಕ್ಕಿನ ಪತ್ರವನ್ನು ಮಾಡಿಸಿಕೊಳ್ಳಿ ಇದರಿಂದ ತುಂಬಾ ಉಪಯೋಗಗಳಿವೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.