ಹೊಟೇಲ್ ನಲ್ಲಿ ವಿವಿಧ ರೀತಿಯ ರುಚಿ ರುಚಿಯಾಗಿರುವ ತಿಂಡಿತಿನಿಸು, ಊಟ ಇರುತ್ತದೆ. ಪ್ರತಿಯೊಂದು ಹೊಟೇಲ್ ಜನರನ್ನು ತನ್ನತ್ತ ಆಕರ್ಷಿಸಲು ಹೊಸಹೊಸ ಪ್ರಯತ್ನಗಳನ್ನು ಮಾಡುತ್ತಿರುತ್ತದೆ. ಅದರಂತೆ ಹೋಟೆಲ್ ವೊಂದರಲ್ಲಿ ಐಸ್ ಕ್ಯಾಂಡಿ ಆಕಾರದಲ್ಲಿ ಇಡ್ಲಿ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ ಹಾಗಾದರೆ ಐಸ್ ಕ್ಯಾಂಡಿ ಇಡ್ಲಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಸಾಮಾನ್ಯವಾಗಿ ಗ್ರಾಹಕರನ್ನು ಸೆಳೆಯಲು ಹೊಟೇಲ್‍ಗಳು ವಿವಿಧ ರೀತಿಯ ಹೊಸ ಹೊಸ ಐಡಿಯಾಗಳ ಮೂಲಕ ವೈವಿಧ್ಯ ಅಡುಗೆ ಮಾಡಲಾಗುತ್ತದೆ. ಅದರಂತೆ ಒಂದು ಹೊಟೇಲ್ ನಲ್ಲಿ ಐಸ್ ಕ್ಯಾಂಡಿ ಆಕಾರದಲ್ಲಿ ಇಡ್ಲಿ ಮಾಡಿದ್ದು ತಟ್ಟೆಯಲ್ಲಿ ಮೂರು ಇಡ್ಲಿ ಇಡಲಾಗಿದ್ದು, ಇನ್ನೊಂದು ಇಡ್ಲಿಯನ್ನು ಸಾಂಬಾರ್ ಕಪ್‍ನಲ್ಲಿ ಅದ್ದಿ ಇಡಲಾಗಿದೆ, ಇದರ ಪಕ್ಕ ಚಟ್ನಿಯ ಕಪ್ ಸಹ ಇಡಲಾಗಿದೆ. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ ಅಷ್ಟೆ ಅಲ್ಲದೆ ಟ್ವಿಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.
ಈ ವಿಶೇಷ ಇಡ್ಲಿಯ ಫೋಟೋವನ್ನು ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ಫೋಟೋಗೆ ಅದ್ಭುತ ಸಾಲು ಬರೆದಿರುವ ಅವರು ಬೆಂಗಳೂರು ಭಾರತದ ಇನೋವೇಷನ್ ಕ್ಯಾಪಿಟಲ್ ಹಲವು ಅನಿರೀಕ್ಷಿತ ವಲಯಗಳಲ್ಲಿ ಇದರ ಕ್ರಿಯೇಟಿವಿಟಿಯನ್ನು ತಡೆಯಲು ಎಂದಿಗೂ ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಐಸ್ ಕಡ್ಡಿಯ ಆಕಾರದ ಇಡ್ಲಿಯನ್ನು ಸಾಂಬಾರ್ ಹಾಗೂ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವುದು ಹೊಸ ಅನುಭವ ನೀಡುತ್ತದೆ.
ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಯಾರಿಗೆ ಇದು ಇಷ್ಟವಾಗಿದೆ, ಯಾರಿಗೆ ಇದು ಇಷ್ಟವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಹೀಗೆ ಪ್ರಶ್ನೆ ಕೇಳಿದ ತಕ್ಷಣ ಹಲವರು ವಿವಿಧ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸುತ್ತಿದ್ದಾರೆ ಹೀಗಾಗಿ ಟ್ವಿಟರ್ ನಲ್ಲಿ ಫುಲ್ ಟ್ರೆಂಡ್ ಆಗಿದೆ.
ಇಡ್ಲಿ ಕುರಿತು ಇದೀಗ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಪರ ವಿರೋಧದ ಕಮೆಂಟ್‍ಗಳು ಬರುತ್ತಿವೆ. ಒಟ್ಟಿನಲ್ಲಿ ಇಡ್ಲಿಯು ತನ್ನ ವಿಭಿನ್ನ ಆಕಾರದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಈ ರೀತಿಯ ಇಡ್ಲಿಯನ್ನು ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ನೀವು ಕೂಡ ಐಸ್ ಕ್ಯಾಂಡಿ ಇಡ್ಲಿಯನ್ನು ತಯಾರಿಸಿ ಫೋಟೊವನ್ನು ಶೇರ್ ಮಾಡಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430