ನಿಮ್ಮ ಮನೆಯಲ್ಲಿ ಅವಲಕ್ಕಿಯಿಂದ ಈ ಚಿಕ್ಕ ಕೆಲಸವನ್ನ ಮಾಡಿದ್ರೆ ಮಹಾಲಕ್ಷ್ಮಿಯ ಅನುಗ್ರಹ ಆಗುತ್ತೆ ಹಾಗೂ ಕುಬೇರ ದೇವನ ಅನುಗ್ರವು ಕೂಡ ದೊರೆಯಲಿದ್ದು ಈ ವರ್ಷ ಪೂರ್ತಿ ಧನಾಗಮನ ಆಗಲಿದೆ. ಹಣಕಾಸಿನ ಲಾಭಗಳು ಹೆಚ್ಚು ಆಗಿ ನಷ್ಟಗಳು ಕಡಿಮೆ ಆಗತ್ತೆ. ಹಾಗಾದ್ರೆ ಅವಲಕ್ಕಿಯಿಂದ ಎನ್ನನ್ನ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಅನ್ನೋದನ್ನ ಈ ಲೇಖನದ ಮೂಲಕ ಓದಿ ತಿಳಿದುಕೊಳ್ಳೋಣ ಬನ್ನಿ.
ಮೊದಲು ಅಕ್ಷಯ ತೃತೀಯ ಅಂದ್ರೆ ಏನು ಅನ್ನೋದರ ಬಗ್ಗೆ 4 ವಿಚಾರಗಳನ್ನ ತಿಳಿದುಕೊಳ್ಳಬೇಕು. ಸಾಕ್ಷಾತ್ ಮಹಾ ವಿಷ್ಣು ತನ್ನ ವಕ್ಷ ಸ್ಥಳದಲ್ಲಿ ತನ್ನ ಪತ್ನಿ ಮಹಾಲಕ್ಷ್ಮಿ ಗೆ ಸ್ಥಾನ ಕೊಟ್ಟ ದಿನ ಈ ಅಕ್ಷಯ ತೃತೀಯ ದಿನ. ಎರಡನೆಯದಾಗಿ ಈ ಜಗತ್ತಿಗೆ ಐಶ್ವರ್ಯವನ್ನು ಕೊಡಲು ಶಿವನು ಮಹಾಲಕ್ಷ್ಮಿ ಹಾಗೂ ಕುಬೇರನನ್ನು ಪೂಜೆ ಮಾಡಿದ ದಿನ ಅಕ್ಷಯ ತೃತೀಯ ದಿನ. ಈಶ್ವರನು ತನಗೆ ಬಂದ ಬ್ರಹ್ಮ ಹತ್ಯಾ ಪಾಪವನ್ನು ಕಳೆದುಕೊಳ್ಳಲು ಅನ್ನಪೂರ್ಣೇಶ್ವರಿ ದೇವಿಯ ಬಳಿ ಭಿಕ್ಷೆ ಬೇಡಿ ಆಹಾರ ಸ್ವೀಕರಿಸಿದ ದಿನವೇ ಈ ಅಕ್ಷಯ ತೃತೀಯ ದಿನ ಎಂಬುದು ಮೂರನೇ ಅಂಶ. ಇನ್ನು ನಾಲ್ಕನೇ ಅಂಶ , ತೀರಾ ಬದವನಾದ ಕುಚೇಲನ್ ತನ್ನ ಸ್ನೇಹಿತ ಶ್ರೀ ಕೃಷ್ಣನನ್ನು ನೋಡಲು ಹೋದಾಗ ತನ್ನ ಬಳಿ ಮೂರು ಹಿಡಿ ಅವಲಕ್ಕಿಯನ್ನು ಕೃಷ್ಣನಿಗೆ ಕೊಟ್ಟಾಗ ಅದನ್ನು ಸ್ವೀಕರಿಸಿದ ಕೃಷ್ಣ ಕುಚೇಲನನ್ನು ಕುಬೇರನನ್ನಾಗಿ ಮಾಡಿದ ದಿನವೇ ಈ ಈ ಅಕ್ಷಯ ತೃತೀಯ ದಿನ.
ಹಾಗಾಗಿ ಅಕ್ಷಯ ತೃತೀಯ ಹಬ್ಬದ ದಿನ ಬೆಳಿಗ್ಗೆ ಸ್ನಾನ ಮಾಡಿ ಮಡಿ ಪೂಜೆಗಳನ್ನು ಬಹಳ ವಿಶೇಷವಾಗಿ ಮಾಡಬೇಕಾಗುತ್ತದೆ. ಈ ದಿನ ಚಿನ್ನವನ್ನು ತೆಗೆದುಕೊಳ್ಳಬೇಕು ಅಂತ ಏನು ಇಲ್ಲ. ಉಳ್ಳವರು ಚಿನ್ನವನ್ನು ತೆಗೆದುಕೊಳ್ಳುತ್ತಾರೆ ಆದರೆ ಹಣಕಾಸಿನ ಸಮಸ್ಯೆ ಇದ್ದು ಚಿನ್ನವನ್ನು ಕೊಳ್ಳಲು ಆಗದೆ ಇದ್ದವರು ಏನು ಮಾಡಬೇಕು? ಅಂತಹವರು ಮನೆಯಲ್ಲಿ ಈ ಒಂದು ಸಣ್ಣ ಪೂಜೆಯನ್ನು ಮಾಡಿಕೊಳ್ಳಬಹುದು. ಅವತ್ತಿನ ದಿನ ನೀವು ಸೂರ್ಯ ಉದಯಿಸುವ ಮೊದಲು ಎದ್ದು ಸ್ನಾನ ಮಾಡಿ ಹಳದಿ ಬಣ್ಣದ ಮಡಿ ಬಟ್ಟೆಯನ್ನ ಧರಿಸಿ ವಿಶೇಷ ಪೂಜೆಯನ್ನು ಮಾಡಬೇಕಾಗುತ್ತದೆ. ದೇವರಿಗೆ ಹಳದಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಬೇಕು. ಅದರ ಜೊತೆಗೆ ಅವಲಕ್ಕಿ ಮತ್ತು ಬೆಲ್ಲವನ್ನು ನೈವೇದ್ಯಕ್ಕೆ ಇಡಬೇಕು. ಬೆಲ್ಲವನ್ನು ಚೂರು ಮಾಡಿ ಕೇವಲ ಮೂರು ಹಿಡಿ ಅವಲಕ್ಕಿಯನ್ನು ಭಕ್ತಿಯಿಂದ ನೈವೇದ್ಯಕ್ಕೆ ಇಡಬೇಕು. ಇದರಿಂದಲೂ ಸಹ ಪುಣ್ಯವನ್ನು ಪಡೆದುಕೊಳ್ಳಬಹುದು. ಚಿನ್ನವನ್ನು ಮಾತ್ರವೇ ಕೊಳ್ಳಬೇಕು ಅಂತ ಏನು ಇಲ್ಲ. ಭಕ್ತಿಯಿಂದ ಚಿಕ್ಕ ನೈವೇದ್ಯವನ್ನು ದೇವರಿಗೆ ಅರ್ಪಿಸಿದರು ಸಹ ಒಳ್ಳೆಯ ಫಲ ಸಿಗತ್ತೆ.
ನೈವೇದ್ಯ ಮಾಡಿದ ಪ್ರಸಾದವನ್ನು ಮನೆಯ ಜನರೆಲ್ಲರೂ ಸೇವಿಸಬೇಕು. ಅಕ್ಷಯ ತೃತೀಯ ದಿನದಂದು ಈ ರೀತಿ ಪೂಜೆ ಮಾಡಿದ್ರೆ, ಸಾಕ್ಷಾತ್ ಶ್ರೀ ಕೃಷ್ಣ, ಕುಬೇರ ಇವರ ಅನುಗ್ರಹ ಆಗತ್ತೆ. ಮಹಾಲಕ್ಷ್ಮಿಯ ಅನುಗ್ರಹ ಆಗು ಅವಲಕ್ಕಿಯ ಜೊತೆ ಬೆಲ್ಲವನ್ನು ಸೇರಿಸಿ ನೈವೇದ್ಯ ಮಾಡಬೇಕು. ಆದರೆ ಈ ಎಲ್ಲ ಕೆಲಸವನ್ನೂ ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ ಮಾಡಬೇಕು. ಪೂಜೆ ಎಲ್ಲಾ ಮುಗಿದ ನಂತರ ಮೂರು ಬಾರಿ ಕುಬೇರ ದೇವರ ಮಂತ್ರವನ್ನು ಪಠಿಸಬೇಕು. ಅವತ್ತಿನ ದಿನ ಮಹಾಲಕ್ಷ್ಮಿಯ ಹಾಗೂ ಕುಬೇರನ ಪ್ರವೇಶ ಆಗತ್ತೆ. ಈ ಮಂತ್ರವನ್ನು ಸರಿಯಾಗಿ ನೆನಪಿಟ್ಟುಕೊಳ್ಳಿ ಅಥವಾ ಬರೆದಿಟ್ಟುಕೊಳ್ಳೀ.
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತೆಯೇ ಧನಧಾನ್ಯ ಸಮ್ರಧ್ಧಿ ಮೇ ದೇಹಿತಾಪಯ ಸ್ವಾಹಾ||” ಈ ಮಂತ್ರವನ್ನ ಅಕ್ಷಯ ತ್ರತೀಯ ದಿನ ೩ಬಾರಿ ಪಠಿಸಿ ಸಾಧ್ಯವಾದರೆ ೨೧ ಬಾರಿ ಪಠಿಸಿ. ಅವತ್ತಿನ ದಿನ ಯಾರಿಗೆ ಚಿನ್ನವನ್ನ ತಗೋಳೋಕೆ ಆಗಲ್ವೋ ಆಢಂಬರದಿಂದ ಹಬ್ಬ ಮಾಡೋಕೆ ಆಗಲ್ವೋ ಅವರು ಈ ರೀತಿ ಸರಳವಾಗಿ ಭಕ್ತಿಯಿಂದ ಎಲ್ಲಾ ಕಷ್ಟಗಳನ್ನೂ ದೂರಮಾಡುವಂತೇ ಮನಸಲ್ಲಿ ಸಂಕಲ್ಪ ಮಾಡಿಕೊಂಡು ಭಕ್ತಿಯಿಂದ ನೈವೇದ್ಯ ಅರ್ಪಿಸಬೇಕು. ಹೀಗೇ ಮಾಡಿದ್ರೆ ಮಹಾಲಕ್ಷ್ಮಿ ದೇವಿಯ ಪ್ರವೇಶ ಆಗತ್ತೆ ಮನೆಯಲ್ಲಿ ಹಲವಾರು ಒಳ್ಳೆಯ ಬದಲಾವಣೆಗಳೂ ಸಹ ಆಗತ್ತೆ.