ಇವತ್ತು ನಾವು ನಿಮಗೆ ತಿಳಿಸುತ್ತಿರುವ ವಿಷಯ ನಾವು ಬಳಸುವ ಔಷಧಿ ಆಯುರ್ವೇದ ಆಗಿರಲಿ ಅಥವಾ ಇನ್ಯಾವುದೇ ಔಷಧಿಯಾಗಿರಲಿ ಅದರ ಪ್ರಮಾಣವನ್ನು ಕಡಿಮೆ ಮಾಡಬೇಕು ಸಾಧ್ಯವಾದಷ್ಟು ಜನಪದ ಔಷಧಿಗಳ ಬಗ್ಗೆ ವಿಚಾರ ಮಾಡಬೇಕು ನಾವು ಜನಪದ ಔಷಧಗಳ ಬಗ್ಗೆ ಹೇಳಿದಾಗ ಅದರ ಉಲ್ಲೇಖ ಎಲ್ಲಿದೆ ಇದನ್ನು ಯಾರು ಹೇಳಿದರು ಯಾವತರ ಹೇಳಿದರು ಯಾವ ಸಂಹಿತೆಯಲ್ಲಿದೆ ಯಾವ ಗ್ರಂಥದಲ್ಲಿದೆ ಎಂದು ಕೇಳಿದಾಗ ಅದರ ಬಗ್ಗೆ ನಾವು ನಿಖರವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ನೀವು ಗಮನಿಸಬಹುದು ಜಾನಪದ ಸಂಗೀತ ಜಾನಪದ ಸಾಹಿತ್ಯವನ್ನು ಆದರೆ ಅದನ್ನು ಬರೆದವರು ಯಾರು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಪರಂಪರಾಗತವಾಗಿ ಹಾಡುತ್ತಾ ಹಾಡುತ್ತಾ ಅದು ಸಂತತಿಯಿಂದ ಸಂತತಿಗೆ ಬಳುವಳಿಯಾಗಿ ಬಂದಿದೆ ಅದು ಸುಳ್ಳು ಎಂದು ಹೇಳುವುದಕ್ಕಾಗುವುದಿಲ್ಲ ಅದೇ ರೀತಿ ಜನಪದ ವೈದ್ಯಶಾಸ್ತ್ರವು ಇದೆ.

ಅದರಲ್ಲಿ ಒಂದು ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಯಾವುದೇ ರೀತಿಯ ಔಷಧಿಗಳು ಬೇಡ. ಆದರೆ ಯಾವುದೇ ಔಷಧಿಯನ್ನು ಬಳಸದೆ ನೋವನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ ಇದು ತಪ್ಪಾಗಿರಬಹುದು ಅಥವಾ ಸರಿಯಾಗಿರಬಹುದು ನಮ್ಮ ಪೂರ್ವಿಕರು ಹೇಳಿದ್ದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಯಾವುದೇ ನೋವನ್ನು ನೋಡಿದ ತಕ್ಷಣಕ್ಕೆ ನೇರವಾಗಿ ಮನೆಮದ್ದನ್ನು ಹೇಳುವುದಲ್ಲ ನೇರವಾಗಿ ಪರಿಹಾರವನ್ನು ಸೂಚಿಸುವುದಲ್ಲ ಮೊದಲು ಆ ನೋವು ಎಲ್ಲಿಂದ ಬಂತು ಯಾಕೆ ಬಂತು ಅದರ ಮೂಲ ನೋಡಬೇಕಾಗುತ್ತದೆ. ಯಾವುದೇ ನೋವಾಗಿರಬಹುದು ತಲೆನೋವು ಮೊಣಕೈ ಮೊಣಕಾಲು ಸೊಂಟ ಇತ್ಯಾದಿ ಇತ್ಯಾದಿ ನೋವು. ನೋವಿಗೆ ಮೊದಲು ಸರಿಯಾದ ಕಾರಣವನ್ನು ತಿಳಿದುಕೊಳ್ಳಬೇಕು.

ನಿಮಗೆ ಯಾವುದೇ ಒಂದು ನೋವು ಕಾಣಿಸಿಕೊಂಡರೂ ಅದಕ್ಕೆ ಮುಖ್ಯ ಕಾರಣ ವಾತ. ವಾತ ಇಲ್ಲದೆ ಯಾವುದೇ ನೋವು ಕೂಡ ಕಾಣಿಸಿಕೊಳ್ಳುವುದಿಲ್ಲ. ನೀವು ನಮ್ಮ ಹಿರಿಯರು ಹೇಳುವುದನ್ನು ಕೇಳಿರಬಹುದು ಸಂಧಿವಾತ ವಾಯುವಾತ ಪಾರ್ಶ್ವವಾತ ವಾಗಿದೆ ಎಂದು ಹೇಳುತ್ತಿರುತ್ತಾರೆ. ಮೈಕೈಯಲ್ಲಿ ವಾಯು ತುಂಬಿಕೊಂಡಿದ್ದರಿಂದ ನೋವಾಗುತ್ತಿದೆ ಎಂದು ಹೇಳುತ್ತಿರುತ್ತಾರೆ.

ಕೆಲವರು ಹೇಳುತ್ತಾರೆ ಆಲೂಗಡ್ಡೆಯನ್ನು ತಿನ್ನಬೇಡಿ ಅದರಿಂದ ವಾತವಾಗುತ್ತದೆ ಬದನೆಕಾಯಿ ತಿನ್ನುವುದರಿಂದ ವಾಯು ಉಂಟಾಗುತ್ತದೆ ಎಂದು ಯಾಕೆ ಹೀಗೆ ಹೇಳುತ್ತಿದ್ದರು ಎಂದರೆ ಅವರಿಗೆ ತಿಳಿದಿತ್ತು ವಾತ ಅಥವಾ ವಾಯು ಹೆಚ್ಚಾದಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂದು. ಹಾಗಾದರೆ ಯಾವ ಯಾವ ಕ್ಷಣಗಳಲ್ಲಿ ವಾಯು ಹೆಚ್ಚಾಗುತ್ತದೆ. ಯಾವ ಯಾವ ಜಾಗದಲ್ಲಿ ಹೆಚ್ಚಾಗುತ್ತದೆ ಎಂಬುದನ್ನು ನೋಡುವುದಾದರೆ ನಮ್ಮ ದೇಹದಲ್ಲಿ ಎಲ್ಲಾ ಕಡೆಯು ವಾಯು ತುಂಬಿರುತ್ತದೆ ಹೆಚ್ಚಾಗಿ ಕರುಳಿನಲ್ಲಿ ಮೂಳೆಗಳಲ್ಲಿ ಕೆಲವೊಂದು ಕಡೆ ಪೊಳ್ಳುಇರುತ್ತದೆ ಪೊಳ್ಳುಇರುವ ಜಾಗದಲ್ಲಿ ವಾಯು ತುಂಬಿಕೊಂಡಿರುತ್ತದೆ.

ಉದಾಹರಣೆಗೆ ನೀವು ಒಂದು ಗ್ಲಾಸ್ ನಲ್ಲಿ ನೀರನ್ನು ತೆಗೆದುಕೊಳ್ಳಿ ಅದನ್ನ ಚೆಲ್ಲಿ ಆಗ ಯಾರನ್ನಾದರೂ ಕೇಳಿ ಅದರಲ್ಲಿ ಏನಿದೆ ಎಂದು. ಅವರು ಹೇಳುತ್ತಾರೆ ಅದರಲ್ಲಿ ಏನೂ ಇಲ್ಲ ಎಂದು ಅದು ಸರಿ ಆದರೆ ಅದರಲ್ಲಿ ಗಾಳಿ ಇರುತ್ತದೆ ಎಲ್ಲಿ ಏನು ಇರುವುದಿಲ್ಲವೋ ಅಲ್ಲಿ ಗಾಳಿ ಇರುತ್ತದೆ ಕರುಳಿನಲ್ಲಿ ಏನು ಇಲ್ಲದಿದ್ದಾಗ ಅಲ್ಲಿ ಗಾಳಿ ತುಂಬಿಕೊಳ್ಳುತ್ತದೆ ಅದೇ ರೀತಿ ಮೂಳೆಯಲ್ಲಿ ಪೊಳ್ಳು ಇರುವ ಜಾಗದಲ್ಲಿ ಗಾಳಿ ತುಂಬಿಕೊಳ್ಳುತ್ತದೆ ಹಾಗಾಗಿ ನಮ್ಮ ದೇಹದಲ್ಲಿ ಎಲ್ಲಿ ಪೊಳ್ಳುಇರುತ್ತದೆಯೋ ಅಲ್ಲೆಲ್ಲಾ ಗಾಳಿ ತುಂಬಿಕೊಂಡಿರುತ್ತದೆ.

ಕರುಳು ಹೊಟ್ಟೆಯ ಒಳಗೆ ಇರುತ್ತದೆ ಅದಕ್ಕೆ ನಾವೇನು ಮಾಡುವುದಕ್ಕೆ ಬರುವುದಿಲ್ಲ ಆದರೆ ಕಿವಿ ದೇಹದ ಹೊರಗೆ ಕಾಣಿಸುತ್ತದೆ ಕಿವಿಯ ಒಳಭಾಗದಲ್ಲಿ ಪೊಳ್ಳು ಇದೆ ಮೊದಲೇ ಹೇಳಿದ ಹಾಗೆ ಎಲ್ಲಿ ಪೊಳ್ಳುಇರುತ್ತದೆಯೋ ಅಲ್ಲಿ ಗಾಳಿ ತುಂಬಿಕೊಳ್ಳುತ್ತದೆ ಕಿವಿಯಲ್ಲಿ ಪೊಳ್ಳುಇರುವ ಕಾರಣ ಅದರ ಮೂಲಕ ಗಾಳಿ ದೇಹದ ಒಳಗೆ ಹೋಗಿ ದೆಹದೊಳಗೆ ನೋವು ಕಾಣಿಸಿಕೊಳ್ಳುತ್ತದೆ ದೇಹದಲ್ಲಿ ಗಾಳಿ ಯಾವಾಗ ಹೆಚ್ಚಾಗುತ್ತಾ ಹೋಗುತ್ತದೆ ಆಗ ನೋವುಗಳು ದೇಹದಲ್ಲಿ ಹೆಚ್ಚಾಗುತ್ತಾ ಹೋಗುತ್ತವೆ. ನೀವು ಗಮನಿಸಿರಬಹುದು ನೀವು ಬಸ್ಸಲ್ಲಿ ಪ್ರಯಾಣ ಮಾಡುತ್ತಿರುವಾಗ ಕಿಡಕಿಯ ಬಳಿ ಕುಳಿತು ಕೊಂಡಿರುವ ಗ್ಲಾಸುಗಳನ್ನು ತೆಗೆದುಕೊಂಡಿರುತ್ತದೆ ಗಾಳಿ ಚೆನ್ನಾಗಿ ಹೊಡೆಯುತ್ತಿರುತ್ತದೆ ನೀವು ಒಂದರಿಂದ ಒಂದು ಹತ್ತು ಕಿಲೋಮೀಟರ್ ಹೋದಾಗ ನಿಮಗೆ ಸಣ್ಣದಾಗಿ ತಲೆ ನೋವು ಕಾಣಿಸಿಕೊಳ್ಳುತ್ತದೆ ಇದಕ್ಕೆ ಕಾರಣ ನಿಮ್ಮ ತಲೆಯೊಳಗೆ ಗಾಳಿ ಹೆಚ್ಚಾದಂತೆ ನೋವು ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಜಾನಪದ ತಜ್ಞರು ಹೇಳುವುದು ನೀವು ಯಾವಾಗ ವಾತ ಪ್ರದೇಶಗಳಿಗೆ ಹೋಗುತ್ತೀರಿ ನೀವಾಗಿರಬಹುದು ಅಥವಾ ಬಾಣಂತಿಯರಾಗಿರಬಹುದು ಕಿವಿಯನ್ನು ಮುಚ್ಚಿಕೊಂಡಿರು ಎಂದು ಹೇಳುತ್ತಾರೆ ನೀವು ಬಾಣಂತಿ ಹೆಂಗಸರನ್ನು ನೋಡಿರಬಹುದು ಅವರು ಕಿವಿಗೆ ಹತ್ತಿಯನ್ನು ಹಾಕಿ ಮಫ್ಲರ್ ಗಳನ್ನು ಕಟ್ಟಿಕೊಂಡಿರುತ್ತಾರೆ. ಅವರು ಹೊರಗೆ ಬಂದಾಗ ಅವರನ್ನು ನೋಡಿದರೆ ಗೊತ್ತಾಗುತ್ತದೆ ಅವರು ಬಾಣಂತಿ ಎಂದು. ನೀವು ಕೂಡ ಅತಿಯಾಗಿ ಗಾಳಿ ಬೀಸುವ ಪ್ರದೇಶಗಳಿಗೆ ಹೋಗುವಾಗ ಕಿವಿಗೆ ಹತ್ತಿಯನ್ನು ಹಾಕಿಕೊಂಡು ಹೋಗಿ ಹಾಗಂತ ಸಣ್ಣ ಚೂರುಗಳನ್ನ ಹಾಕಿಕೊಂಡು ಅದು ಕಿವಿಯ ಒಳಗೆ ಹೋಗಿ ಅದರಿಂದ ಮತ್ತೆ ಬೇರೆ ರೀತಿಯ ಪರಿಣಾಮಗಳು ಉಂಟಾಗದಂತೆ ಸರಿಯಾಗಿ ಎಷ್ಟು ಪ್ರಮಾಣದ ಹತ್ತಿ ಬೇಕು ಅಷ್ಟನ್ನು ಹಾಕಿಕೊಳ್ಳಿ. ನೀವು ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಂಡಾಗ ಒಂದೇಸಾರಿ ಎಲ್ಲಾ ನೋವುಗಳು ಮಾಯವಾಗುವುದಿಲ್ಲ ಹಂತಹಂತವಾಗಿ ನೋವುಗಳು ಕಡಿಮೆಯಾಗುತ್ತದೆ ಅಥವಾ ದೇಹದೊಳಗೆ ಗಾಳಿ ಪ್ರಮಾಣ ಕಡಿಮೆಯಾಗಿ ನೋವು ಕಡಿಮೆಯಾಗುತ್ತದೆ.

ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಬೌದ್ಧ ಭಿಕ್ಷುಗಳು ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಳ್ಳುತ್ತಿದ್ದರು ಕಾರಣ ಅವರು ಬೆಟ್ಟಗಳಲ್ಲಿ ಗುಡ್ಡಗಳಲ್ಲಿ ವಾಸಿಸುತ್ತಿದ್ದರು. ನೀವು ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಳ್ಳುವುದಕ್ಕೆ ಅದಕ್ಕೇನು ತುಂಬಾ ಹೆಚ್ಚಿನದಾಗಿ ಖರ್ಚು ಮಾಡುವ ಅವಶ್ಯಕತೆ ಇಲ್ಲ ಪ್ರಾಚೀನ ಕಾಲದಿಂದಲೂ ನಡೆದು ಬಂದ ಪದ್ಧತಿ ಇದು. ಇದು ಮುಂದುವರೆಯಬೇಕು ಎಂಬ ಸಾಮಾಜಿಕ ಕಳಕಳಿಯಿಂದ ನಾವು ನಿಮಗೆ ಈ ವಿಷಯವನ್ನು ತಿಳಿಸುತ್ತಿದ್ದೇವೆ ನೀವು ಕೂಡ ಜವಾಬ್ದಾರಿಯುತ ಪ್ರಜೆಗಳಾಗಿ ಮುಂದಿನ ಸಂತತಿಯವರಿಗೆ ಇದನ್ನು ತಿಳಿಸಿ ಕೊಡುವ ಉದ್ದೇಶದಿಂದ ನಾವು ನಿಮ್ಮ ಮುಂದೆ ಈ ವಿಷಯವನ್ನು ಪ್ರಸ್ತುತಪಡಿಸಿದ್ದೇವೆ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!