ನಮ್ಮ ಕರ್ನಾಟಕ ರಾಜ್ಯ ದೇವಾಲಯಗಳ ಬೀಡು. ಒಂದೊಂದು ದೇವಾಲಯ ತನ್ನದೆ ಆದ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅದೆ ರೀತಿ ಪ್ರಸಿದ್ಧವಾದ ಉಡುಪಿಯ ಶ್ರೀ ಕೃಷ್ಣ ದೇವಾಲಯದ ಬಗ್ಗೆ ಹಾಗೂ ಉಡುಪಿ ಎಂಬ ಹೆಸರು ಆ ಊರಿಗೆ ಬರಲು ಕಾರಣವನ್ನು ಈ ಲೇಖನದ ಮೂಲಕ ತಿಳಿಯೋಣ.
ಕರ್ನಾಟಕ ರಾಜ್ಯದಲ್ಲಿ ಅನೇಕ ಪವಿತ್ರ, ಪುಣ್ಯ ಸ್ಥಳಗಳಿವೆ. ಪ್ರವಾಸಿ ತಾಣಗಳ ಜೊತೆಗೆ ದೇವಾಲಯಗಳು ಹೆಚ್ಚಿವೆ. ಪ್ರತಿದಿನ ಲಕ್ಷಾಂತರ ಜನರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ದೇಶ ವಿದೇಶಗಳಿಂದ ಜನರು ಬರುತ್ತಾರೆ. ಕರ್ನಾಟಕದ ದೇವಾಲಯಗಳ ಇತಿಹಾಸ ಬಹಳ ವಿಶೇಷವಾಗಿದೆ. ಉಡುಪಿಯ ಶ್ರೀಕೃಷ್ಣ ದೇವಾಲಯವು ಒಂದು ಪ್ರಮುಖ, ಪವಿತ್ರ ದೇವಾಲಯವಾಗಿದೆ.
ಈ ದೇವಾಲಯ ಶ್ರೀಕೃಷ್ಣನಿಗೆ ಸಂಬಂಧಿಸಿದ ದೇವಾಲಯವಾಗಿದೆ. ಕಿಂಡಿಯಲ್ಲಿ ಕಾಣುವ ಕೃಷ್ಣನನ್ನು ನೋಡಲು ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಈ ದೇವಾಲಯ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಪ್ರಜಾಪತಿಯ ಶಾಪದಿಂದ ಮುಕ್ತಿ ಪಡೆಯಲು ಚಂದ್ರನು ಉಡುಪಿಯಲ್ಲಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ನಂತರ ಅಲ್ಲಿ ಒಂದು ದೇವಾಲಯವನ್ನು ನಿರ್ಮಿಸುತ್ತಾನೆ.
ಆ ದೇವಾಲಯಕ್ಕೆ ಚಂದ್ರೇಶ್ವರ ದೇವಾಲಯ ಎಂದು ಕೂಡ ಕರೆಯುತ್ತಾರೆ ಮತ್ತು ಆ ದೇವಾಲಯದಲ್ಲಿ ಎಲ್ಲೆಲ್ಲೂ ಉಡುಪ ಎಂಬ ಅಕ್ಷರವು ಕಾಣಿಸುತ್ತಿತ್ತು. ಹೀಗಾಗಿ ಅಲ್ಲಿನ ಜನರು ಆ ಊರಿಗೆ ಉಡುಪ ಎಂದು ಹೆಸರಿಡಲು ನಿರ್ಧರಿಸುತ್ತಾರೆ. ಉಡುಪ ಎಂಬ ಹೆಸರು ಕಾಲಕ್ರಮೇಣ ಉಡುಪಿ ಎಂದಾಯಿತು. ಉಡುಪಿಯಲ್ಲಿ ಮೊದಲು ಚಂದ್ರೇಶ್ವರ ದೇವಾಲಯ ನಿರ್ಮಾಣವಾಗಿರುವುದರಿಂದ ಇಲ್ಲಿಗೆ ಬರುವ ಭಕ್ತರು ಮೊದಲು ಅನಂತ ಈಶ್ವರ ಹಾಗೂ ಚಂದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ನಂತರ ಕೃಷ್ಣನ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬುದು ಇಲ್ಲಿನ ವಾಡಿಕೆಯಾಗಿದೆ. ಒಮ್ಮೆ ಕೃಷ್ಣನ ವಿಗ್ರಹವು ದ್ವಾರಕೆಯಲ್ಲಿ ಗೋಪಿ ಚಂದನದಲ್ಲಿ ಮುಳುಗಿ ಹೋಗುತ್ತದೆ. ಆಗ ಸಮುದ್ರದಲ್ಲಿ ಮೀನು ಹಿಡಿಯುತ್ತಿರುವ ಅಂಬಿಗನಿಗೆ ವಿಗ್ರಹ ಸಿಗುತ್ತದೆ. ಅವನು ವಿಗ್ರಹ ತೆಗೆದುಕೊಂಡು ದೋಣಿಯಲ್ಲಿ ಪ್ರಯಾಣ ಬೆಳೆಸುತ್ತಾನೆ ಉಡುಪಿಯ ಬಳಿ ಮಲ್ಪೆಗೆ ತಲುಪುತ್ತಾನೆ ಆಗ ಸಮುದ್ರದಲ್ಲಿ ಬಿರುಗಾಳಿ, ಸುಂಟರಗಾಳಿ ಬೀಸುತ್ತದೆ.
ಅದೆ ಸಮಯಕ್ಕೆ ವಿಗ್ರಹ ಮಾಯವಾಗುತ್ತದೆ ಆಗ ಅಲ್ಲಿಗೆ ಬಂದ ಮಧ್ವಾಚಾರ್ಯರು ತಮ್ಮ ದಿವ್ಯದೃಷ್ಟಿಯಿಂದ ತಿಳಿದು ತಮ್ಮ ಶಕ್ತಿಯಿಂದ ಬಿರುಗಾಳಿಯನ್ನು ನಿಲ್ಲಿಸುತ್ತಾರೆ. ಕೊನೆಗೆ ಕೃಷ್ಣನ ವಿಗ್ರಹವು ಮಧ್ವಾಚಾರ್ಯರಿಗೆ ಸಿಗುತ್ತದೆ. ಮಧ್ವಾಚಾರ್ಯರು ವಿಗ್ರಹವನ್ನು ಅಲ್ಲಿದ್ದ ಒಂದು ಕೊಳದಲ್ಲಿ ಶುದ್ಧೀಕರಿಸಿ ಪ್ರತಿಷ್ಠಾಪಿಸುತ್ತಾರೆ, ಅಂದಿನಿಂದ ಅಲ್ಲಿ ಶ್ರೀಕೃಷ್ಣ ನೆಲೆಸಿದ್ದಾನೆ. ನಂತರ ಉಡುಪಿಯನ್ನು ಆಳಿದ ರಾಜ ಮಹಾರಾಜರು ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ನಿರ್ಧರಿಸಿ ದೇವಾಲಯವನ್ನು ಮತ್ತು ಮಠವನ್ನು ನಿರ್ಮಿಸಿದರು.
ಶ್ರೀಕೃಷ್ಣ ವಿಗ್ರಹವನ್ನು ಶುದ್ಧೀಕರಿಸಿದ ಕೊಳಕ್ಕೆ ಇಂದು ಮಾಧ್ವ ಸರೋವರ ಎಂದು ಕರೆಯುತ್ತಾರೆ. ಮಧ್ವಾಚಾರ್ಯರು 8 ಗ್ರಾಮಗಳಲ್ಲಿ ಮಠಗಳನ್ನು ನಿರ್ಮಿಸಿ ತಮ್ಮ ಶಿಷ್ಯರನ್ನು ಮಠದ ಮುಖ್ಯಸ್ಥರನ್ನಾಗಿ ನೇಮಿಸುತ್ತಾರೆ. ಆ ಮಠಗಳು ಇಂದು ಅಷ್ಟಮಠಗಳಾಗಿವೆ. ಪೇಜಾವರ, ಪಲಿಮಾರು, ಅದಮಾರು, ಪುತ್ತಿಗೆ, ಸೋದೆ, ಕೃಷ್ಣಾಪುರ, ಶಿರೂರು, ಗಾಳಿಯೂರುಗಳಲ್ಲಿ ಮಠಗಳಿವೆ. 16 ನೇ ಶತಮಾನದಲ್ಲಿ ವಾದಿರಾಜರ ಆಡಳಿತವಿತ್ತು. ಆ ಸಮಯದಲ್ಲಿ ಕೆಳಜಾತಿಯವರನ್ನು ಕೇವಲವಾಗಿ ಕಾಣುತ್ತಿದ್ದರು.
ಉಡುಪಿಯಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಾಣವಾಗಿರುವುದರಿಂದ ಶ್ರೀಕೃಷ್ಣನನ್ನು ನೋಡಲು ಕೆಳಜಾತಿಯವರು ಹೋಗುತ್ತಿದ್ದರು ಆದರೆ ಅವರನ್ನು ದೇವಾಲಯದ ಒಳಗೆ ಬಿಡುತ್ತಿರಲಿಲ್ಲ. ಕೆಳಜಾತಿಗೆ ಸೇರಿದ ಕನಕದಾಸರು ಶ್ರೀಕೃಷ್ಣನ ದೇವಾಲಯಕ್ಕೆ ಬರುತ್ತಾರೆ ಅವರನ್ನು ದೇವಾಲಯದ ಒಳಗೆ ಬಿಡುವುದಿಲ್ಲ, ದೇವಾಲಯದ ಸಿಬ್ಬಂದಿಗಳು ಅವರನ್ನು ಹೊರದಬ್ಬುತ್ತಾರೆ. ಬೇಸರಗೊಂಡ ಕನಕದಾಸರಿಗೆ ಶ್ರೀಕೃಷ್ಣನನ್ನು ನೋಡುವ ಆಸೆ ಹೆಚ್ಚುತ್ತದೆ.
ನಂತರ ಕನಕದಾಸರು ದೇವಾಲಯದ ಗರ್ಭಗುಡಿಯ ಹಿಂದಿನ ಗೋಡೆಯ ಹಿಂದೆ ನಿಂತು ಕೃಷ್ಣನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಕನಕದಾಸರ ಭಕ್ತಿ ಮೆಚ್ಚಿ ಶ್ರೀಕೃಷ್ಣನು ದೇವಾಲಯದ ಹಿಂದೆ ತಿರುಗಿ ಕನಕದಾಸರಿಗೆ ದರ್ಶನ ನೀಡುತ್ತಾರೆ. ಇದನ್ನು ಕಂಡು ಪೂಜೆ ಮಾಡುತ್ತಿರುವ ಅರ್ಚಕರು ದಿಗ್ಭ್ರಾಂತರಾಗುತ್ತಾರೆ. ಕನಕದಾಸರು ಶ್ರೀಕೃಷ್ಣನನ್ನು ನೋಡಿದ ಕಿಂಡಿ ಇಂದು ಕನಕನಕಿಂಡಿಯಾಗಿ ಪ್ರಸಿದ್ಧಿ ಪಡೆದಿದೆ. ಹೀಗೆ ದ್ವಾರಕಾದಿಂದ ಶ್ರೀಕೃಷ್ಣನು ಉಡುಪಿಗೆ ಆಗಮಿಸಿ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದಾನೆ ಎಂಬ ನಂಬಿಕೆಯಿದೆ. ಉಡುಪಿ ಕ್ಷೇತ್ರದಲ್ಲಿ ಇಡಿ ವರ್ಷ ಶ್ರೀಕೃಷ್ಣನಿಗೆ ಸಂಬಂಧಿಸಿದ ಉತ್ಸವಗಳು ನಡೆಯುತ್ತಲೆ ಇರುತ್ತದೆ ಅದರಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ವಿಶೇಷ ಪೂಜೆಗಳೊಂದಿಗೆ ನಡೆಯುತ್ತದೆ.
ಉಡುಪಿಯು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 405 ಕಿಲೋಮೀಟರ್ ದೂರದಲ್ಲಿದೆ. ಮಂಗಳೂರಿನಿಂದ 56 ಕಿಲೋ ಮೀಟರ್ ದೂರದಲ್ಲಿದೆ. ಉಡುಪಿಯ ದೇವಾಲಯದಲ್ಲಿ ಪ್ರತಿ ದಿನ ಅನ್ನದಾಸೋಹ ನಡೆಯುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಉಡುಪಿ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆಯಬೇಕು.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430