ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಬರುವ ಶ್ರಾವಣ ಮಾಸವು ಶಿವನ ಆರಾಧನೆಗೆ ಉತ್ತಮ ಸಮಯವಾಗಿದೆ. ಈ ಮಾಸದಲ್ಲಿ ಶಿವನ ಆರಾಧನೆಯನ್ನು ಮಾಡುವುದರಿಂದ ಪುಣ್ಯವು ಲಭಿಸುತ್ತದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಯನ್ನು ಹೇಗೆ ಮಾಡಬೇಕು ಹಾಗೂ ಶಿವನ ಆರಾಧನೆಯಿಂದ ದೊರೆಯುವ ಪುಣ್ಯ ಫಲದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಶ್ರಾವಣ ಮಾಸವು ಶಿವನ ಆರಾಧನೆಗೆ ಉತ್ತಮವಾದ ಮಾಸವಾಗಿದೆ. ಆಗಸ್ಟ್ 9 ರಿಂದ ಸೆಪ್ಟೆಂಬರ್ ತಿಂಗಳಿನವರೆಗೂ ಶ್ರಾವಣ ಮಾಸ ಇರುತ್ತದೆ. ಶ್ರಾವಣ ಮಾಸದಲ್ಲಿ ಶಿವನನ್ನು ಭಕ್ತಿಯಿಂದ ಆರಾಧಿಸುವುದರಿಂದ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸದಲ್ಲಿ ಬರುವ ಸೋಮವಾರಕ್ಕೆ ವಿಶೇಷ ಮಹತ್ವವಿದ್ದು ಈ ದಿನ ಶಿವನ ಆರಾಧನೆ ಮಾಡುವುದರಿಂದ ಹೆಚ್ಚಿನ ಪುಣ್ಯ ಲಭಿಸುತ್ತದೆ.

ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಈ ಮಾಸವನ್ನು ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಯು 108 ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಶ್ರಾವಣ ಮಾಸದಲ್ಲಿ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಶಿವನ ಆರಾಧನೆ ಮಾಡಿದರೆ ಶನಿ ದೋಷ ಸೇರಿದಂತೆ ಗ್ರಹ ದೋಷದಿಂದ ಮುಕ್ತರಾಗಬಹುದು.

ಶ್ರಾವಣ ಮಾಸದ ಸೋಮವಾರದ ದಿನದಂದು ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಉತ್ತಮ ದೈಹಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಪಡೆಯಬಹುದು. ಜೇನು ತುಪ್ಪ, ತುಪ್ಪದಿಂದ ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಸಂಪತ್ತು ಸಮೃದ್ಧಿ ಲಭಿಸುತ್ತದೆ. ಶಿವನನ್ನು ಆದರ್ಶ ಪುರುಷ ಎಂದು ಕರೆಯಲಾಗುತ್ತದೆ ಅವಿವಾಹಿತ ಸ್ತ್ರೀಯರು ಶಿವನಂತಹ ಗಂಡನನ್ನು ಪಡೆಯಲು ಶಿವನನ್ನು ಪೂಜಿಸುತ್ತಾರೆ.

ವಿವಾಹಿತ ಸ್ತ್ರೀಯರು ತಮ್ಮ ಗಂಡನ ಆಯಸ್ಸಿಗಾಗಿ ಶಿವನನ್ನು ಪೂಜಿಸುತ್ತಾರೆ. ಶಿವಪುರಾಣದ ಪ್ರಕಾರ ಶ್ರಾವಣಮಾಸದಲ್ಲಿ ಉಪವಾಸ ಮಾಡುವವರು ಶಿವನ ಅನುಗ್ರಹ ಪಡೆದು ತಮ್ಮೆಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ. ವಿವಾಹದ ಅಡೆತಡೆಗಳನ್ನು ನಿವಾರಿಸಲು ಶಿವನನ್ನು ಪೂಜೆ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಮಾಡುವ ಶಿವಾರಾಧನೆ ಆರೋಗ್ಯದಲ್ಲಿ ಉತ್ತಮ ಬದಲಾವಣೆಯನ್ನು ತರುತ್ತದೆ ಹಾಗೂ ಮಾರಕ ರೋಗಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಈ ತಿಂಗಳಿನಲ್ಲಿ ಪಿತೃ ದೋಷ ನಿವಾರಣಾ ಪೂಜಾ, ಸರ್ಪ ಕಾಲ ನಿವಾರಣಾ ಪೂಜಾ, ಮಂಗಳ ದೋಷ ನಿವಾರಣಾ ಪೂಜಾಗಳನ್ನು ಮಾಡಲು ಉತ್ತಮವಾಗಿದೆ. ಓಂ ನಮಃ ಶಿವಾಯ ಮತ್ತು ಮಹಾ ಮೃತ್ಯುಂಜಯ ಮಂತ್ರಗಳನ್ನು ಪಠಿಸುವುದರಿಂದ ಅಪಾಯದಿಂದ ಮತ್ತು ಅಕಾಲಿಕ ಮರಣದಿಂದ ಪಾರಾಗಬಹುದು. ರುದ್ರಾಕ್ಷಿ ಧರಿಸಿಕೊಂಡು ಶಿವನ ಆರಾಧನೆಯನ್ನು ಮಾಡುವುದು ಬಹಳ ಒಳ್ಳೆಯದು.

ದಂತಕಥೆಗಳ ಪ್ರಕಾರ ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಮಾಸದಲ್ಲಿ ಮಾಡುವ ದಾನ ಧರ್ಮವು ಜ್ಯೋತಿರ್ಲಿಂಗಕ್ಕೆ ಭೇಟಿ ನೀಡುವ ಫಲವನ್ನು ನೀಡುತ್ತದೆ. ಶ್ರಾವಣ ಮಾಸದ ಸೋಮವಾರದಂದು ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವುದರೊಂದಿಗೆ ಬಿಲ್ವ ಮರವನ್ನು ಪೂಜಿಸುವುದು ಬಹಳ ಒಳ್ಳೆಯದು. ಬಿಲ್ವಪತ್ರೆ ಶಿವನಿಗೆ ಪ್ರಿಯವಾಗಿದ್ದು ಅದರ ಬೇರಿನಲ್ಲಿ ಶಿವ ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ.

ಶ್ರಾವಣ ಮಾಸದಲ್ಲಿ ಮಾಡುವ ಪೂಜೆಯು ತೀರ್ಥಯಾತ್ರೆಗೆ ಸಮನಾದ ಫಲಿತಾಂಶಗಳನ್ನು ಒದಗಿಸುತ್ತದೆ. ಶ್ರಾವಣ ಮಾಸ ಅಥವಾ ಶ್ರಾವಣ ಮಾಸದಲ್ಲಿ ಬರುವ ಶನಿವಾರವು ಶನಿ ದೇವರ ಪೂಜೆಗೆ ಉತ್ತಮವಾಗಿದೆ. ಶನಿ ದೇವಾಲಯಗಳಲ್ಲಿ ಶನಿದೇವರಿಗೆ ತೈಲಾಭಿಷೇಕ ಮಾಡುವುದರಿಂದ ಶನಿ ದೋಷದಿಂದ ಆಗುವ ಪರಿಣಾಮಗಳನ್ನು ನಿವಾರಿಸಿಕೊಳ್ಳಬಹುದು.

ಶ್ರಾವಣ ಮಾಸದಲ್ಲಿ ಉತ್ತಮ ಫಲಕ್ಕಾಗಿ ಕಠಿಣ ಉಪವಾಸ ಮಾಡಬಹುದು ನೀರನ್ನು ಬಿಟ್ಟು ಇಡಿ ದಿನ ಏನನ್ನೂ ಸೇವಿಸಬಾರದು, ಸೂರ್ಯಾಸ್ತದ ನಂತರ ಉಪವಾಸವನ್ನು ಮುರಿದು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸೇರಿಸದ ನಿಯಮಿತ ಆಹಾರವನ್ನು ಸೇವಿಸಬೇಕು. ಭಾಗಶಃ ಉಪವಾಸವನ್ನು ಮಾಡಬಹುದು ಅಂದರೆ ಉಪವಾಸದ ದಿನ ಹಣ್ಣು-ಹಂಪಲು, ಡ್ರೈಫ್ರೂಟ್ಸ್ ಸೇವಿಸುವುದು ರಾತ್ರಿ ಒಂದು ಬಾರಿ ಊಟ ಮಾಡಬಹುದು. ಶ್ರಾವಣ ಮಾಸದಲ್ಲಿ ಶಿವ ಆರಾಧನೆಯನ್ನು ಮಾಡುವುದರಿಂದ ಉತ್ತಮ ಪ್ರತಿಫಲ ಪಡೆಯಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!