ನೀವೇನಾದರೂ ಆಸ್ತಿಯನ್ನು ಖರೀದಿಸಬೇಕೆಂದುಕೊಂಡಿದ್ದರೆ ಅಥವಾ ಕೃಷಿ ಭೂಮಿಯನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಜಾಗವನ್ನು ತೆಗೆದುಕೊಳ್ಳಬೇಕು ಎಂದುಕೊಂಡಿದ್ದರೆ ಈರೀತಿಯ ಆಸ್ತಿಯನ್ನು ಖರೀದಿಮಾಡಬೇಕಾದರೆ ನೀವು ಕೆಲವು ದಾಖಲೆಗಳನ್ನು ಪರಿಶೀಲಸ ಬೇಕಾಗುತ್ತವೆ ಯಾಕೆಂದರೆ ನೀವು ಕಷ್ಟ ಪಟ್ಟು ಗಳಿಸಿದ ಹಣದಿಂದ ನೀವು ಆಸ್ತಿಯನ್ನು ಖರೀದಿಸುತ್ತಿರಿ. ಹಾಗಾದರೆ ಯಾವೆಲ್ಲ ದಾಖಲೆಗಳನ್ನು ಪರಿಶೀಲಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲನೆಯ ದಾಖಲೆ ಟೈಟಲ್ ಡಿಡ್ ಅಥವಾ ಮದರ್ ಡಿಡ್. ಇದರಲ್ಲಿ ಆಸ್ತಿಯನ್ನು ಮಾರುವವರಿಗೆ ಆ ಆಸ್ತಿ ಯಾವ ಮೂಲದಿಂದ ಬಂದಿದೆ ಎಂಬುದು ಇರುತ್ತದೆ ಅದು ಪಿತ್ರಾರ್ಜಿತ ಅಥವಾ ಸ್ವಂತ ದುಡಿಮೆಯಿಂದ ಅವರು ಗಳಿಸಿದ್ದಾಗಿರಬಹುದು ಅಥವಾ ಸರ್ಕಾರಕ್ಕೆ ದುಡ್ಡು ಕೊಟ್ಟು ಖರೀದಿಸಿದ್ದಾಗಿರಬಹುದು ನಾನಾ ಕಾರಣಗಳಿಂದ ಆ ಜಮೀನು ಅವರಿಗೆ ಬಂದಿರಬಹುದು.
ಯಾವ ಕಾರಣಕ್ಕೆ ಆ ಅಸ್ತಿ ಅವರಿಗೆ ಬಂದಿರಬಹುದು ಎಷ್ಟು ವರ್ಷಗಳಿಂದ ಆ ಆಸ್ತಿ ಅವರ ಬಳಿ ಇದೆ ಇದಕ್ಕೂ ಮೊದಲು ಅದು ಯಾರ ಬಳಿ ಇತ್ತು ಹೀಗೆ ಜಾಗಕ್ಕೆ ಸಂಬಂಧಿಸಿದ ಮಾಹಿತಿ ಈ ಟೈಟಲ್ ಡಿಡ್ ನಲ್ಲಿರುತ್ತದೆ.ಹಾಗಾಗಿ ಇದನ್ನು ಸರಿಯಾಗಿ ಪರಿಶೀಲಿಸಿ ಆಸ್ತಿ ಅವರ ಹೆಸರಿನಲ್ಲಿಯೇ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ಆಸ್ತಿಯನ್ನು ಖರೀದಿಸುವುದು ಉತ್ತಮ.
ಎರಡನೆಯ ದಾಖಲೆ ರೆವೆನ್ಯೂ ರೆಕಾರ್ಡ್ಸ್ ಕರ್ನಾಟಕದಲ್ಲಿ ಕೃಷಿ ಭೂಮಿ ಮತ್ತು ಇತರೆ ಭೂಮಿಯನ್ನು ಹೊಂದಿರುವವರು ರೆವೆನ್ಯೂ ರೆಕಾರ್ಡ್ಸ್ ಅನ್ನು ಇಟ್ಟುಕೊಂಡಿರುತ್ತಾರೆ ಅದರಲ್ಲಿ ಆ ಭೂಮಿಯನ್ನು ಯಾವುದಕ್ಕೆ ಉಪಯೋಗಿಸುತ್ತಾರೆ ಮತ್ತು ಜಮೀನು ಎಷ್ಟು ಎಕರೆ ಎಷ್ಟು ಗುಂಟೆ ಅಲ್ಲಿ ಯಾವ ಬೆಳೆ ಬೆಳೆಯುತ್ತಾರೆ ಯಾವ ಬಣ್ಣದ ಮಣ್ಣು ಹೀಗೆ ಪ್ರತಿಯೊಂದು ಮಾಹಿತಿ ರೆವೆನ್ಯೂ ರೆಕಾರ್ಡ್ಸ್ ನಲ್ಲಿರುತ್ತದೇ. ಇದನ್ನು ಆರ್ ಟಿ ಸಿ ದಾಖಲೆ ಎಂದು ಕರೆಯಲಾಗುತ್ತದೆ. ಮತ್ತು ಮುಟೇಷನ್ ಎಕ್ಸಟ್ರಾಕ್ಟನನ್ನು ಪರಿಶೀಲಿಸಬೇಕು ಅದರಲ್ಲಿ ಈ ಜಮೀನು ಯಾರಿಗೆಲ್ಲ ಹೋಗಿದೆ ಯಾವಕಾರಣದಿಂದ ಹೋಗಿದೆ ಎಂಬ ಮಾಹಿತಿ ಇರುತ್ತದೆ.
ಮೂರನೆಯ ದಾಖಲೆ ಸರ್ವೇನಕ್ಷೆ. ನೀವು ಯಾವ ಸರ್ವೇ ನಂಬರ್ ನಲ್ಲಿ ಆಸ್ತಿಯನ್ನು ಖರೀದಿಸುತ್ತಿದ್ದಿರಿ ಆ ಸರ್ವೇ ನಂಬರ್ ನಲ್ಲಿ ನೀವು ತೆಗೆದುಕೊಳ್ಳುವ ಆಸ್ತಿ ಯಾವ ಬ್ಲಾಕ್ ನಲ್ಲಿ ಬರುತ್ತದೆ ಎಂಬುದನ್ನು ಸರ್ಕಾರದವರು ಸರ್ವೇ ಸ್ಕೆಚ್ ಮಾಡಿರುತ್ತಾರೆ ಸರ್ವೇ ಸ್ಕೆಚ್ ಪ್ರಕಾರ ನೀವು ಜಮೀನಿನ ಪರಿಶೀಲನೆ ಮಾಡುವುದು ಉತ್ತಮ.
ನೀವು ಪಿತ್ರಾರ್ಜಿತ ಆಸ್ತಿಯನ್ನು ಖರೀದಿಸುವುದಾದರೆ ಫ್ಯಾಮಿಲಿಟ್ರಿನ ಪರಿಶೀಲಿಸಬೇಕಾಗುತ್ತದೆ ಅದರಲ್ಲಿ ಯಾರಿಗೆ ಎಷ್ಟು ಜಮೀನಿದೆ ಯಾರಿಗೆ ಎಷ್ಟು ಹಕ್ಕು ಇದೆ ಎಂದು ಗೊತ್ತಾಗುತ್ತದೆ. ಕೆಲವು ಜಾಗವನ್ನು ಸರ್ಕಾರದವರು ಕೆಲವರಿಗೆ ಬರೆದುಕೊಟ್ಟಿರುತ್ತಾರೆ ಬಡವರಿಗೆ ಬರೆದುಕೊಟ್ಟಿರುತ್ತಾರೆ ಹಿಂದುಳಿದ ಜನಾಂಗದವರಿಗೆ ಕೊಟ್ಟಿರುತ್ತಾರೆ ಈ ರೀತಿ ಸರ್ಕಾರದವರು ಬರೆದುಕೊಟ್ಟಿರುವುದರ ಜೊತೆಗೆ ಕೆಲವು ನೀತಿ ನಿಯಮಗಳನ್ನು ಕೊಟ್ಟಿರುತ್ತಾರೆ ಆ ರೀತಿ ಜಾಗವನ್ನು ಮಾರಬೇಕಾಗುತ್ತದೆ.
ಮತ್ತೊಂದು ದಾಖಲೆ ಯಾವುದೆಂದರೆ ಎನ್ ಕಮ್ ಬ್ರಾನ್ಸ್ ಸರ್ಟಿಫಿಕೇಟ್. ಎನ್ ಕಮ್ ಬ್ರಾನ್ಸ್ ಸರ್ಟಿಫಿಕೇಟ್ನ್ನು ಮಾಮೂಲಿಯಾಗಿ ಮೂವತ್ತು ವರ್ಷ ಅಥವಾ ನಲವತ್ತು ವರ್ಷಕ್ಕೆ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಆಸ್ತಿ ಯಾರಿಂದ ಯಾರಿಗೆ ಹೋಗಿದೆ ಎಂಬುದರ ಸಂಪೂರ್ಣ ಮಾಹಿತಿ ಇರುತ್ತದೆ. ಇದಿಷ್ಟು ದಾಖಲೆಗಳಿದ್ದರೆ ನೀವು ಆಸ್ತಿಯನ್ನು ಖರಿಧಿಸಬಹುದು ಈ ಕಾಗದ ಪತ್ರಗಳು ಸರಿಯಾಗಿವೆ ಎಂಬುದನ್ನು ಪರಿಶೀಲಿಸಿ ನೀವು ಆಸ್ತಿಯನ್ನು ಕೊಂಡುಕೊಳ್ಳಬಹುದು. ಆಸ್ತಿ ಖರೀದಿಸುವ ವೇಳೆ ಆದಷ್ಟು ಜಾಗ್ರತೆ ವಹಿಸುವುದು ಉತ್ತಮ.