ಐಎಎಸ್ ಅಧಿಕಾರಿಗಳು ತಮ್ಮ ಜಿಲ್ಲೆ ರಾಜ್ಯದ ಒಳಿತಿಗಾಗಿ ಕೆಲಸ ಮಾಡಬೇಕಾಗುತ್ತದೆ, ಅದೇ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಣೆ ಮಾಡುತ್ತಿರುತ್ತಾರೆ. ಈಗಾಗಲೇ ದೇಶದಲ್ಲಿ ಕೊರೋನಾ ವೈರಸ್ ಅನ್ನೋ ಮಹಾಮಾರಿ ದಿನದಿಂದ ದಿನಕ್ಕೆ ಮರಣ ಮೃದಂಗ ಬಾರಿಸುತ್ತಿರುವ ಹಿನ್ನಲೆಯಲ್ಲಿ
ಅಧಿಕಾರಿಗಳು ಕರ್ತವ್ಯಕ್ಕೆ ಹಾಜರು ಆಗಲೇಬೇಕಿದೆ.
ದೇಶದಲ್ಲಿ ಲಾಕ್ ಡೌನ್ ಜಾರಿ ಆಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಒಳಿತಿಗಾಗಿ ಕೆಲಸ ಮಾಡಬೇಕಾಗಿದೆ ಆಗಾಗಿ ತಮ್ಮ ಒಂದು ತಿಂಗಳ ಹಸುಗೂಸನ್ನು ಕೈಲಿ ಹಿಡಿದು ತಕ್ಷಣವೇ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಈ ಐಎಎಸ್ ಅಧಿಕಾರಿ ಅಷ್ಟಕ್ಕೂ ಇವರು ಯಾರು ಎಲ್ಲಿ ಅನ್ನೋದನ್ನ ನೋಡುವುದಾದರೆ,
ಹೆಸರು ಸೃಜನ ಗುಮ್ಮಳ ಆಂಧ್ರಪ್ರದೇಶದ ಗ್ರೇಟರ್ ವಿಶಾಖ ಮುನ್ಸಿಪಲ್ ಕಮಿಷನರ್ ಐಪಿಎಸ್ ಆಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ, ಸೃಜನ ಗುಮ್ಮಳ ಅವರು, ಈ ಒಂದು ತಿಂಗಳ ಹಿಂದೆ ಅಷ್ಟೇ ಮಗುವಿಗೆ ಜನ್ಮ ನೀಡಿದ್ದರು, ಹೀಗಿರುವಾಗ ಸರ್ಕಾರ ಇವರಿಗೆ ಆರು ತಿಂಗಳಕಾಲ ಮಾತೃತ್ವ ರಜೆ ಪಡೆಯುವ ಅಧಿಕಾರ ಕೊಟ್ಟಿದೆ, ಆದ್ರೆ ಇವರು ಲಾಕ್ ಡೌನ್ ಇರುವ ಕಾರಣಕ್ಕೆ ಹಾಗೂ ಕೊರೋನಾದಿಂದ ಜನಸಾಮಾನ್ಯರ ಒಳಿತಿಗಾಗಿ ರಜೆಯನ್ನು ಲೆಕ್ಕಿಸದೆ ತಮ್ಮ ಶಾಖೆಯಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಅದೇನೇ ಇರಲಿ ಸರ್ಕಾರ ತಮಗೆ ಆರು ತಿಂಗಳ ಮಾತೃತ್ವ ರಜೆಯನ್ನು ನೀಡಿದರು ಸಹ ಜನ ಸಾಮಾನ್ಯರ ಒಳಿತಿಗಾಗಿ ರಜೆಯನ್ನು ಲೆಕ್ಕಿಸದೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಈ ಅಧಿಕಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.