ಕೆಲವೊಮ್ಮೆ ನಾವುಗಳು ಮನೆಗೆ ತರಕಾರಿ ಹಣ್ಣು ಗಳನ್ನ ತರೋವಾಗ ಸ್ವಲ್ಪ ಜಾಸ್ತಿನೇ ತಂಡ್ಬಿಡ್ತೀವಿ ಆದ್ರೆ ಮನೆಗೆ ಬಂದ್ಮೇಲೆ ಗೊತ್ತಾಗತ್ತೆ ತುಂಬಾ ಜಾಸ್ತಿ ತರಕಾರಿ ತಗೊಂಡ್ ಬಂದ್ವಿ ಅಂತ. ಆಮೇಲೆ ಅದನ್ನ ಹಾಳಾಗದಂತೆ ಸರಿಯಾಗಿ ಹೇಗಪ್ಪಾ ಇಟ್ಕೊಳ್ಳೋದು ಅಂತ ಚಿಂತೆ ಶುರು ಆಗತ್ತೆ. ಹಾಗೇ ಅದನ್ನ ಹೇಗೋ ಸರಿಯಾಗಿ ಇಟ್ಕೊಂಡು ಬೇಗ ಬೇಗ ಖಾಲಿ ಮಾಡ್ತೀವಿ. ಆದ್ರೆ ನಮಗೆ ಯಾವಾಗ್ಲೂ ಪ್ರಯೋಜನಕ್ಕೆ ಬರುವಂತಹ ಹಾಗೂ ಔಷಧೀಯ ಗುಣಗಳನ್ನು ಸಹ ಹೊಂದಿರುವ ನಿಂಬೆ ಹಣ್ಣು ಇದನ್ನ ಕೂಡ ನಾವು ಒಮ್ಮೆಗೇ ತಂದಿಟ್ಟುಕೊಂಡು ಅದನ್ನ ಹೇಗೆ ಬೇಗಾ ಹಾಳಾಗದಂತೆ ಸರಿಯಾಗಿ ಇಟ್ಕೊಳ್ಳೋದು ಅನ್ನೋದನ್ನ ತಿಳಿಸಿಕೊಡ್ತೀವಿ.
ಮೊದಲನೇ ವಿಧಾನದಲ್ಲಿ ಟಿಶ್ಯೂ ಪೇಪರ್ ಅಥವಾ ನ್ಯೂಸ್ ಪೇಪರ್ ತಗೊಂಡು ಅದನ್ನ ಚೌಕ ಆಕಾರದಲ್ಲಿ ಕಟ್ ಮಾಡಿಕೊಳ್ಳಿ. ಒಂದು ಪೇಪರ್ ನಲ್ಲಿ ಒಂದು ನಿಂಬೆ ಹಣ್ಣನ್ನು ಹಾಕಿ ಸುತ್ತಿ ಗಾಳಿ ಆಡದ ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು. ಹಾಗೇ ಬಾಕ್ಸ್ ಬದಲು ಪೇಪರ್ ನಲ್ಲಿ ಸುತ್ತಿ ಒಂದು ಕವರ್ ನಲ್ಲಿ ಕೂಡ ಗಾಳಿ ಎಲ್ಲವನ್ನೂ ತೆಗೆದು ಕವರ್ ನಲ್ಲಿ ಸರಿಯಾಗಿ ಸುತ್ತಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು.
ಎರಡನೆ ವಿಧಾನ ಅಂದ್ರೆ, ಕೈ ಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ನಿಂಬೆ ಹಣ್ಣುಗಳಿಗೆ ಎಣ್ಣೆ ಸವರಿ ಅದನ್ನ ಒಂದು ಗಾಳಿ ಆಡದ ಪ್ಲಾಸ್ಟಿಕ್ ಅಥವಾ ಗಾಜಿನ ಬಾಟಲಿಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು. ಹೀಗೆ ಮಾಡೋದರಿಂದ ನಿಂಬೆ ಹಣ್ಣು ಬೇಗ ಕೆಡುವುದಿಲ್ಲ ಹಾಗೂ ಯಾವುದೇ ಕಲೆಗಳು ಸಹ ಇರಲ್ಲ.
ಮೂರನೇ ವಿಧಾನ ನೋಡೋದಾದ್ರೆ, ಒಂದು ಗಾಳಿ ಆಡದ ಡಬ್ಬದಲ್ಲಿ ನಿಂಬೆ ಹಣ್ಣುಗಳನ್ನು ಹಾಕಿ ನಿಂಬೆ ಹಣ್ಣುಗಳು ಮುಳುಗುವವರೆಗು ನೀರನ್ನು ಹಾಕಿ ನಂತರ ಅರ್ಧ ಕಪ್ ಅಷ್ಟು ವಿನೆಗರ್ ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್ ನಲ್ಲಿಟ್ಟು ಬಳಸಬಹುದು. ಇನ್ನೂ ಇವುಗಳನ್ನ ಬಿಟ್ಟು ನಿಂಬೆ ಹನ್ನುಗಳನ್ನೆಲ್ಲ ಕಟ್ ಮಾಡಿಕೊಂಡು ಅದರ ರಸವನ್ನೆಲ್ಲ ತೆಗೆದು ಒಂದು ಗಾಜಿನ ಬಾಟಲಿಯಲ್ಲಿ ಹಾಕಿಟ್ಟು ಒಂದು ವರ್ಷ ಆದರೂ ಬಳಸಬಹುದು. ಇನ್ನೊಂದು ವಿಧಾನ ಅಂದ್ರೆ, ನಿಂಬೆ ರಸಗಳನ್ನು ಐಸ್ ಟ್ರೇ ಅಲ್ಲಿ ಹಾಕಿ ಐಸ್ ಮಾಡಿಕೊಂಡು ನಿಮಗೆ ಯಾವಾಗ್ ಬೇಕೋ ಆವಾಗ ಬಳಸಿಕೊಳ್ಳಬಹುದು. ಈ ಟಿಪ್ಸ್ ಗಳನ್ನಾ ಬಳಸಿಕೊಂಡು ನಿಂಬೆ ಹಣ್ಣುಗಳು ತಿಂಗಳು ಆದರೂ ಹಾಳಾಗದಂತೆ ಸರಿಯಾಗಿ ಇಟ್ಟಕೊಂಡು ಬಳಸಬಹುದು.