ಕನ್ನಡದ ನಂಬರ್ ಒನ್ ನ್ಯೂಸ್ ಚಾನೆಲ್ ಪಬ್ಲಿಕ್ ಟಿವಿಯ ಸೂತ್ರಧಾರ ಎಚ್. ಆರ್ ರಂಗನಾಥ್ ಅಲಿಯಾಸ್ ರಂಗಣ್ಣ ಅವರನ್ನು ಜ್ಯೂನಿಯರ್ ಅರ್ನಾಬ್ ಗೋಸ್ವಾಮಿ ಎನ್ನುವರು.ರಂಗಣ್ಣ ಅವರು ಪಬ್ಲಿಕ್ ನ್ಯೂಸ್ ಚಾನೆಲ್ ಅನ್ನು ಹೇಗೆ ಪ್ರಾರಂಭಿಸಿದರು ಅವರು ಪಟ್ಟ ಶ್ರಮ ಹಾಗೂ ಅವರು ಹೊಂದಿರುವ ಆಸ್ತಿಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಪಬ್ಲಿಕ್ ಟಿವಿಯ ಸಂಸ್ಥಾಪಕರಾದ ನಮ್ಮೆಲ್ಲರ ಪ್ರೀತಿಯ ರಂಗಣ್ಣ ಅವರು ಮೂಲತಃ ಮೈಸೂರಿನವರು. ಇವರು ಮೈಸೂರಿನಲ್ಲಿ ಮೇ 10, 1957 ರಲ್ಲಿ ಜನಿಸಿದರು. ಇವರ ತಂದೆಯ ಹೆಸರು ರಾಮಕೃಷ್ಣಯ್ಯ, ತಾಯಿ ಲೀಲಾ ರಾಮಕೃಷ್ಣಯ್ಯ. ಇವರ ಪತ್ನಿಯ ಹೆಸರು ಶಾರದಾ, ಇವರಿಗೆ ಒಬ್ಬಳು ಮಗಳಿದ್ದಾಳೆ ಅವಳ ಹೆಸರು ವೈಷ್ಣವಿ. ರಂಗನಾಥ್ ಅವರ ಪತ್ನಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು ಇದು ಬಿಟ್ಟು ಬೇರೆಲ್ಲೂ ಕಾಣಿಸಿಕೊಂಡಿಲ್ಲ. ರಂಗನಾಥ್ ಅವರು ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿಗಾರರಾಗಿ ಸೇರಿಕೊಂಡು ಅನುಭವವನ್ನು ಪಡೆಯುತ್ತಾರೆ. ನಂತರ ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು, ಅಲ್ಲಿ ಕೆಲಸದ ಒತ್ತಡ ಹಾಗೂ ಆತ್ಮಸಾಕ್ಷಿಯ ವಿರುದ್ಧ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಾಗ ರಂಗನಾಥ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು.
ನಂತರ ತಮ್ಮದೇ ಆದ ಒಂದು ನ್ಯೂಸ್ ಚಾನೆಲ್ ಅನ್ನು ಪ್ರಾರಂಭಿಸಬೇಕು ಎಂದು ನಿರ್ಧಾರ ಮಾಡಿದರು. ಇವರ ನೇರ ನುಡಿ ಮತ್ತು ಮಾತಿನ ಶೈಲಿಯಿಂದ ಅಭಿಮಾನಿ ಬಳಗವೇನೂ ಕಡಿಮೆ ಇಲ್ಲ. ಇವರನ್ನು ಕನ್ನಡದ ಅರ್ನಾಬ್ ಗೋಸ್ವಾಮಿ ಎಂದೆ ಕರೆಯಲಾಗುತ್ತದೆ. ಪಬ್ಲಿಕ್ ಟಿವಿಯನ್ನು ಹುಟ್ಟುಹಾಕಿದ ರಂಗನಾಥ್ ಅವರು ಬಡಕುಟುಂಬದಿಂದ ಬಂದು ತಮ್ಮ ಸ್ವಂತ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲಿರುವಾಗಲೇ ಸ್ವಾಭಿಮಾನಿಯಾಗಿದ್ದರು ತಮ್ಮ ಶಾಲಾದಿನಗಳಲ್ಲಿ ತಮ್ಮದೇ ಆದ ಆರ್ಕೆಸ್ಟ್ರಾವನ್ನು ಪ್ರಾರಂಭಿಸಿದರು. ಇವರು ಜನವರಿ 26, 2012ರಲ್ಲಿ ಪಬ್ಲಿಕ್ ಟಿವಿಯನ್ನು ಆರಂಭಿಸಿದರು, ಜನರ ಸೇವೆಗಾಗಿ ಪ್ರಾರಂಭವಾದ ನ್ಯೂಸ್ ಚಾನೆಲ್ ಆಗಿರುವುದರಿಂದ ಅದಕ್ಕೆ ಪಬ್ಲಿಕ್ ಟಿವಿ ಎಂದು ಹೆಸರಿಡುತ್ತಾರೆ. ಅವರು ತಮ್ಮದೇ ಆದ ನ್ಯೂಸ್ ಚಾನೆಲ್ ಅನ್ನು ಆರಂಭಿಸಲು ಬಹಳ ಕಷ್ಟಪಟ್ಟಿದ್ದಾರೆ. ಅವರು ನ್ಯೂಸ್ ಚಾನೆಲ್ ಆರಂಭಿಸುವಾಗ ಅವರ ಬಳಿ ಹಣವಿರಲಿಲ್ಲ ಕೇವಲ ಆರರಿಂದ ಏಳು ಕೋಟಿ ಹಣದಲ್ಲಿ ನ್ಯೂಸ್ ಚಾನೆಲ್ ಅನ್ನು ಆರಂಭಿಸಿದ್ದಾರೆ. ಮೊದಲು ಅವರು ಈಗಷ್ಟೇ ಕಾಲೇಜು ಮುಗಿಸಿದ ಪದವೀಧರರಿಗೆ ತಮ್ಮ ನ್ಯೂಸ್ ಚಾನೆಲ್ ನಲ್ಲಿ ಅವಕಾಶ ಕೊಟ್ಟರು. ಪಬ್ಲಿಕ್ ಟಿವಿಯನ್ನು ಆರಂಭಿಸಿದ ಎರಡು ವರ್ಷ ಜನರು ಮೆಚ್ಚಿಕೊಳ್ಳಲಿಲ್ಲ, ನಂತರ 2014ರಿಂದ ಪಬ್ಲಿಕ್ ಟಿವಿ ಜನರ ಮೆಚ್ಚುಗೆಯನ್ನು ಗಳಿಸಿತು. ಎಚ್. ಆರ್ ರಂಗನಾಥ್ ಅವರು ಮನೋಹರನ್ ಗೋವಿಂದಸ್ವಾಮಿ, ತಿರುಪತಿ ನರಸಿಂಹಲು ನಾಯ್ಡು ಹಾಗೂ ವೆಂಕಟೇಶ್ವರ ಅವರ ಸಹಭಾಗಿತ್ವವನ್ನು ಹೊಂದಿದ್ದಾರೆ.
ಸರಳತೆಗೆ ಹೆಸರಾದ ರಂಗಣ್ಣ ಅವರಿಗೆ 2016ರಲ್ಲಿ ಜೀ ಕನ್ನಡ ವಾಹಿನಿ ದಶಕದ ಜರ್ನಲಿಸ್ಟ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಎಚ್. ಆರ್ ರಂಗನಾಥ್ ಅವರು 50ರಿಂದ 100 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ರಂಗನಾಥ್ ಅವರು ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿ ಕಾಣುತ್ತಾರೆ ಹಾಗೂ ತಮ್ಮ ಆಸ್ತಿಯನ್ನು ಬಹಿರಂಗವಾಗಿ ಪ್ರಕಟಿಸಿದ ಮೊದಲ ಸಂಪಾದಕರಾಗಿದ್ದಾರೆ. ಪಬ್ಲಿಕ್ ಹೀರೋ, ಮನೆಯೇ ಮಂತ್ರಾಲಯ ಕಾರ್ಯಕ್ರಮಗಳನ್ನು ಪರಿಚಯಿಸಿ ಎಲೆಮರೆಯ ಹಿಂದಿರುವ ಸಾಧಕರನ್ನು ಜನರಿಗೆ ಪರಿಚಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪಬ್ಲಿಕ್ ಟಿವಿಯ ರಂಗನಾಥ್ ಅವರ ಜೀವನ ಮಾದರಿಯಾಗಿದೆ. ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಡಲಿ ಎಂದು ಆಶಿಸೋಣ.