ಬಹಳಷ್ಟು ಜನರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅತಿಯಾದ ತೂಕದಿಂದ ಬೊಜ್ಜು ಕಾಣಿಸುತ್ತದೆ. ಇದರಿಂದ ಕಿರಿ ಕಿರಿಯನ್ನು ಅನುಭವಿಸಬೇಕಾಗುತ್ತದೆ ಅಲ್ಲದೆ ಬೇರೆ ಬೇರೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಬೊಜ್ಜಿಗೆ ಕಾರಣವೇನು ಹಾಗೂ ಅದಕ್ಕೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.
ತೂಕಕ್ಕೆ ಕಾರಣವೇನು ಎಂಬುದರ ಬಗ್ಗೆ ಕೆಲವರು ಜಾಸ್ತಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎನ್ನುತ್ತಾರೆ, ಇನ್ನು ಕೆಲವರು ಜಂಕ್ ಫುಡ್ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎನ್ನುತ್ತಾರೆ ಮತ್ತೆ ಕೆಲವರು ವ್ಯಾಯಾಮ ಇಲ್ಲದೆ ಇರುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆಯುರ್ವೇದ ಗ್ರಂಥಗಳ ಪ್ರಕಾರ ದುಃಖಕ್ಕೆ ಕಾರಣ ಅಗ್ನಿಮಾಂದ್ಯ. ನಾವು ತಿಂದ ಆಹಾರ ಜೀರ್ಣವಾಗುವುದು ನಂತರ ಎರಡು ಭಾಗವಾಗುತ್ತದೆ ಸಾರ ಭಾಗ ಮತ್ತು ಕಿಟ್ಟ ಭಾಗ ಸಾರ ಭಾಗ ರಕ್ತಕ್ಕೆ ಸೇರಿ ದೇಹಕ್ಕೆ ಶಕ್ತಿ ಕೊಡುತ್ತದೆ. ಕಿಟ್ಟ ಭಾಗ ಮಲದ ರೂಪದಲ್ಲಿ ದೇಹದಿಂದ ಹೊರಹೋಗುತ್ತದೆ. ನಮ್ಮ ದೇಹದಲ್ಲಿ ನ್ಯೂನ್ಯತೆ ಉಂಟಾಗಿ ಅಗ್ನಿ ಮಾಂದ್ಯ ಆಗಿ ಜಠರಾಗ್ನಿಯ ಕೊರತೆಯಾಗಿ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದಾಗ ಸಾರ ಭಾಗ ಮತ್ತು ಕಿಟ್ಟ ಭಾಗ ಸರಿಯಾಗಿ ಪಾರ್ಮೇಷನ್ ಆಗದೆ ಸಾರ ಭಾಗವು ಅಲ್ಲದ ಕಿಟ್ಟ ಭಾಗವು ಅಲ್ಲದ ಅಂಶ ಉತ್ಪಾದನೆಯಾಗುತ್ತದೆ ಅದನ್ನು ಆಮ ಎನ್ನುತ್ತೇವೆ.
ಈ ಆಮವು ಸಾರ ಭಾಗಕ್ಕೂ ಸೇರದೆ, ಕಿಟ್ಟ ಭಾಗಕ್ಕೂ ಸೇರದೆ ದೇಹದಲ್ಲಿ ಹಾಗೆಯೆ ಸ್ಟೋರ್ ಆಗುತ್ತಾ ಹೋಗುತ್ತದೆ. ಮೊದಲು ಲಿವರ್ ನಲ್ಲಿ ಸ್ಟೋರ್ ಆಗುತ್ತದೆ ನಂತರ ಉಳಿದ ಭಾಗಗಳಲ್ಲಿ ಸ್ಟೋರ್ ಆಗುತ್ತಾ ಹೋಗುತ್ತದೆ ಇದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತಾ ಹೋಗುತ್ತದೆ. ಇದಕ್ಕೆ ಪರಿಹಾರವೆಂದರೆ ಊಟದ ಮೊದಲು ಸಣ್ಣದಾಗಿ ಕಟ್ ಮಾಡಿದ ಹಸಿಶುಂಠಿಯ ಮೇಲೆ ಕಲ್ಲುಪ್ಪು ಅಥವಾ ಸೈಂಧವ ಲವಣ ಹಾಕಿ ನಾಲಿಗೆ ಮೇಲಿಟ್ಟುಕೊಂಡು ಚಪ್ಪರಿಸಿ ತಿನ್ನಬೇಕು ಆಗ ಸೇವಿಸಿದ ಆಹಾರ ಜೀರ್ಣವಾಗುತ್ತದೆ. ಸೈಂಧವ ಲವಣ ಆಯುರ್ವೇದ ಶಾಪ್ ಗಳಲ್ಲಿ ಸಿಗುತ್ತದೆ. ಉಪವಾಸ ಇರುವುದರಿಂದ ಬೊಜ್ಜು ಕರಗುವುದಿಲ್ಲ. ಹೀಗೆ ಮಾಡುವುದರಿಂದ ತೂಕ ಕಡಿಮೆಯಾಗದೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಕೆಲವೊಮ್ಮೆ ಥೈರಾಯ್ಡ್ ಸಮಸ್ಯೆ, ಮಲಬದ್ಧತೆ, ಲಿವರ್, ಹಾರ್ಟ್ ಸಮಸ್ಯೆ ಮತ್ತು ಮುಟ್ಟಿನ ಸಮಸ್ಯೆಯಿಂದ ತೂಕ ಹೆಚ್ಚಾಗುತ್ತದೆ ಇದನ್ನು ವೈದ್ಯರನ್ನು ಸಂಪರ್ಕಿಸಿದಾಗ ತಿಳಿಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಬೊಜ್ಜಿನಿಂದ ಮುಕ್ತಿ ಪಡೆಯಿರಿ.