ಪಾರ್ಕಿಂಗ್ ಸ್ಥಳದಲ್ಲಿ ಅಥವಾ ಮನೆಯ ಮುಂದೆ ಅಂಗಳಕ್ಕೆ ಹಾಕಿರುವ ಟೈಲ್ಸ್ ಕೆಲವೊಮ್ಮೆ ಬಹಳ ಕೊಳೆ ಆಗುತ್ತದೆ. ಟೈಲ್ಸ್ ಅನ್ನು ಕ್ಲೀನ್ ಮಾಡುವುದು ಕಷ್ಟ ಆದರೆ ಅಂತಹ ಟೈಲ್ಸ್ ಗಳನ್ನು ಸುಲಭವಾಗಿ ಕೆಲವು ಸಾಮಗ್ರಿಗಳನ್ನು ಬಳಸಿ ಸ್ವಚ್ಛ ಮಾಡಬಹುದು. ಯಾವ ಸಾಮಗ್ರಿಗಳು ಬೇಕು ಹಾಗೂ ಅವುಗಳನ್ನು ಬಳಸಿ ಹೇಗೆ ಸ್ವಚ್ಚ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಮನೆಯ ಹತ್ತಿರ ಅಥವಾ ಅಂಗಳಕ್ಕೆ ಒಂದು ರೀತಿಯ ಟೈಲ್ಸ್ ಹಾಕಿರುತ್ತಾರೆ ನೋಡಲು ಲೈಟ್ ರೆಡ್ ಬಣ್ಣದಲ್ಲಿ ಇರುತ್ತದೆ. ಅದು ಕೊಳೆಯಾದಾಗ ಕ್ಲೀನ್ ಮಾಡುವುದು ಅಷ್ಟು ಸುಲಭವಲ್ಲ, ಆದರೆ ಕೆಲವೊಂದು ಸಾಮಗ್ರಿಗಳನ್ನು ಬಳಸಿ ಸುಲಭವಾಗಿ ಕ್ಲೀನ್ ಮಾಡಬಹುದು. ಕ್ಲೀನ್ ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವೆಂದರೆ. ರೋಪ್ ನ ಸೆರಾ ಕ್ಲೀನ್, ವಿನೆಗರ್, ನೀರು, ಬ್ರಷ್. ಮೊದಲು ಒಂದು ಲೀಟರ್ ರೋಫ್ ನ ಸೆರಾ ಕ್ಲೀನ್ ಬೇಕು ಇದಕ್ಕೆ ನೂರ ಅರವತ್ತು ರೂಪಾಯಿ ಇರುತ್ತದೆ. ಇದರ ಜೊತೆಗೆ 180 ಗ್ರಾಂನ ಒಂದು ಬಾಟಲ್ ವಿನೆಗರ್ ಅದರಲ್ಲೂ ಚಿಲ್ಲಿ ವಿನೆಗರ್ ಆದರೆ ಉತ್ತಮ ಇದರಿಂದ ಟೈಲ್ಸ್ ಉಜ್ಜಲು ಹೆಚ್ಚು ಶ್ರಮ ಪಡಬೇಕಾಗಿರುವುದಿಲ್ಲ, ಉಜ್ಜಲು ಒಂದು ಬ್ರಷ್ ಮತ್ತು ಒಂದು ಬಕೆಟ್ ನೀರು ಬೇಕಾಗುತ್ತದೆ. 10 ಲೀಟರ್ ನೀರು ಹಿಡಿಯುವ ಬಕೆಟ್ ನೀರಿಗೆ ವಿನೆಗರ್ ಹಾಕಿ ಮಿಕ್ಸ್ ಮಾಡಬೇಕು. ನಂತರ ಅದನ್ನು ಟೈಲ್ಸ್ ಮೇಲೆ ಹಾಕಿ 5 ನಿಮಿಷ ಹಾಗೆಯೇ ಬಿಡಬೇಕು. ನಂತರ ಬ್ರಷ್ ನಿಂದ ಉಜ್ಜಬೇಕು. ನಂತರ ರೋಫ್ ನ ಸೆರಾ ಕ್ಲೀನ್ ಬಾಟಲ್ ಗೆ ಒಂದು ಕಪ್ ಬರುತ್ತದೆ, ಹತ್ತು ಲೀಟರ್ ನೀರಿಗೆ 12 ಎಮ್ಎಲ್ ಸೆರಾ ಕ್ಲೀನ್ ಅನ್ನು ಸೇರಿಸಿ ಮಿಕ್ಸ್ ಮಾಡಿ ಈಗಾಗಲೆ ಉಜ್ಜಿದ ಟೈಲ್ಸ್ ಮೇಲೆ ಹಾಕಿ ಮತ್ತೆ ಬ್ರಷ್ ನಿಂದ ನಾಲ್ಕು ಬಾರಿ ಉಜ್ಜಬೇಕು ಆಗ ಸಿಮೆಂಟ್ ಕಲೆಗಳು ಸಹ ಹೋಗುತ್ತದೆ.
ನಂತರ 2 ನಿಮಿಷ ಬಿಟ್ಟು ಸ್ವಚ್ಚ ನೀರನ್ನು ಹಾಕಿದಾಗ ಟೈಲ್ಸ್ ಸ್ವಚ್ಚವಾಗಿ ಕಾಣುತ್ತದೆ. ನಂತರ ಬಟ್ಟೆಯಿಂದ ಕ್ಲೀನಾಗಿ ವರೆಸಬೇಕು, ಆಗ ನಿಜಕ್ಕೂ ನೀಟಾಗಿ, ಸುಂದರವಾಗಿ ಕಾಣುತ್ತದೆ. ಹೀಗೆ ಯಾವಾಗ ಬೇಕಾದರೂ ಮಾಡಬಹುದು. ಅಂಗಳದಲ್ಲಿ ಅಥವಾ ಕಾರು ಪಾರ್ಕ್ ಮಾಡುವ ಜಾಗಕ್ಕೆ ಹಾಕಿರುವ ಟೈಲ್ಸ್ ಕೊಳೆ ಆಗುತ್ತದೆ, ಯಾರಾದರೂ ಮನೆಗೆ ಬಂದರೆ ನಮಗೆ ಮುಜುಗರ ಆಗುತ್ತದೆ ಅಲ್ಲದೆ ಅದನ್ನು ಎಷ್ಟು ಉಜ್ಜಿದರೂ ಕ್ಲೀನ್ ಆಗುವುದಿಲ್ಲ. ಹೀಗೆ ಮಾಡುವುದರಿಂದ ಹೆಚ್ಚು ಶ್ರಮವಹಿಸಿ ಉಜ್ಜುವುದು ಬೇಕಾಗಿಲ್ಲ. ವಿನೆಗರ್ ಹಾಗೂ ಸೆರಾ ಕ್ಲೀನ್ ಗಳನ್ನು ಆನ್ಲೈನ್ ಶಾಪಿಂಗ್ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ಮನೆಯ ಅಂಗಳವನ್ನು ಹಾಗೂ ಪಾರ್ಕಿಂಗ್ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ.