ಸ್ಯಾಂಡಲ್ ವುಡ್ ನಟ, ನಟಿಯರು 2020-2021 ನೇ ಇಸ್ವಿಯಲ್ಲಿ ಕೋವಿಡ್ ಬಂದಿರುವ ಕಾರಣ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಯಾರು, ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಹಾಗಾದರೆ ಕನ್ನಡ ಚಿತ್ರರಂಗದ ಯಾವ ನಟ, ನಟಿಯರು ಏನೆಲ್ಲಾ ಸಹಾಯ ಮಾಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಕಳೆದ ವರ್ಷದಿಂದ ಕೊರೋನ ವೈರಸ್ ದೇಶದಾದ್ಯಂತ ಹರಡುತ್ತಿದ್ದು, ಅನೇಕ ಸಾವು, ನೋವು ಸಂಭವಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವು ಸೆಲೆಬ್ರಿಟಿಗಳು, ಡಾಕ್ಟರ್ಸ್, ಜನಸಾಮಾನ್ಯರು ಕೂಡ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಬಹಳಷ್ಟು ನಟ, ನಟಿಯರು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ತಮ್ಮ ಬಂಗಾರಪ್ಪ ಟ್ರಸ್ಟ್ ವತಿಯಿಂದ ಪ್ರತಿದಿನ ನಾಲ್ಕು ನೂರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಅವರು ತಮ್ಮ ಜಮೀನನ್ನು ಮಾರಿ 20ಲಕ್ಷ ರೂಪಾಯಿಯನ್ನು ಕೋವಿಡ್ ಫಂಡ್ ಗೆ ದಾನವಾಗಿ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಪ್ಪತ್ತೈದು ಲಕ್ಷ ರೂಪಾಯಿ ಹಣವನ್ನು ಕೋವಿಡ್ ಫಂಡ್ ಗೆ ಮತ್ತು ಬಡವರಿಗೆ ದಾನ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಲ್ಲಿಯವರೆಗೆ 4 ಟನ್ ಆಕ್ಸಿಜನ್ ಪೂರೈಸಿದ್ದಾರೆ ಅಲ್ಲದೆ 50 ಲಕ್ಷ ರೂಪಾಯಿ ಹಣವನ್ನು ಬಡವರ ಕೋವಿಡ್ ಚಿಕಿತ್ಸೆಗೆ ದಾನ ನೀಡಿದ್ದಾರೆ.
ಉಪೇಂದ್ರ ಅವರು ಪ್ರತಿದಿನ ಕಲಾವಿದರಿಗೆ ಮತ್ತು ಜನಸಾಮಾನ್ಯರಿಗೆ ಮೂರು ಸಾವಿರಕ್ಕೂ ಹೆಚ್ಚು ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ, ಜನರಿಂದ ಹಣ ಸಂಗ್ರಹಿಸಿ ದಾನವಾಗಿ ನೀಡಿದ್ದಾರೆ. ಭುವನ್ ಮತ್ತು ಹರ್ಷಿಕಾ ಪೂಣಚ್ಚ ಅವರು ಭುವನಂ ಟ್ರಸ್ಟ್ ಮೂಲಕ ಪ್ರತಿದಿನ ಮುನ್ನೂರಕ್ಕಿಂತ ಹೆಚ್ಚು ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಸಾಧುಕೋಕಿಲ ಅವರು ಪ್ರತಿದಿನ ಸಂಗೀತ ಕಲಾವಿದರಿಗೆ ನೂರಕ್ಕೂ ಹೆಚ್ಚು ಫುಡ್ ಕಿಟ್ ವಿತರಣೆ ಮಾಡಿದ್ದಾರೆ ಮತ್ತು ಬಡಜನರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಕಳೆದ ವರ್ಷ ರಶ್ಮಿಕಾ ಮಂದಣ್ಣ ಅವರು ಎರಡು ಲಕ್ಷ ರೂಪಾಯಿಗಳನ್ನು ಕೋವಿಡ್ ಫಂಡ್ ಗೆ ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಮೂರು ಲಕ್ಷ ರೂಪಾಯಿ ಹಣವನ್ನು ಕೋವಿಡ್ ಫಂಡ್ ಗೆ ಕೊಟ್ಟಿದ್ದಾರೆ ಮತ್ತು ಉಪೇಂದ್ರ ಟ್ರಸ್ಟ್ ಗೆ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಕಲಾವಿದರು ಮತ್ತು ಜನ ಸಾಮಾನ್ಯರಿಗೆ ಪ್ರತಿದಿನ ಐನೂರಕ್ಕಿಂತ ಹೆಚ್ಚು ಫುಡ್ ಕಿಟ್ ಗಳನ್ನು ವಿತರಿಸಿದ್ದಾರೆ ಅಲ್ಲದೆ ಇಪ್ಪತ್ತೈದು ಲಕ್ಷ ರೂಪಾಯಿ ಹಣವನ್ನು ಕೋವಿಡ್ ಫಂಡ್ ಗೆ ಕೊಟ್ಟಿದ್ದಾರೆ. ಸುಮಲತಾ ಅಂಬರೀಷ್ ಅವರು 20 ಟನ್ ಆಕ್ಸಿಜನ್ ಪೂರೈಸಿದ್ದಾರೆ ಅಲ್ಲದೆ ಪ್ರತಿದಿನ ನೂರಕ್ಕೂ ಹೆಚ್ಚು ಜನರಿಗೆ ಊಟ ವಿತರಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು 35 ಲಕ್ಷ ರೂಪಾಯಿ ಹಣವನ್ನು ಕೋವಿಡ್ ಫಂಡ್ ಗೆ ಕೊಟ್ಟಿದ್ದಾರೆ ಅಲ್ಲದೆ ತಮ್ಮ ಯಶೋ ಮಾರ್ಗ ಟ್ರಸ್ಟ್ ಮೂಲಕ ಬಡವರಿಗೆ ಊಟ ಮತ್ತು ಫುಡ್ ಕಿಟ್ ವಿತರಣೆ ಮಾಡಿದ್ದಾರೆ.
ಮೇಘನಾ ರಾಜ್ ಅವರು ಎರಡು ಲಕ್ಷ ರೂಪಾಯಿ ಹಣವನ್ನು ಕೋವಿಡ್ ಫಂಡ್ ಗೆ ಕೊಟ್ಟಿದ್ದಾರೆ ಅಲ್ಲದೆ ಸರ್ಜಾ ಟ್ರಸ್ಟ್ ಗೆ ನೆರವು ನೀಡಿದ್ದಾರೆ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ಕಳೆದ ವರ್ಷ ಕೋವಿಡ್ ಫಂಡ್ ಗೆ ದಾನ ಮಾಡಿದ್ದಾರೆ ಮತ್ತು ವಿವಿಧ ರೀತಿಯಲ್ಲಿ ಹಣ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾ ಅವರು ಬಡವರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ ಮತ್ತು 2.50 ಲಕ್ಷ ರೂಪಾಯಿ ಹಣವನ್ನು ಕೋವಿಡ್ ಫಂಡ್ ಗೆ ದಾನ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟ ನಟಿಯರು ತಮ್ಮಿಂದ ಆದ ಸಹಾಯ ಮಾಡಿದ್ದಾರೆ. ತಮ್ಮ ತಮ್ಮಲ್ಲೇ ಜಗಳವಾಡಿ ನೆಮ್ಮದಿ ಹಾಳುಮಾಡುವ ರಾಜಕೀಯ ವ್ಯಕ್ತಿಗಳಿಗಿಂತ ಚಿತ್ರರಂಗದ ಸೆಲೆಬ್ರಿಟಿಗಳು ಮೇಲು ಎಂದು ಹೇಳಿದರೆ ತಪ್ಪಾಗಲಾರದು.