ಮಾನವರಲ್ಲಿ ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ. ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದರೆ ವಿರಳವಾಗಿ ಮಾರಕವಾಗಬಹುದು. ಕೊರೋನಾ ರೋಗವು ದೇಶದಲ್ಲಿ ವ್ಯಾಪಕವಾಗಿ ಹರಡಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಸಾವು, ನೋವುಗಳು ಸಂಭವಿಸುತ್ತಿದೆ. ಕೊರೋನ ರೋಗಕ್ಕೆ ಸರಿಯಾದ ರೀತಿಯ ಯಾವುದೇ ಔಷಧವನ್ನು ಕಂಡುಹಿಡಿದಿಲ್ಲ. ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರು ಕೋರೋಣ ಕಾಯಿಲೆ ನಿವಾರಣೆಗೆ ಸಲಹೆಯನ್ನು ನೀಡಿದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕೊರೋನಾ ವೈರಸ್ಗಳು ಮಾನವನ ವಯಸ್ಕರು ಮತ್ತು ಮಕ್ಕಳಲ್ಲಿ ಸಾಮಾನ್ಯ ನೆಗಡಿಗಳಲ್ಲಿ ಗಮನಾರ್ಹ ಶೇಕಡಾವಾರು ಪ್ರಮಾಣವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಕೊರೋನಾ ವೈರಸ್ಗಳು ಪ್ರಮುಖ ರೋಗಲಕ್ಷಣಗಳೊಂದಿಗೆ ಶೀತವನ್ನು ಉಂಟುಮಾಡುತ್ತವೆ. ಮಾನವರಲ್ಲಿ ಮುಖ್ಯವಾಗಿ ಚಳಿಗಾಲ ಮತ್ತು ವಸಂತಕಾಲದ ಋತುಗಳಲ್ಲಿ ಕೊರೋನಾ ವೈರಸ್ಗಳು ನ್ಯುಮೋನಿಯಾವನ್ನು ಉಂಟುಮಾಡಬಹುದು. ಕೊರೋನಾ ರೋಗಕ್ಕೆ ಸರಿಯಾದ ಸಮಯದಲ್ಲಿ ಮುನ್ನೆಚ್ಚರಿಕೆಯ ಕೆಲವೊಂದು ಔಷಧವನ್ನು ಮಾಡುವುದರಿಂದ ಪ್ರಾರಂಭದಲ್ಲಿಯೇ ಗುಣಮುಖರಾಗಬಹುದು.
ಅನೇಕ ಜನರ ಸಾವಿಗೆ ಕಾರಣ ಮುಖ್ಯವಾಗಿ ತಡವಾಗಿ ವೈದ್ಯರ ಸಲಹೆಯನ್ನು ಪಡೆಯಲು ಹೋಗುವುದು. ತಡವಾಗಿ ಔಷಧವನ್ನು ತೆಗೆದುಕೊಳ್ಳುವುದು. ರೋಹಿಣಿ ಸಿಂಧೂರಿ ಅವರು ಹೇಳುವ ಪ್ರಕಾರ ಕೊರೋನಾ ಬಂದ ಮೊದಲ ಐದು ದಿನ ಸರಿಯಾದ ಔಷಧವನ್ನು ಮಾಡಬೇಕು. ಹೀಗೆ ಮಾಡಿದರೆ ಹೋಂ ಐಸೋಲೇಶನ್ ನಿಂದಲೇ ಕೊರೊನಾದಿಂದ ಗುಣಮುಖರಾಗಬಹುದು. ಪ್ರತಿಯೊಬ್ಬರೂ ಯಾವುದೇ ಒಂದು ಕೊರೋನ ರೋಗದ ಲಕ್ಷಣವಿದ್ದರೂ ಸಹ ಅದಕ್ಕೆ ಪೂರಕವಾಗಿ ಮೊದಲ ಐದು ದಿನ ಅದಕ್ಕೆ ಸರಿಯಾದ ಔಷಧವನ್ನು ಮಾಡಿಕೊಳ್ಳುವುದು ಉತ್ತಮ ಎಂದು ರೋಹಿಣಿ ಸಿಂಧೂರಿ ಅವರು ಹೇಳುತ್ತಾರೆ.
ಜೊತೆಗೆ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಕರೋನ ರೋಗವನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ವ್ಯಾಕ್ಸಿನೇಷನ್ ಅನ್ನು ಮಾಡಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಪಂಚಸೂತ್ರ ಹೆಸರಿನಲ್ಲಿ ಕೊರೋನಕ್ಕೆ ಸಂಬಂಧಪಟ್ಟ ಔಷಧಗಳನ್ನು ಪ್ರತಿ ಮನೆಮನೆಗೆ ಹಂಚಿ ಅದರ ಬಳಕೆಯ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿದ್ದಾರೆ. ರೋಹಿಣಿ ಸಿಂಧೂರಿ ಅವರು ಹೇಳುವ ಪ್ರಕಾರ ಅವರ ಜಿಲ್ಲೆಯಲ್ಲಿ ಕೆಲವು ಸಾವುಗಳಿಗೆ ಸ್ಟಿರೈಡ್ ಬಳಕೆಯು ಜೊತೆಗೆ ಲೇಟಾಗಿ ಔಷಧವನ್ನು ಪಡೆಯುತ್ತಿರುವುದರಿಂದ ಎಂದು ಅವರು ಹೇಳುತ್ತಾರೆ.