ನೀರು ದಿನನಿತ್ಯದ ನಮ್ಮ ಅತೀ ಅವಶ್ಯಕತೆಗಳಲ್ಲಿ ಒಂದು. ಆಹಾರವಿಲ್ಲದೇ ನಾವು ದಿನವನ್ನು ಕಳೆಯಬಹುದು. ಆದರೆ ನೀರು ಇಲ್ಲವಾದಲ್ಲಿ ದಿನ ಕಳೆಯುವುದು ಬಹಳ ಕಷ್ಟ. ಹಾಗೆಯೇ ಕೆಲವರಿಗೆ ಆಹಾರ ಪದಾರ್ಥಗಳು ಗಂಟಲಿನಲ್ಲಿ ಇಳಿಯಬೇಕು ಎಂದಾದರೆ ನೀರು ಬೇಕೇ ಬೇಕು. ನೀರನ್ನು ದಿನನಿತ್ಯ ಒಂದು ಪ್ರಮಾಣದಲ್ಲಿ ಕುಡಿಯಬೇಕು. ಹಾಗೆಯೇ ಅತಿಯಾಗಿ ಸಹ ನೀರನ್ನು ಕುಡಿಯಬಾರದು. ಆದ್ದರಿಂದ ನಾವು ಇಲ್ಲಿ ನೀರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನೀರನ್ನು ಹೆಚ್ಚಾಗಿ ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಅವರವರ ತೂಕದ ಮಟ್ಟಿಗೆ ನೀರನ್ನು ಕುಡಿಯಬೇಕು. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಎರಡರಿಂದ ಮೂರು ಲೀಟರ್ ನಷ್ಟು ನೀರನ್ನು ಕುಡಿಯಬೇಕು ಎಂದು ವಿಜ್ಞಾನ ಹೇಳುತ್ತದೆ. ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ದೇಹದಲ್ಲಿ ಇರುವ ಕಶ್ಮಲಗಳು ಮೂತ್ರದ ಮೂಲಕ ಹೊರ ಹೋಗುತ್ತವೆ. ಹಾಗೆಯೇ ನೀರು ದೇಹದ ತೂಕವನ್ನು ಸಮತೋಲನದಲ್ಲಿ ಇಡುತ್ತದೆ. ಅಂದರೆ ಅತಿಯಾದ ತೂಕವನ್ನು ಹೊಂದಿದವರು ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ.
ಹಾಗೆಯೇ ಅತೀ ಕಡಿಮೆ ತೂಕ ಹೊಂದಿದವರು ನೀರನ್ನು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ. ದೇಹದಲ್ಲಿ ಕಡಿಮೆ ನೀರಿನ ಅಂಶ ಇದ್ದರೆ ಹೃದಯದ ಆರೋಗ್ಯಕ್ಕೆ ಪೆಟ್ಟು ಬೀಳುತ್ತದೆ. ಬಾಯಾರಿಕೆ ಆದಾಗ ನೀರು ಕುಡಿಯಬೇಕು. ಹಾಗೆಯೇ ಸ್ವಲ್ಪ ಹೆಚ್ಚಿನ ನೀರನ್ನೇ ಕುಡಿಯಬೇಕು. ಹೃದಯದ ತೊಂದರೆ ಇದ್ದವರು ಮಾಂಸವನ್ನು ತಿನ್ನಬಾರದು. ನೀರನ್ನು ಹೆಚ್ಚಾಗಿ ಕುಡಿಯಬೇಕು. ಇದರಿಂದ ಹಾರ್ಟ್ ಅಟ್ಯಾಕ್ ಆಗುವುದು ತಪ್ಪುತ್ತದೆ. ಈಗಿನ ಆಧುನಿಕ ಆಹಾರ ಶೈಲಿಯಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಆದೇ ರೀತಿಯಲ್ಲಿ ಹಣ್ಣುಗಳಲ್ಲಿ ಸುಮಾರು ಶೇಕಡಾ 70ರಷ್ಟು ನೀರು ಇರುತ್ತದೆ.
ಬಾಯಾರಿಕೆ ಆದರೆ ಮಾತ್ರ ನೀರನ್ನು ಕುಡಿಯಬಾರದು. ಆಗಾಗ ನೀರು ಕುಡಿಯುತ್ತಲೇ ಇರಬೇಕು. ತರಕಾರಿಗಳಲ್ಲಿ ಶೇಕಡಾ 70ರಷ್ಟು ನೀರು ಇರುತ್ತದೆ. ಆದರೆ ಪಿಜ್ಜಾ , ಬರ್ಗರ್ ಮುಂತಾದ ಈಗಿನ ಜನರು ಇಷ್ಟ ಪಡುವ ಆಹಾರದಲ್ಲಿ ನೀರಿನ ಪ್ರಮಾಣ ಇರುವುದೇ ಇಲ್ಲ. ಒಣಗಿದ ಆಹಾರ ಪದಾರ್ಥಗಳು ಆಗಿರುತ್ತವೆ. ಡಯಟ್ ಮಾಡುವವರು ಹೆಚ್ಚಾಗಿ ಹಣ್ಣು ತರಕಾರಿಗಳನ್ನು ಮಾತ್ರ ಸೇವನೆ ಮಾಡುತ್ತಾರೆ. ಏಕೆಂದರೆ ಅದರಲ್ಲಿ ನೀರಿನ ಪ್ರಮಾಣ ಹೆಚ್ಚಿರುತ್ತದೆ. ಹಾಗೆಯೇ ಅತಿಯಾಗಿ ನೀರನ್ನು ಕುಡಿಯುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಇದು ಮೆದುಳಿನ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ. ಮೆದುಳಿನಲ್ಲಿ ಸೋಡಿಯಂ ಅಂಶವನ್ನು ನೀರು ತೆಗೆಯುತ್ತದೆ.