ಧ್ರುವ ಸರ್ಜಾ ಇವರು ಚಿರಂಜೀವಿ ಸರ್ಜಾ ಅವರ ಸಹೋದರ ಆಗಿದ್ದಾರೆ. ಚಿರಂಜೀವಿ ಸರ್ಜಾ ಅವರು ಈಗ ಇಲ್ಲ. ಆದರೆ ಚಿರಂಜೀವಿ ಸರ್ಜಾ ಅವರ ಅತಿ ಹೆಚ್ಚಿನ ಪ್ರೀತಿಯ ಸಹೋದರ ಧ್ರುವ ಸರ್ಜಾ ಅವರು ಆಗಿದ್ದರು. ಧ್ರುವ ಸರ್ಜಾ ಅವರ ಪೊಗರು ಸಿನೆಮಾ ಇತ್ತೀಚೆಗೆ ಅದೆಷ್ಟೋ ಹೆಸರನ್ನು ಮಾಡುತ್ತಿದೆ. ಅದರಲ್ಲಿ ಇವರ ನಟನೆ ಅತ್ಯಂತ ಅದ್ಭುತವಾಗಿದೆ. ಹಾಗೆಯೇ ಧ್ರುವ ಸರ್ಜಾ ಅವರು ಪ್ರೇರಣಾ ಅವರ ಪತಿಯಾಗಿದ್ದಾರೆ. ಆದ್ದರಿಂದ ನಾವು ಇಲ್ಲಿ ಧ್ರುವಸರ್ಜಾ ಅವರು ಚಿರಂಜೀವಿಸರ್ಜಾ ಅವರ ಸಮಾಧಿಗೆ ಹೋದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಧ್ರುವ ಸರ್ಜಾ ಇವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ತಮ್ಮ ಒಂದು ಅಮೋಘವಾದ ನಟನೆಯಿಂದ 2012ರಲ್ಲಿ ಒಂದು ಸಿನೆಮಾದಲ್ಲಿ ಕಾಣಿಸಿಕೊಂಡರು. ಹಾಗೆಯೇ ಇವರು ಅರ್ಜುನ್ ಸರ್ಜಾ ಅವರ ಅಕ್ಕನ ಮಗನಾಗಿದ್ದಾರೆ. ಧ್ರುವ ಸರ್ಜಾ ಅವರು ಪ್ರೇರಣಾ ಎನ್ನುವವರನ್ನು ವಿವಾಹವಾಗಿದ್ದಾರೆ. ಈಗ ಸ್ವಲ್ಪ ದಿನಗಳ ಹಿಂದೆ ಪ್ರೇರಣಾ ಅವರ ಹುಟ್ಟುಹಬ್ಬ ಇತ್ತು. ಧ್ರುವ ಸರ್ಜಾ ಅವರು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡಿದ್ದರು.

ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರು ಗೋವಾಕ್ಕೆ ಹೋಗಿದ್ದರು. ಅಲ್ಲಿಂದ ತನ್ನ ಪ್ರೀತಿಯ ಸಹೋದರರಾದ ಚಿರು ಅವರ ಪುತ್ರನಿಗೆ ವಿಶೇಷವಾದ ಉಡುಗೊರೆಯನ್ನು ತಂದಿದ್ದರು. ಅದೇನೆಂದರೆ ಮಕ್ಕಳು ಆಡುವ ಆಟಿಕೆ ಸಾಮಾನುಗಳು. ಇದರಲ್ಲಿ ಬಣ್ಣಬಣ್ಣದ ಆಟಿಕೆ ಸಾಮಾನುಗಳು ಇವೆ. ಹಾಗೆಯೇ ಅವರ ನಾಮಕರಣವನ್ನು ಧ್ರುವ ಸರ್ಜಾ ಅವರು ತಮ್ಮ ಮನೆಯಲ್ಲಿ ಮಾಡಬೇಕೆಂದು ನಿರ್ಧಾರವನ್ನು ಕೈಗೊಂಡಿದ್ದರು. ಹಾಗೆಯೇ ಬಹಳ ವಿಜೃಂಭಣೆಯಿಂದ ನಾಮಕರಣ ಮಾಡಿದ್ದಾರೆ.

ಚಿರು ಸರ್ಜಾ ಅವರು ನಿಧನ ಹೊಂದಿ ಸುಮಾರು ಒಂದು ವರ್ಷಕ್ಕೆ ಬಂತು. ಈಗ ಜೂನ್ ತಿಂಗಳು ಬಂದರೆ ಒಂದು ವರ್ಷ ಆಗುತ್ತದೆ. ಅವರ ದೇಹವನ್ನು ಅವರ ಕುಟುಂಬದ ಫಾರ್ಮ್ ಹೌಸ್ ಹತ್ತಿರ ಸುಡಲಾಗಿದೆ. ಹಾಗೆಯೇ ಅಲ್ಲಿಯೇ ಅವರ ಸಮಾಧಿಯನ್ನು ಮಾಡಲಾಗಿದೆ. ಹಾಗೆಯೇ ಅಲ್ಲಿ ಬಹಳ ಚಿರಂಜೀವಿ ಸರ್ಜಾ ಅವರ ಭಾವಚಿತ್ರಗಳನ್ನು ಇಡಲಾಗಿದೆ. ಇತ್ತೀಚೆಗೆ ಧ್ರುವಸರ್ಜಾ ಮತ್ತು ಪ್ರೇರಣಾ ಅವರು ಅಲ್ಲಿಗೆ ಹೋಗಿದ್ದರು. ಇವರು ಹೋಗಿ ನಮಸ್ಕಾರ ಮಾಡಿ ಅವರ ಫೋಟೋ ಹತ್ತಿರ ನಿಂತು ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!