ಇಡಿ ಜಗತ್ತಿನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ವಿಮಾನಗಳು ಪ್ರತಿದಿನ ಹಾರಾಡುತ್ತವೆ. ಭಾರತದಲ್ಲಿ 60 ರಿಂದ 80 ಸಾವಿರ ವಿಮಾನಗಳು ಹಾರಾಡುತ್ತವೆ ವಿಮಾನಯಾನ ಅತ್ಯಂತ ಸುರಕ್ಷಿತವಾದ ಸಾರಿಗೆ ವ್ಯವಸ್ಥೆಯಾಗಿದೆ. ಉಳಿದ ಸಾರಿಗೆ ವ್ಯವಸ್ಥೆಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿರುತ್ತದೆ. 1983ರಲ್ಲಿ ಏರ್ ಕೆನಡಾ ಫ್ಲೈಟ್ ನಂಬರ್ ಒನ್ ಫೋರ್ ತ್ರಿ ಯಲ್ಲಿ ಒಂದು ಘಟನೆ ನಡೆಯಿತು. ಈ ಘಟನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
1983 ರಲ್ಲಿ ಘಟನೆ ನಡೆಯಲು ಒಂದು ದಿವಸದ ಹಿಂದೆ ವಿಮಾನ ಟುರಂಟೋವದಿಂದ ಎಡ್ವಂಟನ್ ಗೆ ಪ್ರಯಾಣ ಬೆಳೆಸಿತು. ಎಡ್ವಂಟನ್ ನಲ್ಲಿ ರೆಗ್ಯುಲರ್ ಮೆಂಟೇನೆನ್ಸ್ ಚೆಕಪ್ ಮಾಡಿಕೊಳ್ಳಬೇಕಿತ್ತು. ನಂತರ ಎಡ್ವಂಟನ್ ನಿಂದ ಮೊಂಟ್ರಿಯಲ್ ಕಡೆ ವಿಮಾನ ಹಾರುತ್ತದೆ ಮೊಂಟ್ರಿಯಲ್ ನಲ್ಲಿ ವಿಮಾನದ ಸಿಬ್ಬಂದಿಯ ಡ್ಯೂಟಿ ಎಕ್ಸಚೇಂಜ್ ಮಾಡಬೇಕಿತ್ತು, ಹೊಸ ಪೈಲಟ್ ಎಂಟ್ರಿ ಆಗುತ್ತದೆ ಅವರ ಹೆಸರು ಕ್ಯಾಪ್ಟನ್ ರಾಬರ್ಟ್ ಪಿಯರ್ಸನ್. ಅವರಿಗೆ ಐದಿನೈದು ಸಾವಿರ ಗಂಟೆಗಳ ವಿಮಾನ ಚಲಾಯಿಸಿದ ಅನುಭವ ಇತ್ತು. ವಿಮಾನಯಾನದ ಅನುಭವವನ್ನು ಗಂಟೆ ಲೆಕ್ಕಾಚಾರದಲ್ಲಿ ಹೇಳಲಾಗುತ್ತದೆ. ಕೆನಡಾ ಆ ಸಮಯದಲ್ಲಿ ಅಳತೆ ಮಾಪನವನ್ನು ಇಂಪೀರಿಯಲ್ ಯೂನಿಟ್ ನಿಂದ ಹೊಸ ಮೆಟ್ರಿಕ್ ಸಿಸ್ಟಮ್ ಗೆ ಅಪ್ಡೇಟ್ ಆಗುತಿತ್ತು, ಈ ಹೊಸ ಸಿಸ್ಟಮ್ ವಿಮಾನಕ್ಕೆ ಕಂಟಕವಾಯಿತು. ಫ್ಲೈಟ್ ನಂಬರ್ ಒನ್ ಫೋರ್ ತ್ರಿ ವಿಮಾನಕ್ಕೆ ಇಪ್ಪತ್ತೆರಡು ಸಾವಿರದ ಮುನ್ನೂರು ಕೆಜಿ ಇಂಧನ ಹಾಕುವಂತೆ ಹೇಳಲಾಗಿತ್ತು. ಕೆನಡಾದ ಈ ವಿಮಾನ ಸವೆನ ಸಿಕ್ಸ್ ಸವೆನ್ ನ ಹೊಸ ಮೊಡೆಲ್ ಆಗಿತ್ತು. ಹಳೆಯ ಅಳತೆ ಮಾಪಕದ ಆಧಾರದ ಮೇಲೆ ಈ ವಿಮಾನಗೆ ಇಂಧನ ತುಂಬಿಸಲಾಯಿತು. ಇಪ್ಪತ್ತೆರಡು ಸಾವಿರದ ಮುನ್ನೂರು ಕೆಜಿ ಇಂಧನ ಹಾಕುವ ಬದಲು ಇಪ್ಪತ್ತೆರಡು ಸಾವಿರದ ಮುನ್ನೂರು ಪೌಂಡ್ ಇಂಧನ ಹಾಕಲಾಯಿತು, ಅಂದರೆ ಅಗತ್ಯಕ್ಕಿಂತ ಅರ್ಧ ಕಡಿಮೆ ಇಂಧನ ಹಾಕಲಾಯಿತು.
ವಿಮಾನದಲ್ಲಿರುವ ಸಿಬ್ಬಂದಿಗಳಿಗೆ ಇದು ಗೊತ್ತಿರಲಿಲ್ಲ. ವಿಮಾನ ಆಕಾಶಕ್ಕೆ ಹಾರಿತು 40,000 ಅಡಿ ಎತ್ತರ ವಿಮಾನ ಹಾರುವಾಗ ವಿಮಾನದ ಎಡ ಬದಿಯ ಇಂಜಿನ್ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ಸಿಗ್ನಲ್ ಸಿಗುತ್ತದೆ. ಆಗ ಹತ್ತಿರದಲ್ಲಿ ಒಂದು ಸಣ್ಣ ವಿಮಾನ ನಿಲ್ದಾಣ ಇದೆ ಅಲ್ಲಿ ಎಮರ್ಜೆನ್ಸಿ ಲ್ಯಾಂಡ್ ಮಾಡಬಹುದು ಎಂದು ಪೈಲಟ್ ಗಳು ಅಂದುಕೊಂಡರು. ಅಷ್ಟರಲ್ಲಿ ಇನ್ನೊಂದು ಸಿಗ್ನಲ್ ಸಿಗುತ್ತದೆ ಬಲ ಇಂಜಿನ್ ಕೂಡ ಆಫ್ ಆಗುತ್ತದೆ ಎಂದು ಇದನ್ನು ನೋಡಿ ಪೈಲಟ್ ಗೆ ಶಾಕ್ ಆಯಿತು. ಭೂಮಿಯಿಂದ 41,000 ಅಡಿ ಎತ್ತರವಿರುವ ವಿಮಾನದಲ್ಲಿ ಇಂಧನ ಖಾಲಿಯಾಗಿತ್ತು. ವಿಮಾನದಲ್ಲಿ ವಿದ್ಯುತ್ ಉತ್ಪಾದನೆಯಾಗುವುದು ಟರ್ಬೈನ್ ನಿಂದ ಆ ಸಂದರ್ಭದಲ್ಲಿ ಎರಡು ಟರ್ಬೈನ್ ಗಳು ಕೇವಲ ಗಾಳಿಯಿಂದ ತಿರುಗುತ್ತಿತ್ತು. ಗಾಳಿಯಿಂದ ಬಹಳ ಕಡಿಮೆ ವೇಗದಲ್ಲಿ ಟರ್ಬೈನ್ ತಿರುಗುತಿತ್ತು. ಮೊನಿಟರಿಂಗ್ ಇನ್ಸ್ಟ್ರುಮೆಂಟ್ಸ್ ಆಫ್ ಆಗಲೂ ಪ್ರಾರಂಭಿಸಿದವು. ವಿಮಾನ ಸಿಬ್ಬಂದಿಗಳು ಮತ್ತು ಪ್ರಯಾಣಿಕರ ಜೀವ ಇಬ್ಬರು ಪೈಲಟ್ ರ ಕೈಯಲ್ಲಿತ್ತು. ಇಂಥ ಸಮಯದಲ್ಲಿ ಅವರು ಸವೆನ್ ಸಿಕ್ಸ್ ಸವೆನ್ ಸಿಕ್ಸ್ ನ ಎಮರ್ಜೆನ್ಸಿ ಮ್ಯಾನ್ಯುಯೆಲ್ ಓಪನ್ ಮಾಡುತ್ತಾರೆ ಇಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ನೋಡುತ್ತಾರೆ ಎಲ್ಲಾ ಓದಿದ ನಂತರ ಅವರಿಗೆ ತಿಳಿಯುತ್ತದೆ ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ಮ್ಯಾನ್ಯುಯೆಲ್ ನಲ್ಲಿ ಇರಲಿಲ್ಲ.
ಆಗ ಪೈಲೆಟ್ ಕ್ಯಾಪ್ಟನ್ ರಾಬರ್ಟ್ ಪಿಯರ್ಸನ್ ಅವರು ಸೂಪರ್ ಸಿರೀಸ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡುತ್ತಿದ್ದರು. ವಿದ್ಯುತ್ ಇಲ್ಲದೆ ಇರುವುದರಿಂದ ಸ್ಪೀಡ್ ಇಂಡಿಕೇಟರ್ ಹಾಗೂ ಆಟಿಟ್ಯೂಡ್ ಇಂಡಿಕೇಟರ್ ಕೆಲಸಮಾಡುತ್ತಿರಲಿಲ್ಲ ಇದರಿಂದ ಅವರು ಎಷ್ಟು ಎತ್ತರದಲ್ಲಿ ಇದ್ದಾರೆ ಎನ್ನುವುದು ಗೊತ್ತಾಗುತ್ತಿರಲಿಲ್ಲ ಮತ್ತು ಎಷ್ಟು ಸ್ಪೀಡ್ ನಲ್ಲಿ ಕೆಳಗೆ ಹೋಗುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಅವರಿಗೆ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕ ಸಿಗುತ್ತಿತ್ತು, ಏರ್ ಟ್ರಾಫಿಕ್ ಕಂಟ್ರೋಲರ್ ಪ್ರಕಾರ ವಿಮಾನ ಸ್ಪೀಡ್ ನಲ್ಲಿ ಕೆಳಗೆ ಬರುತ್ತಿತ್ತು. ಇಂಧನ ಇಲ್ಲದೆ ವಿಮಾನವನ್ನು ಕೆಳಗೆ ಲ್ಯಾಂಡ್ ಮಾಡಬಹುದು ಆದರೆ ಮುಂದಕ್ಕೆ ಹೋಗಲು ಆಗುವುದಿಲ್ಲ ಹೀಗಾಗಿ ಎಮರ್ಜೆನ್ಸಿ ಸ್ಪಾರ್ಟ್ ನಲ್ಲಿ ಲ್ಯಾಂಡ್ ಮಾಡಲು ಆಗುವುದಿಲ್ಲ ಏಕೆಂದರೆ ಅದು ಬಹಳ ದೂರದಲ್ಲಿದೆ. ಆ ಸಮಯದಲ್ಲಿ ಪೈಲೆಟ್ ಅವರಿಗೆ ತನ್ನ ಹಳೆಯ ಏರ್ಪೋರ್ಟ್ ಬೇಸ್ ನೆನಪಾಗುತ್ತದೆ, ಅದು ಅಲ್ಲೆ ಪಕ್ಕದಲ್ಲಿದ್ದು ಅಲ್ಲಿ ಲ್ಯಾಂಡ್ ಮಾಡಬಹುದು ಎಂದು ಅಂದುಕೊಳ್ಳುತ್ತಾರೆ. ಆದರೆ ಅಲ್ಲಿ ಏರ್ಪೋರ್ಟ್ ತೆಗೆದುಹಾಕಿ ರೇಸ್ ಟ್ರ್ಯಾಕ್ ನಿರ್ಮಿಸಿದ್ದರು ಅಲ್ಲಿ ಜಾಗ ಖಾಲಿಯಿರಲಿಲ್ಲ ರೇಸ್ ನಡೆಯುತ್ತಿತ್ತು ಜನ ಕಿಕ್ಕಿರಿದು ತುಂಬಿದ್ದರು. ಅಲ್ಲಿಯೆ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಲ್ಯಾಂಡ್ ಮಾಡಲು ನಿರ್ಧರಿಸಿದರು, ವಿಮಾನದ ಲ್ಯಾಂಡಿಂಗ್ ಗೇರ್ ಗಳನ್ನು ಗ್ರ್ಯಾವಿಟಿ ಡ್ರಾಪ್ ಮೂಲಕ ಹೊರಗೆ ತೆಗೆಯಲಾಯಿತು, ಆದರೆ ಲ್ಯಾಂಡಿಂಗ್ ಮಾಡುವುದಕ್ಕೆ ವಿಮಾನದ ಸ್ಪೀಡ್ ಜಾಸ್ತಿ ಇತ್ತು. ರಿಸ್ಕ್ ತೆಗೆದುಕೊಂಡು ಲ್ಯಾಂಡಿಂಗ್ ಮಾಡಲೇಬೇಕಿತ್ತು ಅವರ ಬಳಿ ಬೇರೆ ಆಪ್ಷನ್ ಇರಲಿಲ್ಲ. ಆಕಾಶದಲ್ಲಿ ಹಾರುವಾಗ ಟರ್ಬೈನ್ ತಿರುಗುತ್ತಿತ್ತು ಕೆಳಗಿಳಿಯುವಾಗ ತಿರುಗುವ ಸ್ಪೀಡ್ ಕಡಿಮೆಯಾಗುತ್ತದೆ ಇದರಿಂದ ಸ್ಟೇರಿಂಗ್ ಗೆ ಪವರ್ ಸಾಕಾಗುವುದಿಲ್ಲ.
ಈ ಸಮಯದಲ್ಲಿ ವಿಮಾನವನ್ನು ಕಂಟ್ರೋಲ್ ಮಾಡುವುದು ಕಷ್ಟ ಆಗುತ್ತದೆ. ಫ್ರಂಟ್ ವೀಲ್ ಲಾಕ್ ಆಗದೆ ಇರುವುದರಿಂದ ಲ್ಯಾಂಡ್ ಆಗುವಾಗ ಬ್ರೇಕ್ ಹಾಕಿದಾಗ ಫ್ರಂಟ್ ವೀಲ್ ಒಳಗೆ ಹೋಗುತ್ತದೆ, ಇದರಿಂದ ವಿಮಾನದ ಮುಂಭಾಗ ನೆಲಕ್ಕೆ ಟಚ್ ಆಗುತ್ತದೆ ಆಗ ಫ್ರಿಕ್ಷನ್ ಉಂಟಾಗಿ ಸ್ಪೀಡ್ ಕಡಿಮೆ ಆಗುತ್ತದೆ. ಫ್ರಂಟ್ ವೀಲ್ ಲಾಕ್ ಆದರೆ ಸ್ಪೀಡ್ ಕಡಿಮೆ ಆಗುತ್ತಿರಲಿಲ್ಲ ಇದರಿಂದ ಅಲ್ಲಿರುವ ಜನರ ಮೇಲೆ ಹೋಗುತ್ತಿತ್ತು. ಆಗ ಕ್ಯಾಪ್ಟನ್ ಬ್ರೇಕ್ ಹಾಕುತ್ತಾನೆ ಆ ಸಮಯದಲ್ಲಿ ಗೇರ್ ಗಳು ತುಂಡಾಗುತ್ತದೆ ಇದರಿಂದ ವಿಮಾನದ ಮಧ್ಯ ಭಾಗ ಕೂಡ ನೆಲಕ್ಕೆ ಬಡಿಯುತ್ತದೆ ಇದರಿಂದ ಮತ್ತಷ್ಟು ಫ್ರಿಕ್ಷನ್ ಹೆಚ್ಚಾಗುತ್ತದೆ ಕೊನೆಗೆ ವಿಮಾನ ನಿಲ್ಲುತ್ತದೆ. ಈ ಘಟನೆಯಲ್ಲಿ ಯಾರಿಗೂ ಹಾನಿ ಆಗುವುದಿಲ್ಲ. ಪೈಲಟ್ ಇಬ್ಬರನ್ನು ಸನ್ಮಾನ ಮಾಡಲಾಗುತ್ತದೆ. ಇಂಧನ ಸರಿಯಾಗಿ ಹಾಕದೆ ಇರುವವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ.