ಸ್ಯಾಂಡಲ್ ವುಡ್ ನ ನಟಿ ಹಾಗೂ ಬಿಗ್ ಬಾಸ್ ಸೀಸನ್4 ಸ್ಪರ್ಧಿ ಆಗಿದ್ದ ಕಾರುಣ್ಯ ರಾಮ್ ಇತ್ತೀಚೆಗೆ ಕೆಲವು ತಿಂಗಳ ಹಿಂದೆ ಐಷರಾಮಿ BMW ಕಾರು ಖರೀದಿ ಮಾಡಿ ಸುದ್ದಿಯಾಗಿದ್ದರು ಇದೀಗ ನೂತನ ಮನೆಯ ಗೃಹ ಪ್ರವೇಶ ಮಾಡಿದ್ದಾರೆ ಈ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ ನಟಿ ಕಾರುಣ್ಯ ರಾಮ್. ಕನ್ನಡ ಚಿತ್ರರಂಗದಲ್ಲಿ ಮುಗ್ಧತೆಯಿಂದ ಫೇಮಸ್ ಆದ ನಟಿಯರಲ್ಲಿ ಕಾರುಣ್ಯ ರಾಮ್ ಕೂಡಾ ಒಬ್ಬರು. ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರ ಜೊತೆ ವಜ್ರಕಾಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಲವಲವಿಕೆಯ ಗುಣ ಹಾಗೂ ಮುಗ್ಧತೆಯಿಂದ ಎಲ್ಲರ ಮನ ಗೆದ್ದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಕಾರುಣ್ಯ ರಾಮ್ ಅಭಿಮಾನಿಗಳಿಗಾಗಿ ತಮ್ಮ ಹೊಸ ಹೊಸ ಫೋಟೋಗಳನ್ನು ಆಗಾಗ ಪೋಸ್ಟ್ ಮಾಡುತ್ತಾ ಇರುತ್ತಾರೆ. ಇದೀಗ ತಮ್ಮ ಕನಸಿನ ಮನೆ ಕಟ್ಟಿಸಿದ ನಟಿ ಕಾರುಣ್ಯ ಈ ಫೋಟೋಗಳನ್ನು ಕೂಡಾ ಸೋಷಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡಿದ್ದಾರೆ.

ಇದೀಗ ನೂತನ ಮನೆಯ ಗೃಹ ಪ್ರವೇಶ ಮಾಡಿದ್ದ ಕಾರುಣ್ಯ ತನ್ನ ಸೋಷಿಯಲ್ ಮೀಡಿಯಾದಲ್ಲಿ ಅದರ ಕುರಿತು ಈ ರೀತಿ ಬರೆದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಒಂದೊಳ್ಳೆ ಮನೆಗಾಗಿ ಹುಡುಕುತ್ತಿದ್ದೆವು ಕೊನೆಗೂ ನಮಗೆ ಇಷ್ಟವಾಗುವ ಹಾಗೂ ಅನುಕೂಲಕರವಾದ ವಾತಾವರಣ ಮನೆ ಸಿಕ್ಕಿದೆ. ಲಾಕ್ಡೌನ್ ಆಗುವ ಮುಂಚೆಯೇ ಹೊಸ ಮನೆಯ ಗೃಹ ಪ್ರವೇಶ ಮಾಡುವ ಯೋಜನೆ ನಮ್ಮದಾಗಿತ್ತು. ಹಾಗಾಗಿ ವಿಶೇಷವಾಗಿ ಶುಭದಿನವಾದ ಅಕ್ಷಯ ತೃತೀಯ ದಿನದಂದು ಹಾಲು ಉಕ್ಕಿಸಿ ಗೃಹ ಪ್ರವೇಶ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ತಮ್ಮ ತಂದೆ ತಾಯಿ ತಂಗಿಯ ಜೊತೆ ಸರಳವಾಗಿ ಗೃಹ ಪ್ರವೇಶ ಕಾರ್ಯಕ್ರಮ ನಡೆಸಿದ್ದಾರೆ. ನಟಿ ಕಾರುಣ್ಯ ರಾಮ್ ಇತ್ತೀಚೆಗೆ ಕೆಲವು ತಿಂಗಳ ಮುಂಚೆ ಬಿಎಂಡಬ್ಲ್ರೂ ಗ್ರ್ಯಾನ್ ಲಿಮ್ಯೋಸೈನ್ ಐಷರಾಮಿ ಖರೀದಿ ಮಾಡಿದ್ದರು.

ನೀವು ಕನಸು ಕಂಡರೆ ಸಾಧಿಸಬಹುದು ಕೊನೆಗೆ ನನ್ನ ಇನ್ನೊಂದು ಕನಸು ಇದೀಗ ನೆರೆವೇರಿದೆ” ಎಂದು ಕಾರುಣ್ಯ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹೊಸ ಮನೆಯ ಗೃಹ ಪ್ರವೇಶ ಸಂಭ್ರಮದ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು ಆ ಪೋಟೋಗಳಲ್ಲಿ ಕಾರುಣ್ಯ ರಾಮ್ ಅವರ ಸಹೋದರಿ ಮತ್ತು ತಂದೆ ತಾಯಿಗಳು ಇದ್ದಾರೆ. ಎರಡು ಕನಸು, ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ ಎಂದು ಕೆಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದು ಮಾತ್ರವಲ್ಲದೆ ನಟಿ ಕಾರುಣ್ಯಾ ರಾಮ್ ಒಂದಷ್ಟು ರಿಯಾಲಿಟಿ ಶೋಗಳ ಜೊತೆಗೆ ತಕಧಿಮಿತಾ ಡ್ಯಾನ್ಸ್ ಶೋನಲ್ಲಿ ಕೂಡಾ ಭಾಗವಹಿಸಿ ಅಲ್ಲಿ ರನ್ನರ್ ಅಪ್ ಆಗಿದ್ದರು. ಸದ್ಯಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕುಕ್ಕು ವಿತ್ ಕಿರಿಕ್ಕು ಎಂಬ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *