ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರು ತಮ್ಮ ಕೃಷಿ ಕಾರ್ಯಗಳಿಗೆ ಎತ್ತು, ಕೋಣಗಳನ್ನು ಹೊರತುಪಡಿಸಿ ಹೆಚ್ಚಾಗಿ ಉಪಯೋಗಿಸವುದು ಟ್ರ್ಯಾಕ್ಟರಗಳನ್ನೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕಡಿಮೆ ಬಜೆಟ್ನಲ್ಲಿ ಬಳಕೆಯಾಗುವ ಸಣ್ಣ ಟ್ರ್ಯಾಕ್ಟರ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ರೈತರಿಗೆ ಭತ್ತದ ಗದ್ದೆ ಉಳುಮೆ ಸೇರಿದಂತೆ ಬಹು ಉಪಯೋಗವಾಗುತ್ತಿವೆ. ಆದ್ದರಿಂದ ನಾವು ಇಲ್ಲಿ ಮಿನಿ ಟ್ರ್ಯಾಕ್ಟರ್ ಗಳ ಮಾಹಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಿನಿ ಟ್ರ್ಯಾಕ್ಟರ್ ಹೆಚ್ಚು ಉಪಯುಕ್ತವಾಗಿದೆ. ಪವರ್ ಟಿಲ್ಲರ್, ಎತ್ತುಗಳ ಬಳಕೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದು ಸಣ್ಣ ಟ್ರ್ಯಾಕ್ಟರ್ ಬಳಕೆ ಹೆಚ್ಚುತ್ತಿದೆ. ಇದು ರೈತರಿಗೆ ಭತ್ತದ ಗದ್ದೆ ಉಳುಮೆ ಸೇರಿದಂತೆ ಬಹು ಉಪಯೋಗಿಯಾಗಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಟ್ರ್ಯಾಕರ್ ಕಂಪನಿಗಳು ರೈತರ ಬೇಡಿಕೆಗೆ ತಕ್ಕಂತೆ ಸಣ್ಣ ರೈತರು ಸಹ ಟ್ರ್ಯಾಕ್ಟರ್ ಖರೀದಿಸಲು ಸಾಧ್ಯವಾಗುವಂತಹ ದರದಲ್ಲಿ ಟ್ರ್ಯಾಕ್ಟರ್ ಗಳನ್ನು ನಿರ್ಮಿಸುತ್ತಿವೆ.
ಅಂತಹದರಲ್ಲಿ ಮಹೀಂದ್ರಾ, ಸೋನಾಲಿಕಾ, ಜಾನ್ ಡೀರ್, ಸ್ವರಾಜ್, ನ್ಯೂ ಹಾಲೆಂಡ್, ಕುಬೋಟಾ, ವಿಎಸ್‌ಟಿ ಟ್ರ್ಯಾಕ್ಟರ್, ಡುಯೆಟ್ಝ್ ಫಾಹ್ರ ಮತ್ತು ಫೋರ್ಸ್ ಸೇರಿದಂತೆ ಇತರ ಟ್ರ್ಯಾಕ್ಟರ್ ಗಳ ಕಂಪನಿಗಳು ಮಾರುಕಟ್ಟೆಯಲ್ಲಿ ಒಳ್ಳೊಳ್ಳೆ ಟ್ರ್ಯಾಕ್ಟರ್ ಗಳನ್ನು ತಂದು ರೈತಾಪಿ ವರ್ಗದವರ ಮನಗೆದ್ದಿವೆ. ಕೆಲವು ಬಗೆಯ ಮಿನಿ ಟ್ರ್ಯಾಕ್ಟರ್ ಗಳೆಂದರೆ ಮಹೀಂದ್ರಾ ಯುವರಾಜ215ಏನ್ ಎಕ್ಸ್ ಟಿ,
ಸ್ವರಾಜ್ 717, ಮಹೀಂದ್ರಾ ಜ್ ಜಿವೋ 225 ಡಿ ಐ ಗಳು.
ಹಾಗೆಯೇ ಯುವರಾಜ್-215 ಏನ್ ಎಕ್ಸ್ ಟಿ, ಮಹೀಂದ್ರಾ ಗೋ 245 ಡಿ ಐ ಹೀಗೆ ಅನೇಕ ಬಗೆಯ ಮಿನಿ ಟ್ರ್ಯಾಕ್ಟರ್ ಗಳಿವೆ. ಎಲ್ಲ ಬಗೆಯ ಮಿನಿ ಟ್ರ್ಯಾಕ್ಟರ್ ಗಳು ಸರಿ ಸುಮಾರು 2.5 ಲಕ್ಷದಿಂದ 4 ಲಕ್ಷದ ಒಳಗೆ ಇರುತ್ತದೆ. ಆದ ಕಾರಣ ಇದನ್ನು ಸಣ್ಣ ಮತ್ತು ಅತೀ ಸಣ್ಣ ರೈತರು ಕೂಡ ಸುಲಭವಾಗಿ ಖರೀದಿಸಬಹುದಾಗಿದೆ. ಇಂತಹ ಟ್ರ್ಯಾಕ್ಟರ್ ಗಳನ್ನು ಬೇಕಾದ ಜಾಗದಲ್ಲಿ ಒಯ್ಯಬಹುದು ಮತ್ತು ಬಳಸಬಹುದಾಗಿದೆ. ಇದನ್ನು ಆಧುನಿಕತೆಯಲ್ಲಿ ರೈತನ ಮಿತ್ರ ಎಂದು ಸಹ ಕರೆಯಲಾಗುತ್ತದೆ.