ಶಿವರಾಜ್‍ಕುಮಾರ್ 1962ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ.ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ.ರಾಜ್‍ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಜ್ಞಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ಶಿವರಾಜಕುಮಾರ್ ಅವರು ಸಿನೆಮಾ ಕ್ಷೇತ್ರದಲ್ಲಿ ಎಷ್ಟೇ ಬ್ಯುಸಿ ಆಗಿದ್ದರು ಅವರ ಹೆಂಡತಿ ಮಕ್ಕಳು ಅಳಿಯನಿಗೂ ಕೂಡ ಸಮಯವನ್ನು ನೀಡುತ್ತಾರೆ. ಆದ್ದರಿಂದ ಅವರು ತಮ್ಮ ಅಳಿಯನ ಜೊತೆ ಹೇಗಿರುತ್ತಾರೆ ಎಂಬುದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ.ರಾಜ್‍ಕುಮಾರ್ ರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್ ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದಾಗಿದೆ. ಶಿವರಾಜ್ ಕುಮಾರ್ ಅವರು ತಮ್ಮ 58ನೇ ವಯಸ್ಸಿನಲ್ಲಿಯೂ ಕೂಡ ಚಿರಯುವಕನಂತೆ ಕಾಣುತ್ತಾರೆ. ಇವರಿಗೆ ಮದುವೆಯಾದ ಮಗಳಿದ್ದಾಳೆ ಎಂದು ಹೇಳಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ.

ಆಗಸ್ಟ್ 31 2015 ರಲ್ಲಿ ಶಿವಣ್ಣ ಅವರ ಮಗಳು ನಿರುಪಮಾ ಮತ್ತು ಡಾ.ದಿಲೀಪ್ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಆಕ್ಟರ್ ದಿಲೀಪ್ ಹಾಗೂ ನಿರುಪಮಾ ಅವರು ವಿದ್ಯಾರ್ಥಿ ದಿನಗಳಿಂದಲೂ ಸ್ನೇಹಿತರಾಗಿದ್ದರು. 8ವರ್ಷದ ಇವರ ಪ್ರೀತಿಗೆ ಅಂತಿಮವಾಗಿ ಮದುವೆ ಎಂಬ ಮುದ್ರೆ ದೊರೆತಿದೆ. ದಿಲೀಪ್ ಅವರು ಕೂಡ ಶಿವಣ್ಣನವರ ಜೊತೆ ಹೆಚ್ಚು ಕಾಲವನ್ನು ಕಳೆಯುತ್ತಾರೆ. ಹೆಚ್ಚು ಆತ್ಮೀಯವಾಗಿ ಇರುತ್ತಾರೆ. ಶಿವಣ್ಣ ಅವರು ಕೂಡ ದಿಲೀಪ್ ಅವರನ್ನು ಮಗನಂತೆ ಕಾಣುತ್ತಾರೆ.

ಹಬ್ಬಹರಿದಿನಗಳು ಬಂದಾಗ ಶಿವಣ್ಣ ಅವರು ತಮ್ಮ ಅಳಿಯ ಮತ್ತು ಮಗಳನ್ನು ಕರೆದು ತುಂಬಾ ಸಂತೋಷದಿಂದ ಅವರ ಜೊತೆ ಸಮಯವನ್ನು ಕಳೆಯುತ್ತಾರೆ. ಶಿವಣ್ಣ ಅವರು ಯಾವುದೇ ಪ್ರವಾಸಗಳನ್ನು ಕೈಗೊಂಡರೂ ಕೂಡ ಅಳಿಯ ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಶಿವಣ್ಣ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ತಮ್ಮ ಕುಟುಂಬಕ್ಕೂ ಹೆಚ್ಚಿನ ಸಮಯವನ್ನು ಅವರು ನೀಡುತ್ತಾರೆ. ಶಿವಣ್ಣ ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಕೂಡ ಸರಳ ಸಜ್ಜನಿಕೆಯಿಂದ ಜೀವಿಸುತ್ತಿದ್ದಾರೆ. ತಮ್ಮ ಕುಟುಂಬದವರನ್ನು ಆತ್ಮೀಯವಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!