ಕೋಳಿ ಸಾಕಣೆ ಕುರಿತಾಗಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳವು ಪ್ರಸ್ತಾವಿಸಿದ ಅಂಶಗಳನ್ನು ಒರೆಗೆ ಹಚ್ಚಿ ನೋಡಬೇಕಾದ ಸ್ಥಿತಿ ಇದೀಗ ಅಗತ್ಯವಿದೆ. ಪ್ರತಿ ಜಿಲ್ಲೆಯ ಒಂದು ಅಥವಾ ಎರಡು ಗ್ರಾಮ ಗಳಲ್ಲಿ ಸಣ್ಣ ಬಡ ಫಲಾನುಭವಿಗಳು ಅನುಷ್ಠಾನಿಸಬಹುದಾದ ಕೋಳಿ ಸಾಕಣೆ ಯೋಜನೆ ಇದಾಗಿದೆ.
ಜಿಲ್ಲೆಯ ಒಂದೆರಡು ಗ್ರಾಮಗಳಲ್ಲಿ ಮಾತ್ರ ಯೋಜನೆ ಅನುಷ್ಠಾನಿಸಬೇಕು. ಪ್ರತಿ ಗ್ರಾಮವೆಂದರೆ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ 22 ಬಿಪಿಎಲ್ ಕಾರ್ಡುದಾರರು ಫಲಾನುಭವಿಗಳಾಗಬಹುದು. ಇದರಲ್ಲಿ 20 ಮಂದಿ ಸಾಮಾನ್ಯರು, ಇಬ್ಬರು ಪರಿಶಿಷ್ಟ ಜಾತಿಯವರು. ಒಟ್ಟು ಘಟಕ ವೆಚ್ಚ 52,000 ರೂ. ಇದರಲ್ಲಿ 22,500 ರೂ. ಮೊತ್ತದ ಗೂಡು, 20 ಕೋಳಿಗಳಿಗೆ ತಲಾ 360 ರೂ.ನಂತೆ 7,200 ರೂ., ಕೋಳಿ ಆಹಾರ (ಲೇಯರ್ ಮ್ಯಾಷ್) 42 ಕೆ.ಜಿ.ಯಷ್ಟು 52 ವಾರದವರೆಗೆ ಪೂರೈಕೆಗೆ ಒಂದು ಕೋಳಿಗೆ ಒಂದು ಕೆ.ಜಿ.ಗೆ 25 ರೂ.ನಂತೆ 21,000 ರೂ., ಔಷಧೋಪಚಾರ ಮತ್ತು ಲಸಿಕೆಗೆ 1,300 ರೂ. ಎಂದು ನಿಗದಿಪಡಿಸಲಾಗಿದೆ. ಸಾಮಾನ್ಯ ಫಲಾನುಭವಿಗಳಿಗೆ 26,000 ರೂ. ಸಬ್ಸಿಡಿ ದೊರಕಿದರೆ, ಪರಿಶಿಷ್ಟ ಜಾತಿ ಯವರಿಗೆ ಶೇ.90 ಸಬ್ಸಿಡಿ ದೊರಕುತ್ತದೆ. ಕೋಳಿ ಮೊಟ್ಟೆ ಇಡಲು ಆರಂಭಿ ಸುವುದು 22ನೇ ವಾರದಿಂದ. ಇಂತಹ 20 ಕೋಳಿಗಳನ್ನು ನೀಡಲಾಗುತ್ತದೆ. ಇದು 72ನೇ ವಾರದವರೆಗೆ ಮೊಟ್ಟೆ ಇಡುತ್ತದೆ. ಒಂದು ಕೋಳಿ 270ರಿಂದ 310 ಮೊಟ್ಟೆಗಳನ್ನು ಇಡಬಹುದು. ಮೊಟ್ಟೆಗಳನ್ನು ಮಾರಿ ಸ್ವದ್ಯೋಗ ಕೈಗೊಳ್ಳಬಹುದು.
ರಾಜ್ಯ ಸರ್ಕಾರದಿಂದ ಕೋಳಿ ಸಾಕಾಣಿಕೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅರ್ಜಿ ಬಿಟ್ಟಿದ್ದಾರೆ. ವಿಶೇಷ ಕೇಂದ್ರೀಯದಡಿ ನಿರುದ್ಯೋಗ ಯುವಕ ಅಥವಾ ಯುವತಿಗೆ ಕೆಲಸ ಒದಗಿಸುವಲ್ಲಿ ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಯೋಚಿಸಿದೆ. ಸಹಾಯಧನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಪಡೆಯಲು ಯೋಜನೆ ಸಿದ್ಧವಾಗಿದೆ. ಇದಕ್ಕೆ ಬೇಕಾಗಿರುವ ದಾಖಲೆಗಳು ಜಾತಿ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ನಿವೇಶನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಇತ್ತೀಚಿನ ಎರಡು ಭಾವಚಿತ್ರಗಳು ಚಾಲ್ತಿಯಲ್ಲಿರುವ ಪಾಸ್ ಬುಕ್ ಜೆರಾಕ್ಸ್ ಎಲ್ಲ ದಾಖಲೆಗಳನ್ನು ಅರ್ಜಿಯೊಂದಿಗೆ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.ಈ ಯೋಜನೆಯನ್ನು ಪಡೆಯುವ ವ್ಯಕ್ತಿಗಳ ವಯಸ್ಸು ಕನಿಷ್ಠ 20 ವರ್ಷ ಗರಿಷ್ಠ 50 ವರ್ಷ ಮೀರಿರಬಾರದು. ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವ್ಯಕ್ತಿಗಳಿಗೆ ಶೇಕಡ 80ರಷ್ಟು ಸಬ್ಸಿಡಿ ದೊರೆಯುತ್ತದೆ ಇಂತಹ ಮುದ್ದೆಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯ ದೊರೆಯುತ್ತದೆ.