ಆರೋಗ್ಯವಾಗಿದ್ದ ನಿರ್ಮಾಪಕ ಕೋಟಿ ರಾಮು ಅವರು ವಿಧಿವಶರಾಗಿದ್ದಾರೆ ಎಂಬುದನ್ನು ನಂಬಲು ಬಹಳ ಕಷ್ಟ ಸಾಧ್ಯವಾಗಿದೆ. ಕೊರೋನ ಮಹಾಮಾರಿ ಯಾರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ಊಹಿಸಲಾಗುತ್ತಿಲ್ಲ. ಒಂದು ಕಡೆ ಕೊರೋನ ವೈರಸ್ ಬಗ್ಗೆ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಇನ್ನೊಂದು ಕಡೆ ಸಾಲುಸಾಲು ಸಾವನ್ನು ನೋಡುತ್ತಿದ್ದೇವೆ. ನಿರ್ಮಾಪಕ ಕೋಟಿ ರಾಮು ಅವರು ಕೊರೋನ ವೈರಸ್ ಗೆ ಬಲಿಯಾದರು ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಭಯಾನಕ ಕೊರೋನ ವೈರಸ್ ಗೆ ಚಿತ್ರರಂಗದ ಕೆಲವರು ಬಲಿಯಾದರು, ಕೆಲವರು ಸೋಂಕಿಗೆ ಒಳಗಾಗಿ ಗುಣಮುಖರಾದರು. ಇದೀಗ ಕೋಟಿ ರಾಮು ಎಂದೆ ಖ್ಯಾತಿ ಪಡೆದ ಕನ್ನಡ ಚಿತ್ರರಂಗದ ನಿರ್ಮಾಪಕ ರಾಮು ಅವರು ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ. ಇವರು ಕೋಟಿ ರಾಮು ಎಂಬ ಹೆಸರಿನಿಂದಲೆ ಖ್ಯಾತಿ ಪಡೆದಿದ್ದರು. ಅದ್ದೂರಿ ಹಾಗೂ ಸಾಹಸಿಮಯ ಚಿತ್ರಕ್ಕೆ ಅವರು ಹೆಸರಾಗಿದ್ದರು. ಅನೇಕ ಸಿನಿಮಾಗಳು ಇವರ ನಿರ್ಮಾಣದಲ್ಲಿ ತೆರೆಕಂಡು ಹಿಟ್ ಆಗಿದೆ. ಇವರು ಕುಣಿಗಲ್ ಮೂಲದವರು ಕನ್ನಡ ಚಿತ್ರರಂಗಕ್ಕೆ ತಮ್ಮದೆ ಆದ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಭಾವಭಾಮೈದ, ಲಾಕಪ್ ಡೆತ್, ಕಲಾಸಿಪಾಳ್ಯ, ರಜನಿ, ಚಾಮುಂಡಿ, ದುರ್ಗಿ, ಸರ್ಕಲ್ ಇನ್ಸಪೆಕ್ಟರ್, ಲೇಡಿ ಪೊಲೀಸ್, ಕಿರಣ್ ಬೇಡಿ ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಅವರು ರಾಮು ಎಂಟರ್ಪ್ರೈಸಸ್ ಬ್ಯಾನರ್ ನಡಿಯಲ್ಲಿ ಸುಮಾರು 30 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ದುಬಾರಿ ವೆಚ್ಚದ ಸಿನಿಮಾವನ್ನು ಮಾಡುವ ಮೂಲಕ ಫೇಮಸ್ ನಿರ್ಮಾಪಕರಾಗಿದ್ದರು. ಇವರು ಕನ್ನಡ ಚಿತ್ರರಂಗದ ಪ್ರಮುಖ ಸಾಹಸಿ ನಟಿ ಎಂದು ಹೇಳಿದರೆ ತಪ್ಪಾಗಲಾರದು ನಟಿ ಮಾಲಾಶ್ರಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮಾಲಾಶ್ರಿ ಹಾಗೂ ರಾಮು ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಮಗ ಹಾಗೂ ಮಗಳು.

ಮನೆಯಲ್ಲೆ ಇದ್ದ‌ ರಾಮು ಅವರಿಗೆ ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು ನಂತರ ಅವರು ಟೆಸ್ಟ್ ಮಾಡಿಸಿದಾಗ ವಾರದ ಹಿಂದೆ ಅವರಿಗೆ ಕೋವಿಡ್ 19 ಪೊಸಿಟಿವ್ ದೃಢವಾಗಿತ್ತು ಮೊದಲು ಆರೋಗ್ಯವಾಗಿದ್ದರಿಂದ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು ನಂತರ ಕೊರೋನ ವೈರಸ್ ಉಲ್ಬಣಿಸಿರುವ ಕಾರಣ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ರಾಮು ಅವರಿಗೆ ಶುಗರ್ ಮತ್ತು ಬಿಪಿ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇವರಿಗೆ ಉಸಿರಾಟದ ಸಮಸ್ಯೆ ಕಂಡುಬಂದಿತು ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಕೊಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಆಸ್ಪತ್ರೆಯಲ್ಲಿ ವೈದ್ಯರು ರಾಮು ಅವರನ್ನು ಉಳಿಸಿಕೊಳ್ಳಬೇಕೆಂದು ಹೆಚ್ಚಿನ ನಿಗಾ ವಹಿಸಿದ್ದರು ಆದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊರೋನ ವೈರಸ್ ಕಾರಣದಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಿಲ್ಲ, ಅವರ ಚಿತೆಗೆ ಅವರ ಮಗ ಅಗ್ನಿಸ್ಪರ್ಶ ಮಾಡಿದರು. ಕನ್ನಡ ಚಿತ್ರರಂಗದಲ್ಲಿ ಕೋಟಿ ಕೋಟಿ ಹಣವನ್ನು ಇನ್ವೆಸ್ಟ್ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ನಿರ್ಮಾಪಕ ರಾಮು ಅವರು. ರಾಮು ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಕೊನೆಯದಾಗಿ ಮಾತನಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಕೇಳಬಹುದು. ಸಾಮಾನ್ಯವಾಗಿ ಹೇಳುತ್ತಾರೆ ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದು ಎಂದು ಆದರೆ ನಮ್ಮ ಮುಂದೆ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ದುಡ್ಡಿನಿಂದ ಏನು ಸಾಧ್ಯವಿಲ್ಲ ಜೀವ ಮುಖ್ಯ ನಂತರ ಜೀವನ, ಹಣ ಎಲ್ಲವೂ, ನಾವು ಇದನ್ನು ಕಲಿತು ಕೊಳ್ಳಬೇಕಾಗಿದೆ. ಕೊರೋನ ವೈರಸ್ ಬಗ್ಗೆ ನಿರ್ಲಕ್ಷ ಮಾಡುವುದು ಮೂರ್ಖತನವಾಗುತ್ತದೆ. ನಟಿ ಮಾಲಾಶ್ರಿ ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!