ಪುರುಷರಿರಲಿ ಸ್ತ್ರೀಯರಿರಲಿ ಜೀವನದಲ್ಲಿ ಮದುವೆ ಎನ್ನುವುದು ಒಂದು ಪ್ರಮುಖವಾದ ಘಟ್ಟವಾಗಿದೆ. ಪುರುಷರಿರಲಿ ಸ್ತ್ರೀಯರಿರಲಿ ತನ್ನ ಜೀವನದ ಸಂಗಾತಿ ಹೀಗೆ ಇರಬೇಕು ಎಂಬ ಅವರದೆ ಆದ ಕಲ್ಪನೆಗಳಿರುತ್ತವೆ. ಮೌರ್ಯರ ಕಾಲದ ಪ್ರಸಿದ್ಧ ರಾಜಕಾರಣಿ, ಬುದ್ಧಿವಂತ ವ್ಯಕ್ತಿ ಆಚಾರ್ಯ ಚಾಣಕ್ಯರವರು ತಮ್ಮ ಪ್ರಮುಖವಾದಂತಹ ಚಾಣಕ್ಯ ನೀತಿ ಎಂಬ ಪುಸ್ತಕದಲ್ಲಿ ಪುರುಷರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಹಾಗೂ ಸ್ತ್ರೀಯರ ಬಗ್ಗೆ ಕೆಲವು ಪ್ರಮುಖವಾದ ವಿಷಯವನ್ನು ತಿಳಿಸಿದ್ದಾರೆ ಅದೇನೆಂದು ಈ ಲೇಖನದಲ್ಲಿ ನೋಡೋಣ.
ತನ್ನ ಕಾಲದಲ್ಲಿ ಬುದ್ಧಿವಂತನಾದ ಆಚಾರ್ಯ ಚಾಣಕ್ಯ ಅವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಚಾಣಕ್ಯ ಅವರು ಬರೆದ ಪುಸ್ತಕದ ಹೆಸರು ಚಾಣಕ್ಯ ನೀತಿ, ಈ ಪುಸ್ತಕದಲ್ಲಿ ಅವರು ಹಲವಾರು ವಿಷಯಗಳ ಬಗ್ಗೆ ಬರೆದಿದ್ದಾರೆ. ಇಂದಿಗೂ ಈ ಪುಸ್ತಕದಲ್ಲಿರುವ ವಿಷಯಗಳನ್ನು ಅನುಸರಿಸಬಹುದು. ಅವರ ಕಾಲದಲ್ಲಿದ್ದ ಸ್ತ್ರೀ-ಪುರುಷರ ಸಂಬಂಧದ ಬಗ್ಗೆ ಹೇಳಿರುವ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ನೀವು ಯಾರನ್ನಾದರೂ ಪ್ರೀತಿಸಿದರೆ ಚಾಣಕ್ಯರವರ ಪ್ರಕಾರ ತಪ್ಪಲ್ಲ ಆದರೆ ತಿಳಿಯದೆ ಪ್ರೀತಿಸಿದರೆ ನಿಮ್ಮಷ್ಟು ಮೂರ್ಖರು ಯಾರೂ ಇರುವುದಿಲ್ಲ. ಚಾಣಕ್ಯರವರ ಪ್ರಕಾರ ಸ್ತ್ರೀ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಮುನ್ನ ಆಕೆಯನ್ನು ವಿವಾಹವಾಗಬಾರದು. ಯಾರಾದರೂ ಅವಳ ಅಂದಕ್ಕೆ ಮರುಳಾಗಿ ಅವಳ ಬಗ್ಗೆ ತಿಳಿದುಕೊಳ್ಳದೆ ಮದುವೆಯಾದರೆ ಸಾವಿಗೆ ಸಮಾನ ಶಿಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಚಾಣಕ್ಯರವರ ಪ್ರಕಾರ ಸುಂದರವಾಗಿರುವ ಎಲ್ಲಾ ಸ್ತ್ರೀಯರು ಮೋಸ ಮಾಡುವುದಿಲ್ಲ ಆದರೆ ಹೆಚ್ಚಿನ ಸುಂದರವಾಗಿರುವ ಸ್ತ್ರೀಯರ ಮನಸ್ಸು ಸುಂದರವಾಗಿರುವುದಿಲ್ಲ.
ಚಾಣಕ್ಯರವರ ಪ್ರಕಾರ ಸಾಕ್ಷಾತ್ ಪರಮಾತ್ಮ ಮಹಾಶಿವ ಮತ್ತು ವಿಷ್ಣು ಮೂರ್ತಿಗಳೆ ಅವರ ಹೆಂಡತಿಯನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ, ಇನ್ನು ಸಾಧಾರಣ ಮನುಷ್ಯರಾದ ಪುರುಷರು ಸ್ತ್ರೀಯರನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ. ಚಾಣಕ್ಯರವರ ಪ್ರಕಾರ ಯಾವುದೆ ಸ್ತ್ರೀಯನ್ನು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಿದರೆ ನಿಮ್ಮನ್ನೆ ನೀವು ಮರೆತುಹೋಗುತ್ತೀರಾ. ಸ್ತ್ರೀ ಒಂದು ಸಮುದ್ರದಂತೆ ಅದರ ಆಳ ಕಂಡುಹಿಡಿಯಲು ಸಾಧ್ಯವಿಲ್ಲ. ಒಂದು ವೇಳೆ ಸ್ತ್ರೀ ಸುಂದರವಾಗಿದ್ದು ಅರ್ಥಮಾಡಿಕೊಳ್ಳುವವಳಾಗಿದ್ದು, ಒಳ್ಳೆಯ ಗುಣಗಳನ್ನು ಹೊಂದಿದ್ದು ಮತ್ತು ನಿಮ್ಮನ್ನು ಪ್ರೀತಿಸುವವಳಾಗಿದ್ದರೆ ನೀವು ಭೂಮಿಯ ಮೇಲೆ ಸ್ವರ್ಗವನ್ನು ಕಾಣಬಹುದು. ಒಂದು ವೇಳೆ ಸ್ತ್ರೀಗೆ ಅಂದ ಬಿಟ್ಟು ಬೇರೆ ಯಾವುದೆ ಒಳ್ಳೆಯ ಗುಣಗಳಿಲ್ಲದೆ ಇದ್ದರೆ ಅಂತಹ ಮಹಿಳೆ ನಿಮ್ಮನ್ನು, ನಿಮ್ಮ ಕುಟುಂಬವನ್ನು, ನಿಮ್ಮ ಮನೆಯನ್ನು ನಾಶಪಡಿಸಲು ಹಿಂಜರಿಯುವುದಿಲ್ಲ. ಚಾಣಕ್ಯನ ಪ್ರಕಾರ ಒಬ್ಬ ಸ್ತ್ರೀ ಒಬ್ಬ ವ್ಯಕ್ತಿಯೊಂದಿಗೆ ಮೃದುವಾಗಿ, ಪ್ರೀತಿಯಿಂದ ಮಾತನಾಡುತ್ತಾ ಇನ್ನೊಬ್ಬನನ್ನು ಪ್ರೀತಿಸುತ್ತಾಳೆ, ಇನ್ನೊಬ್ಬನ ಬಗ್ಗೆ ಮನಸ್ಸಿನಲ್ಲಿ ಆಲೋಚನೆ ಮಾಡುತ್ತಾಳೆ ಅಂತಹ ಸ್ತ್ರೀಯರ ಮಾನಸಿಕ ಸ್ಥಿತಿ ಅವರ ಜೀವನ ಪೂರ್ತಿ ಹಾಗೆಯೆ ಇರುತ್ತದೆ ಹಾಗೂ ಮದುವೆಯಾದ ನಂತರ ಅವಳು ತನ್ನ ಗಂಡನಿಗೆ ಮೋಸ ಮಾಡುತ್ತಾಳೆ. ಪ್ರೀತಿ ತುಂಬಾ ಪವಿತ್ರವಾದುದು ಅದು ಯಾವಾಗೆಂದರೆ ಒಳ್ಳೆಯ ಹಾಗೂ ಪ್ರಾಮಾಣಿಕ ವ್ಯಕ್ತಿ ಜೀವನ ಸಂಗಾತಿಯಾಗಿ ದೊರೆತಾಗ ಮಾತ್ರ ಅದು ಪುರುಷರಿರಲಿ, ಸ್ತ್ರೀಯರಿರಲಿ.
ಚಾಣಕ್ಯರವರ ಮಾತಿನ ಪ್ರಕಾರ ಸ್ತ್ರೀಯರಿಗೆ ದುಡ್ಡು ಮತ್ತು ಬಂಗಾರದ ಮೇಲೆ ವಿಪರೀತ ಮೋಹವಿರುತ್ತದೆ, ಇದಕ್ಕೋಸ್ಕರ ಬಹಳ ಸ್ತ್ರೀಯರು ಪುರುಷರಿಗೆ ಮೋಸ ಮಾಡಲು ಹಿಂಜರಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಪುರುಷರಿಗೆ ಸಮಾನವಾಗಿ ತಮ್ಮ ಆಸೆಗಳನ್ನು ತೀರಿಸಿಕೊಳ್ಳಲು ಕಷ್ಟಪಟ್ಟು ದುಡಿಯುತ್ತಿದ್ದರೂ ಕೆಲವು ಸ್ತ್ರೀಯರು ದುಡ್ಡು ಮತ್ತು ಬಂಗಾರದ ಆಸೆಗಾಗಿ ಪುರುಷರನ್ನು ಪ್ರೀತಿಸುತ್ತಿದ್ದಾರೆ. ಚಾಣಕ್ಯನ ಪ್ರಕಾರ ಜೀವನದಲ್ಲಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಬಹಳ ಯೋಚಿಸಬೇಕು. ಮದುವೆಯೆನ್ನುವುದು ಜನ್ಮ ಜನ್ಮಗಳ ಬಂಧ ಆಕಸ್ಮಿಕವಾಗಿ ತಪ್ಪಾದ ವ್ಯಕ್ತಿಯೊಂದಿಗೆ ವಿವಾಹವಾದರೆ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ. ಚಾಣಕ್ಯನ ಪ್ರಕಾರ ಮಹಿಳೆಯರು ತಮ್ಮ ಮನಸ್ಸಿನ ಉದ್ವೇಗವನ್ನು ನಿಯಂತ್ರಿಸಿಕೊಳ್ಳುವಲ್ಲಿ ನಿಪುಣರು. ಪುರುಷರಿಗೆ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಹಸಿವು, ನಾಲ್ಕುಪಟ್ಟು ಹೆಚ್ಚು ಗರ್ವ ಹಾಗೂ ಎಂಟರಷ್ಟು ಕಾಮಶಕ್ತಿ ಹೆಚ್ಚಾಗಿರುತ್ತದೆ. ಚಾಣಕ್ಯರವರ ಪ್ರಕಾರ ಮಹಿಳೆಯರನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಾರದು, ಒಂದು ವೇಳೆ ಹಾಗೆ ಮಾಡಿದರೆ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ. ಈ ರೀತಿಯಾಗಿ ಮಹಿಳೆಯರ ಬಗ್ಗೆ ಚಾಣಕ್ಯರು ಬರೆದ ಚಾಣಕ್ಯನೀತಿ ಎಂಬ ಪುಸ್ತಕದಲ್ಲಿ ನೋಡಬಹುದು. ಸ್ತ್ರೀಯರ ಬಗ್ಗೆ ಅವರು ತಮ್ಮ ಪುಸ್ತಕದಲ್ಲಿ ಬರೆದ ಮಾತುಗಳು ಇಂದಿಗೂ ಸಹ ಅಕ್ಷರಶಃ ಸತ್ಯವಾಗಿದೆ. ಸ್ತ್ರೀಯರ ಮನಸ್ಸನ್ನು ಸಾಮಾನ್ಯವಾಗಿ ಮೀನಿನ ಹೆಜ್ಜೆಗೆ ಹೋಲಿಸಲಾಗುತ್ತದೆ ಮೀನಿನ ಹೆಜ್ಜೆಯನ್ನು ಕಂಡುಹಿಡಿಯಲು ಸಾಧ್ಯವೇ ಅದೆ ರೀತಿ ಸ್ತ್ರೀಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.