ನಾವು ಪ್ರತಿದಿನ ಸೇವಿಸುತ್ತಿರುವ ಆಹಾರದಲ್ಲಿ ಕಲಬೆರಕೆ ಸಾಮಾನ್ಯವಾಗಿದೆ. ಮೊದಲಿನ ಕಾಲದಲ್ಲಿ ನೈಸರ್ಗಿಕ ವಿಧಾನದಲ್ಲಿ ತಯಾರಿಸಿದ ಆಹಾರವನ್ನು ಬಳಸಿ ನೂರು ವರ್ಷಗಳವರೆಗೆ ಬದುಕುತ್ತಿದ್ದರು. ಇಂದಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಸಿಗುವ ಆಹಾರ ಮತ್ತು ಹೊಸ ವಿಧಾನಗಳಿಂದ ತಯಾರಿಸಿದ ಆಹಾರವನ್ನು ಬಳಸುವುದರಿಂದ ಖಾಯಿಲೆ ಇಲ್ಲದ ಮನೆಯನ್ನು ಹುಡುಕಲು ಸಾಧ್ಯವಿಲ್ಲ. ಗಾಣದ ಎಣ್ಣೆ ಮತ್ತು ಮಾರ್ಕೆಟ್ ನಲ್ಲಿ ಸಿಗುವ ಎಣ್ಣೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸಕ್ಕರೆಯನ್ನು ತಯಾರಿಸುವುದು ನಮ್ಮ ದೇಶದಲ್ಲಿ ಆದರೂ ಫಸ್ಟ್ ಕ್ವಾಲಿಟಿ ಸಕ್ಕರೆ ನಮ್ಮ ದೇಶದಲ್ಲಿ ವಿತರಣೆಯಾಗುತ್ತಿಲ್ಲ ಬೇರೆ ದೇಶಗಳಿಗೆ ರಫ್ತಾಗುತ್ತದೆ. ಸೆಕೆಂಡ್ ಕ್ವಾಲಿಟಿ ಸಕ್ಕರೆ ಅಂಗಡಿಗಳಿಗೆ ಬರುವುದಿಲ್ಲ ದೊಡ್ಡ ದೊಡ್ಡ ಮಾಲ್ ಗಳಿಗೆ ಹೋಗುತ್ತದೆ. ಥರ್ಡ್ ಕ್ವಾಲಿಟಿ ಸಕ್ಕರೆ ಅಂಗಡಿಗಳಿಗೆ ಬರುತ್ತದೆ, ಲಾಸ್ಟ್ ಕ್ವಾಲಿಟಿ ಸಕ್ಕರೆಯು ರೇಷನ್ ಅಂಗಡಿಗೆ ಹೋಗುತ್ತದೆ. ಸರ್ಕಾರ ಹೇಳುತ್ತದೆ ಸಕ್ಕರೆಯನ್ನು ರೇಷನ್ ನಲ್ಲಿ ಕೊಡುತ್ತೇವೆ ಎಂದು ಆದರೆ ಫಸ್ಟ್ ಕ್ವಾಲಿಟಿ ಸಕ್ಕರೆಯನ್ನು ಕೊಡುವುದಿಲ್ಲ. ಯಾವುದೆ ಎಣ್ಣೆಗೆ 20% ಮಿಕ್ಸ್ ಮಾಡಿಕೊಳ್ಳಬಹುದು ಆದರೆ ಅದು ಯಾವುದರಿಂದ ಮಾಡಿದ ಎಣ್ಣೆಯೊ ಅದರ ಫೋಟೊ ಹಾಕುವಂತಿಲ್ಲ ಎಂದು ಸರ್ಕಾರ ಹೇಳಿದೆ ಆದರೆ ಮಾರುವವರು ಫೋಟೊ ಹಾಕುತ್ತಾರೆ. ಪ್ಯಾಕೆಟ್ ಹಿಂದೆ ಏನನ್ನು, ಎಷ್ಟು ಮಿಕ್ಸ್ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಕೊಟ್ಟಿರುತ್ತಾರೆ. ಬಹಳ ವರ್ಷಗಳ ಹಿಂದೆ ಅರಬ್ ಕಂಟ್ರಿಗಳು ಪೆಟ್ರೋಲ್ ತೈಲಗಳನ್ನು ಆಮದು ಮಾಡಿಕೊಳ್ಳುವಾಗ ವೇಸ್ಟೇಜ್ ತೆಗೆದುಕೊಂಡರೆ ಮಾತ್ರ ಆಮದು ಮಾಡಿಕೊಳ್ಳಬಹುದು ಎಂಬ ಷರತ್ತು ಹಾಕಿದರು. ಆದ್ದರಿಂದ ಬೇರೆ ದಾರಿಯಿಲ್ಲದೆ ಆಮದು ಮಾಡಿಕೊಂಡು ವೇಸ್ಟೇಜ್ ಅನ್ನು ಪ್ಯೂರಿಫೈ ಮಾಡುತ್ತಿದ್ದರು. ಪ್ಯೂರಿಫೈ ಆದಂತಹ ಆಯಿಲ್ ನಲ್ಲಿ ಕರಿಯಬಹುದು ಎಂದು ತಿಳಿಯುತ್ತದೆ. ಈ ಆಯಿಲನ್ನು ಕೆಲವು ಕಂಪನಿಗಳು ಮಾರ್ಕೆಟಿಂಗ್ ಮಾಡಿದರು. ಒಂದು ಲೀಟರ್ ಗೆ 140 ರೂಪಾಯಿ ಬೆಲೆ ಇಟ್ಟರೂ ಅವರಿಗೆ ಲಾಭವಾಗುತ್ತದೆ. ವಿಡಿಯೋ ಕೃಪೆ: indian money
ಮಾರ್ಕೆಟ್ ನಲ್ಲಿ ಖರೀದಿಸುವ ಎಣ್ಣೆಯಲ್ಲಿ ಒಂದು ಬಾರಿ ಮಾತ್ರ ಕರಿಯಬಹುದು. ಕಡಲೆಕಾಯಿ ಎಣ್ಣೆ ಮಾಡುವುದು ಕಷ್ಟ ಕಡಲೆಕಾಯಿಯಲ್ಲಿ 70% ಬೀಜ ಬರುತ್ತದೆ ಎಣ್ಣೆ ಕಡಿಮೆ ಪ್ರಮಾಣದಲ್ಲಿರುತ್ತದೆ. ಗಾಣದಲ್ಲಿ ತಯಾರಿಸಿದ ಎಣ್ಣೆಯಲ್ಲಿ ಹತ್ತು ಬಾರಿ ಫ್ರೈ ಮಾಡಬಹುದು. ಗಾಣದಲ್ಲಿ ಎಣ್ಣೆಯನ್ನು 30 ಡಿಗ್ರಿ ಸೆಲ್ಸಿಯಸ್ ಹೀಟ್ ನಲ್ಲಿ ತಯಾರಿಸುತ್ತಾರೆ ಆದರೆ ಮಾರ್ಕೆಟ್ ನಲ್ಲಿ ಸಿಗುವ ಎಣ್ಣೆಯನ್ನು 300 ಡಿಗ್ರಿ ಸೆಲ್ಸಿಯಸ್ ಹೀಟ್ ನಲ್ಲಿ ತಯಾರಿಸಲಾಗುತ್ತದೆ. ಆದ್ದರಿಂದ ಗಾಣದ ಎಣ್ಣೆಯಲ್ಲಿ ಹತ್ತು ಬಾರಿ ಫ್ರೈ ಮಾಡಬಹುದು, ಮಾರ್ಕೆಟ್ ನಲ್ಲಿ ಸಿಗುವ ಎಣ್ಣೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಫ್ರೈ ಮಾಡಲು ಬರುವುದಿಲ್ಲ. ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ತಯಾರಿಸಲು 270 ರೂಪಾಯಿ ಖರ್ಚಾಗುತ್ತದೆ. ನಮ್ಮ ದೇಶದಲ್ಲಿ 23 ಮಿಲಿಯನ್ ಟನ್ ನಷ್ಟು ಎಣ್ಣೆಯನ್ನು ಬಳಕೆ ಮಾಡುತ್ತೇವೆ. 15 ಮಿಲಿಯನ್ ಟನ್ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತೇವೆ. ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ಬಿಟ್ಟು ರೈತರು ಬೆಳೆದಂತಹ ಎಣ್ಣೆಕಾಳುಗಳ ಎಣ್ಣೆಯನ್ನು ಬಳಸಿದರೆ ರೈತರಿಗೆ ಲಾಭವಾಗುತ್ತದೆ ಮತ್ತು ಶುದ್ಧ ಎಣ್ಣೆಯ ಬಳಕೆ ಸಾಧ್ಯವಾಗುತ್ತದೆ. ಗಾಣದಿಂದ ಎಣ್ಣೆ ತಯಾರಿಸುವುದಾದರೆ ಯಾವುದೆ ಎಣ್ಣೆ ಕಾಳುಗಳನ್ನು ಬಳಸಿದರು ಎಳೆಯ ಬೀಜಗಳನ್ನು ಬಳಸಬಾರದು ಬೆಳೆದಿರುವ ಬೀಜಗಳನ್ನು ಬಳಸಬೇಕು.
ಮೊದಲೆಲ್ಲ ಕಡಿಮೆ ಜನರಿಗೆ ಬಿಪಿ, ಶುಗರ್ ಇರುತಿತ್ತು, ಈಗ ಬಿಪಿ, ಶುಗರ್ ಇಲ್ಲದೆ ಇರುವ ಮನೆಯನ್ನು ಹುಡುಕಲು ಸಾಧ್ಯವಿಲ್ಲ. ಇದಕ್ಕೆಲ್ಲ ಕಾರಣ ಅಶುದ್ಧ ಎಣ್ಣೆ, ಸೋಡಿಯಂ ಹಾಕಿದ ಉಪ್ಪು ಇತ್ಯಾದಿ. ಕ್ಯಾನ್ಸರ್ ರೋಗ ಹೆಚ್ಚಾಗಿ ಕಾಣಿಸಿಕೊಂಡಾಗ ಎಣ್ಣೆಯಲ್ಲಿ ಕಲಬೆರಕೆ ಇದೆ ಎಂದು ಮೀಡಿಯಾದವರು ಹೇಳುತ್ತಿದ್ದರು ನಂತರ ಅದೆ ಮೀಡಿಯಾದವರು ಎಣ್ಣೆಯ ಕುರಿತು ಜಾಹೀರಾತು ಮಾಡುತ್ತಿದ್ದರು. ಕೇರಳ ರಾಜ್ಯದಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವವರು ಕಡಿಮೆ ಇದಕ್ಕೆ ಕಾರಣ ಅಲ್ಲಿಯ ಜನ ಮೊದಲಿನಿಂದಲೂ ಕೋಕೋನಟ್ ಆಯಿಲ್ ಬಿಟ್ಟು ಬೇರೆ ಎಣ್ಣೆಯನ್ನು ಬಳಸುವುದಿಲ್ಲ. ಗಾಣದ ಎಣ್ಣೆಯನ್ನು ತಯಾರಿಸಿದಾಗ ಹಿಂಡಿ ಸಿಗುತ್ತದೆ ಹಲವಾರು ಕಡೆ ಹಿಂಡಿಯನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಾರೆ. ಗಾಣದಿಂದ ತಯಾರಿಸಿದ ಎಣ್ಣೆಯನ್ನು ಆರು ತಿಂಗಳವರೆಗೆ ಸ್ಟೋರ್ ಮಾಡಬಹುದು ನಂತರ ಒಂದು ಸ್ಟೀಲ್ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಲಿನಲ್ಲಿ ಇಟ್ಟು ಮತ್ತೆ ಮೂರು ತಿಂಗಳು ಸ್ಟೋರ್ ಮಾಡಬಹುದು.