ಕೆಲವು ಸಿನಿಮಾ ನಟಿಯರು ಸಮಾಜ ಸೇವೆ ಕೆಲಸಗಳಲ್ಲಿ ತೊಡಗುತ್ತಾರೆ. ಅದರಂತೆ ನಟಿ ಸಮಂತಾ ಅವರು ಆಟೊ ಓಡಿಸುತ್ತಿರುವ ಬಡ ಮಹಿಳೆಗೆ ಕಾರನ್ನು ಕೊಡಿಸಿದ್ದಾರೆ. ಸಮಂತಾ ಅವರು ತಾವು ಉಡುಗೊರೆಯಾಗಿ ಕಾರನ್ನು ಕೊಟ್ಟಿರುವ ವಿಷಯವನ್ನು ಎಲ್ಲೂ ಹೇಳಿಕೊಂಡಿಲ್ಲ ಇದು ಅವರ ವಿಶೇಷವಾಗಿದೆ. ಹಾಗಾದರೆ ಸಮಂತಾ ಅವರ ಉಡುಗೊರೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಆಂಧ್ರಪ್ರದೇಶದಲ್ಲಿ ಕವಿತಾ ಎನ್ನುವವರು ಏಳು ಜನ ಸಹೋದರಿಯರೊಂದಿಗೆ ವಾಸಿಸುತ್ತಿದ್ದಾರೆ, ಕುಟುಂಬ ನಿರ್ವಹಣೆಗಾಗಿ ಹಗಲು ರಾತ್ರಿಯೆನ್ನದೆ ಆಟೊ ಚಾಲನೆ ಮಾಡುತ್ತಾರೆ ಆದರೆ ಅವರ ಆದಾಯ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ಈ ವಿಷಯ ತಿಳಿದ ನಟಿ ಸಮಂತಾ ಅವರು ಕವಿತಾರವರಿಗೆ ಕಾರು ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಹೊಸ ಮಾರುತಿ ಡಿಜೈರ್ ಟೂರ್ ಕಾರನ್ನು ಖರೀದಿಸಿ ಅದನ್ನು ಕವಿತಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಮಂತಾ ಅವರು ಆಟೊ ಡ್ರೈವರ್ ಕವಿತಾರವರಿಗೆ 7.50 ಲಕ್ಷದ ಮಾರುತಿ ಡಿಜೈರ್ ಟೂರ್ ಕಾರನ್ನು ನೀಡಿದ್ದಾರೆ. ಈಗ ಹೊಸ ತಲೆಮಾರಿನ ಡಿಜೈರ್ ಕಾರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಹಳೆಯ ತಲೆಮಾರಿನ ಡಿಜೈರ್ ಟೂರ್ ಕಾರ್ ಅನ್ನು ಹೆಚ್ಚಾಗಿ ಕ್ಯಾಬ್ ಗಳಲ್ಲಿ ಬಳಸಲಾಗುತ್ತದೆ. ಆಟೊ ಡ್ರೈವರ್ ಕವಿತಾ ಈ ಕಾರಿನ ಮೂಲಕ ತಮ್ಮದೆ ಆದ ಕ್ಯಾಬ್ ಸೇವೆಯನ್ನು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದಿದೆ.
ಸಮಂತಾ ಅವರು ಕವಿತಾ ಅವರಿಗೆ ಡಿಜೈರ್ ಟೂರ್ ಕಾರ್ ಅನ್ನು ನೀಡಿರುವ ಬಗ್ಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿತ್ತು. ಸಂಬಂಧಪಟ್ಟ ಮಾರುತಿ ಸುಜುಕಿ ಡೀಲರ್ ಅವರು ಈ ಸುದ್ದಿ ನಿಜವೆಂದು ದೃಢಪಡಿಸಿದ್ದಾರೆ. ಜೊತೆಗೆ ಆಟೊ ಡ್ರೈವರ್ ಕವಿತಾರವರಿಗೆ ಮಾರುತಿ ಡಿಜೈರ್ ಟೂರ್ ಕಾರ್ ಅನ್ನು ವಿತರಿಸುತ್ತಿರುವ ಚಿತ್ರವನ್ನು ಅವರು ಶೇರ್ ಮಾಡಿದ್ದಾರೆ. ಕೆಲವು ಚಿತ್ರ ತಾರೆಯರು ತಾವು ನೆರವು ನೀಡಿದರೆ ಅವುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ, ಇದರಿಂದ ಹೆಚ್ಚಿನ ಫೇಮಸ್ ಆಗಲು ಬಯಸುತ್ತಾರೆ ಆದರೆ ನಟಿ ಸಮಂತಾ ತಾವು ಮಹಿಳೆಗೆ ಕಾರ್ ಅನ್ನು ಉಡುಗೊರೆಯಾಗಿ ನೀಡಿರುವ ವಿಷಯವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆಟೋ ಡ್ರೈವರ್ ಕವಿತಾರವರಿಗೆ ನೀಡಲಾಗಿರುವ ಮಾರುತಿ ಡಿಜೈರ್ ಟೂರ್ ಕಾರು ಹಲವಾರು ವಿಶೇಷ ಫ್ಯೂಚರ್ ಗಳನ್ನು ಹೊಂದಿದೆ. ಈ ಕಾರಿನಲ್ಲಿ ಎಸಿ ಸಿಸ್ಟಂ, ಪವರ್ ವಿಂಡೋ ಹೊಂದಿರುವ ಫ್ರಂಟ್ ಡೋರ್, ಸೆಂಟ್ರಲ್ ಲಾಕಿಂಗ್ ಸಿಸ್ಟಂ, ರಿಮೋಟ್ ಕೀ ಲೆಸ್ ಎಂಟ್ರಿ ಸೇರಿದಂತೆ ಹಲವಾರು ಫ್ಯೂಚರ್ ಗಳನ್ನು ನೀಡಲಾಗಿದೆ ಅಲ್ಲದೆ ಈ ಕಾರಿನಲ್ಲಿ ರೇರ್ ಪಾರ್ಕಿಂಗ್ ಸೆನ್ಸಾರ್, ಚಾಲಕನಿಗೆ ಏರ್‌ಬ್ಯಾಗ್, ಎಬಿಎಸ್ ಬ್ರೇಕಿಂಗ್ ಸಿಸ್ಟಂಗಳನ್ನು ಸಹ ನೋಡಬಹುದು. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 82 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಈ ಕಾರು ಪೆಟ್ರೋಲ್ ಎಂಜಿನ್ ಮಾತ್ರವಲ್ಲದೆ ಸಿಎನ್‌ಜಿಯೊಂದಿಗೂ ಲಭ್ಯವಿದೆ. ಎಲ್ಲರಿಗೂ ಸಮಂತಾ ಅವರ ಗುಣ ಇರುವುದಿಲ್ಲ, ಅವರ ಈ ಕೆಲಸ ಶ್ಲಾಘನೀಯವಾಗಿದೆ.