ಕನ್ನಡ ಕಿರುತೆರೆಯಲ್ಲಿ ವಿನೂತನ ಧಾರಾವಾಹಿಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ ಮನರಂಜನಾ ವಾಹಿನಿಯಲ್ಲಿ ಇತ್ತೀಚೆಗೆ ಆರಂಭವಾದ ಧಾರಾವಾಹಿ ‘ಸತ್ಯ’ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದರಲ್ಲಿ ಸತ್ಯ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಸತ್ಯ ಪಾತ್ರದಲ್ಲಿ ನಟಿ ಗೌತಮಿ ಜಾಧವ್ ಅವರು ಕಾಣಿಸಿಕೊಂಡಿದ್ದಾರೆ. ತೆರೆ ಮೇಲೆ ಅವರನ್ನು ಸತ್ಯ ಪಾತ್ರದ ಗೆಟಪ್‌ನಲ್ಲಿ ನೋಡೋದಕ್ಕೂ ತೆರೆ ಹಿಂದೆ ನೋಡೋದಕ್ಕೂ ತುಂಬ ವ್ಯತ್ಯಾಸವಿದೆ. ಆದರೆ ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ‘ಸತ್ಯ’ ಧಾರಾವಾಹಿಯ ಸತ್ಯ ಪಾತ್ರವು ಎಲ್ಲ ದಿಟ್ಟ ಹೆಣ್ಣು ಮಗಳ ಪ್ರತಿನಿಧಿಯಂತೆ ಕಾಣಿಸಿಕೊಂಡಿದೆ.

ಜೀ ಕನ್ನಡ ವಾಹಿನಿಯ ಸತ್ಯ ಧಾರಾವಾಹಿಯ ನಟಿ ಗೌತಮಿ ಜಾಧವ್​ ಅವರು ನಿಜ ಜೀವನದ ಸತ್ಯ ಪಾತ್ರಗಳನ್ನು ಭೇಟಿ ಮಾಡಿದ್ದಾರೆ. ಅಂದರೆ ಮಹಿಳಾ ದಿನಾಚರಣೆ ಪ್ರಯುಕ್ತ ಈ ಒಂದು ವಿನೂತನ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿಜ ಜೀವನದ ಸತ್ಯನ ರೀತಿ ಇರುವ ಮಹಿಳೆಯರನ್ನು ಭೇಟಿ ಆಗುವ ಮೂಲಕ ನಟಿ ಗೌತಮಿ ಜಾಧವ್ ವಿನೂತನ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದರು. ಸತ್ಯ ಧಾರಾವಾಹಿ ಪ್ರಾರಂಭವಾದ ದಿನದಿಂದಲೂ ಮಹಿಳೆಯರನ್ನು ಅಪಾರವಾಗಿ ಸೆಳೆದಿದೆ. ಸತ್ಯ ಪಾತ್ರವು ಎಲ್ಲ ಮಹಿಳೆಯರಿಗೂ ಸ್ಫೂರ್ತಿ ತುಂಬಿದೆ. ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಸತ್ಯ ಕೂಡ ಒಂದು. ಇತ್ತೀಚೆಗೆ ಪ್ರಸಾರ ಆರಂಭಿಸಿದ ಈ ಸೀರಿಯಲ್​ ಮೊದಲು ನಂಬರ್ ಒನ್ ಸ್ಥಾನದಲ್ಲಿ ಇದ್ದಿದ್ದ ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ಧಾರಾವಾಹಿಗಳನ್ನು ಹಿಂದಕ್ಕಿಕ್ಕಿ ಟಿಆರ್​ಪಿಯಲ್ಲೂ ಸಖತ್​ ಪೈಪೋಟಿ ನೀಡುತ್ತಿದೆ.

ಗೌತಮಿ ಅವರಿಗೆ ಮದುವೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಕಾಸರಗೋಡು ಅವರನ್ನು ಗೌತಮಿ ವರಿಸಿದ್ದಾರೆ. ಆಪರೇಶನ್ ಅಲಮೇಲಮ್ಮ, ಮಾಯಾಬಜಾರ್, ಅನಂತು v/s ನುಸ್ರತ್ ಮುಂತಾದ ಸಿನಿಮಾಗಳಲ್ಲಿ ಅಭಿಷೇಕ್ ಕೆಲಸ ಮಾಡಿದ್ದಾರೆ. ಇನ್ನು ಅಭಿಷೇಕ್ ಕೈಯಲ್ಲಿ ಕೆಲ ಸಿನಿಮಾಗಳಿದ್ದು ಅವುಗಳ ಶೂಟಿಂಗ್ ಇನ್ನೇನು ಶುರು ಆಗಬೇಕಿದೆ. 2012ರಲ್ಲಿ ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಒಂದು ಪ್ರಖ್ಯಾತ ಧಾರಾವಾಹಿ ನಾಗಪಂಚಮಿಯಲ್ಲಿ ಗೌತಮಿ ನಟಿಸಿದ್ದರು. ಲೂಟಿ, ಆದ್ಯಾ, ಕಿನಾರೆ ಹಾಗೂ ತಮಿಳಿನ ಸಿನಿಮಾವೊಂದರಲ್ಲಿ ಕೂಡಾ ಅವರು ನಟಿಸಿದ್ದರು. ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಳ್ಳಲು ಗೌತಮಿ ಒಂದು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದರು. ಸತ್ಯ ಪಾತ್ರಕ್ಕಾಗಿ ಗೌತಮಿ ಗಾಡಿ ಓಡಿಸುವುದನ್ನು ಕೂಡ ಕಲಿತಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಪ್ಯಾಂಟ್ ಶರ್ಟ್ ಧರಿಸಿ ಪಕ್ಕಾ ಮಾಸ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುವ ಗೌತಮಿಗೆ ಮೇಕಪ್ ಅಂದರೆ ಬಹಳವೇ ಇಷ್ಟವಂತೆ. ಮೇಕಪ್ ಅಂದ್ರೆ ಬಹಳ ಇಷ್ಟ ಎನ್ನುವ ಗೌತಮಿ ಅವರು ಪ್ರಸಿದ್ಧ ಮೇಕಪ್ ಆರ್ಟಿಸ್ಟ್ ಶ್ವೇತಾ ಸುಧಿರ್ ಎಂಬವರ ಬಳಿ ಬಹಳ ಸುಂದರವಾಗಿ ಮೇಕಪ್ ಮಾಡಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ ಆ ಕೆಲವು ಫೋಟೋಗಳನ್ನು ಇಲ್ಲಿ ಕಾಣಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!